ಗ್ರೀನ್‌ ಕಾರ್ಡ್‌ ಬದಲು ಪರ್ಯಾಯ ಉದ್ಯೋಗ ಕಾರ್ಡ್‌: ಅಮೆರಿಕ ಘೋಷಣೆ

KannadaprabhaNewsNetwork | Published : Oct 15, 2023 12:45 AM

ಸಾರಾಂಶ

ಲಕ್ಷಾಂತರ ಭಾರತೀಯರಿಗೆ ಅನುಕೂಲವಾಗುವ ಸಾಧ್ಯತೆ, 5 ವರ್ಷಗಳ ಅವಧಿ ಹೊಂದಿರುವ ಉದ್ಯೋಗ ಪರವಾನಗಿ ಚೀಟಿ, ಗ್ರೀನ್‌ ಕಾರ್ಡ್‌ಗಾಗಿ ದೀರ್ಘ ಕಾಯುವಿಕೆ ತಪ್ಪಿಸಲು ಈ ಕ್ರಮ, ಗ್ರೀನ್‌ ಕಾರ್ಡ್‌ ಬಯಸಿದ್ದ ಭಾರತೀಯರ ಸಂಖ್ಯೆ 11 ಲಕ್ಷ.
ಲಕ್ಷಾಂತರ ಭಾರತೀಯರಿಗೆ ಅನುಕೂಲವಾಗುವ ಸಾಧ್ಯತೆ, 5 ವರ್ಷಗಳ ಅವಧಿ ಹೊಂದಿರುವ ಉದ್ಯೋಗ ಪರವಾನಗಿ ಚೀಟಿ, ಗ್ರೀನ್‌ ಕಾರ್ಡ್‌ಗಾಗಿ ದೀರ್ಘ ಕಾಯುವಿಕೆ ತಪ್ಪಿಸಲು ಈ ಕ್ರಮ, ಗ್ರೀನ್‌ ಕಾರ್ಡ್‌ ಬಯಸಿದ್ದ ಭಾರತೀಯರ ಸಂಖ್ಯೆ 11 ಲಕ್ಷ. ವಾಷಿಂಗ್ಟನ್‌: ಅಮೆರಿಕದ ಕಾಯಂ ನಿವಾಸಿ ಅಥವಾ ನಾಗರಿಕನಾಗಲು ನೀಡಲಾಗುತ್ತಿದ್ದ ಗ್ರೀನ್‌ ಕಾರ್ಡ್‌ಗೆ ಅನೇಕ ವರ್ಷಗಳಿಂದ ಕಾಯುತ್ತಿದ್ದ ಲಕ್ಷಾಂತರ ಭಾರತೀಯರಿಗೆ ಸಿಹಿ ಸುದ್ದಿ. ಈಗ ಗ್ರೀನ್‌ ಕಾರ್ಡ್‌ ಬದಲಾಗಿ 5 ವರ್ಷಗಳ ಕಾಲ ಅಮೆರಿಕದಲ್ಲಿ ನೌಕರಿ ಮಾಡಲು ಅವಕಾಶ ನೀಡುವ ಉದ್ಯೋಗ ಪರವಾನಗಿ ಚೀಟಿಯನ್ನು (ಎಎಡಿ) ವಿತರಿಸಲು ಅಮೆರಿಕ ನಾಗರಿಕ ಮತ್ತು ವಲಸೆ ಸೇವಾ ಇಲಾಖೆ ನಿರ್ಧರಿಸಿದೆ. ಈ ಚೀಟಿಯು 5 ವರ್ಷಗಳ ಅವಧಿಯ ಮಾನ್ಯತೆ ಹೊಂದಿರಲಿದ್ದು, ಅಲ್ಲಿ ಕೆಲಸ ಮಾಡಲು ಅಧಿಕಾರವನ್ನು ನೀಡಲಿದೆ. ಅದರ ನಂತರ ಮತ್ತೆ ಈ ಚೀಟಿಯನ್ನು ನವೀಕರಣ ಮಾಡಿಕೊಳ್ಳಬಹುದಾಗಿದೆ. ಈ ಉಪಕ್ರಮದ ಮೂಲಕ ಗ್ರೀನ್‌ ಕಾರ್ಡ್‌ಗಾಗಿ ಕಾಯುವವರ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಲು ಅಮೆರಿಕ ಸರ್ಕಾರ ಮುಂದಾಗಿದೆ. ಈ ಮೂಲಕ ಭಾರತದಿಂದ ಗ್ರೀನ್‌ ಕಾರ್ಡ್‌ಗಾಗಿ ಕಾಯುತ್ತಿರುವ ಸುಮಾರು 11 ಲಕ್ಷ ಮಂದಿಗೆ ಇದು ಅನುಕೂಲವಾಗಬಹುದು ಎನ್ನಲಾಗಿದೆ. ಈ ಆಕಾಂಕ್ಷಿಗಳಿಗೆ ಒಂದೊಮ್ಮೆ ಮುಂದೆ ಮತ್ತೆ ಗ್ರೀನ್‌ ಕಾರ್ಡ್‌ ನೀಡಿದರೆ ಆ ಸೌಲಭ್ಯವನ್ನೂ ಪಡೆಯಬಹುದಾಗಿದೆ.

Share this article