ಕಮಲಾ ಹ್ಯಾರಿಸ್‌ ಪಕ್ಷದ ಪರ ಭಾರತೀಯರ ಒಲವು ಇಳಿಕೆ, ಟ್ರಂಪ್‌ ರಿಪಬ್ಲಿಕನ್‌ ಪಕ್ಷದ ಪರ ಏರಿಕೆ

KannadaprabhaNewsNetwork |  
Published : Oct 29, 2024, 12:51 AM ISTUpdated : Oct 29, 2024, 03:54 AM IST
ಕಮಲಾ,  ಹ್ಯಾರಿಸ್‌ | Kannada Prabha

ಸಾರಾಂಶ

ಕಮಲಾ ಹ್ಯಾರಿಸ್‌ ಅವರನ್ನು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿರುವ ಅಮೆರಿಕದ ಡೆಮಾಕ್ರೆಟ್‌ ಪಕ್ಷದ ಪರ ಭಾರತೀಯರ ಒಲವು ಇಳಿಕೆಯಾಗಿರುವುದು ಕಂಡುಬಂದಿದೆ.

ವಾಷಿಂಗ್ಟನ್‌: ಕಮಲಾ ಹ್ಯಾರಿಸ್‌ ಅವರನ್ನು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿರುವ ಅಮೆರಿಕದ ಡೆಮಾಕ್ರೆಟ್‌ ಪಕ್ಷದ ಪರ ಭಾರತೀಯರ ಒಲವು ಇಳಿಕೆಯಾಗಿರುವುದು ಕಂಡುಬಂದಿದೆ. ಮತ್ತೊಂದೆಡೆ ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷದ ಪರವಾಗಿ ಒಲವು ಹೆಚ್ಚಾಗಿದೆ. ಆದರೂ ಒಟ್ಟಾರೆ ಬಹುತೇಕ ಭಾರತೀಯರು ಕಮಲಾ ಹ್ಯಾರಿಸ್ ಪರ ಮತ ಚಲಾಯಿಸುವುದಾಗಿ ಹೇಳಿದ್ದಾರೆ.

ಇತ್ತೀಚೆಗೆ ಭಾರತೀಯರ ಅಮೆರಿಕರನ್ನು ಗುರಿಯಾಗಿಸಿ ನಡೆಸಿದ ಅನ್‌ಲೈನ್‌ ಸಮೀಕ್ಷೆಯೊಂದರ ವೇಳೆ ಶೇ.61ರಷ್ಟು ಅಮೆರಿಕನ್‌ ಭಾರತೀಯರು ಡೆಮಾಕ್ರೆಟ್‌ ಪಕ್ಷದ ಪರ ಮತ್ತು ಶೇ.32ರಷ್ಟು ಜನರು ರಿಪಬ್ಲಿಕನ್‌ ಪಕ್ಷದ ಪರ ಒಲವು ತೋರಿದ್ದಾರೆ. ಆದರೆ 2020ರ ಅಮೆರಿಕನ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳ ಕಡೆಗೆ ಭಾರತೀಯರು ಚಲಾಯಿಸಿದ್ದ ಮತಗಳನ್ನು ಗಮನಿಸಿದರೆ, ಈ ಬಾರಿ ಕಮಲಾ ಪಕ್ಷದ ಪರ ಒಲವು ಸ್ವಲ್ಪ ಇಳಿದಿದ್ದು, ಟ್ರಂಪ್‌ ಪರ ಸ್ವಲ್ಪ ಏರಿದ್ದು ಕಂಡುಬಂದಿದ ಎಂದು ಸಮೀಕ್ಷೆ ಹೇಳಿದೆ. ಅಮೆರಿಕದಲ್ಲಿ ಭಾರತ ಮೂಲದ 52 ಲಕ್ಷ ಜನ ವಾಸವಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಭಾರತೀಯ ಹಡಗಿನ ಮೇಲೆ ಇರಾನ್ ಆಕ್ರಮಣ : 20 ನಾವಿಕರ ರಕ್ಷಣೆ
ಗೂಗಲ್‌, ಮೈಕ್ರೋಸಾಫ್ಟ್‌ ನಮ್ಮ ಮುಂದಿನ ದಾಳಿ ಗುರಿ : ಇರಾನ್‌!