ಮೆಕ್ಸಿಕೋ ವ್ಯಕ್ತಿ ಹಕ್ಕಿಜ್ವರಕ್ಕೆ ಬಲಿ : ವಿಶ್ವದಲ್ಲೇ ಇಂಥ ಪ್ರಕರಣ ಫಸ್ಟ್‌

KannadaprabhaNewsNetwork |  
Published : Jun 07, 2024, 12:30 AM ISTUpdated : Jun 07, 2024, 04:15 AM IST
ಹಕ್ಕಿಜ್ವರ | Kannada Prabha

ಸಾರಾಂಶ

ನಗರದಲ್ಲಿ ಕಳೆದ ತಿಂಗಳು ಸಾವನ್ನಪ್ಪಿದ ವ್ಯಕ್ತಿಯೊಬ್ಬರಿಗೆ ಹಕ್ಕಿಜ್ವರದ ಸೋಂಕು ತಗುಲಿರುವುದು ದೃಢಪಟ್ಟಿದ್ದು, ವಿಶ್ವದಲ್ಲೇ ಹಕ್ಕಿಜ್ವರ ಸೋಂಕಿನಿಂದಾಗಿ ಮೊದಲ ವ್ಯಕ್ತಿ ಸಾವನ್ನಪ್ಪಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ.

ಮೆಕ್ಸಿಕೊ ಸಿಟಿ: ನಗರದಲ್ಲಿ ಕಳೆದ ತಿಂಗಳು ಸಾವನ್ನಪ್ಪಿದ ವ್ಯಕ್ತಿಯೊಬ್ಬರಿಗೆ ಹಕ್ಕಿಜ್ವರದ ಸೋಂಕು ತಗುಲಿರುವುದು ದೃಢಪಟ್ಟಿದ್ದು, ವಿಶ್ವದಲ್ಲೇ ಹಕ್ಕಿಜ್ವರ ಸೋಂಕಿನಿಂದಾಗಿ ಮೊದಲ ವ್ಯಕ್ತಿ ಸಾವನ್ನಪ್ಪಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ.

59 ವರ್ಷದ ವ್ಯಕ್ತಿಯೊಬ್ಬರು ಏಪ್ರಿಲ್‌ನಲ್ಲಿ ಉಸಿರಾಟದ ತೊಂದರೆ, ಅತಿಸಾರ, ವಾಕರಿಕೆ, ಮೂತ್ರಪಿಂಡದ ಖಾಯಿಲೆ, ಎರಡನೇ ಹಂತದ ಡಯಾಬಿಟೀಸ್‌ ಹಾಗೂ ಇತರ ರೋಗಗಳೂ ಇತ್ತು ಎಂದು ಆಸ್ಪತ್ರೆಗೆ ದಾಖಲಾದರು. ಅದರ ಜೊತೆಗೆ ರಾಜ್ಯದ ಕೋಳಿಫಾರಂನಲ್ಲಿ ಕೆಲಸ ಮಾಡಿದ ಕಾರಣ ಹಕ್ಕಿಜ್ವರ ಇರುವುದು ದೃಢಪಟ್ಟಿತ್ತು. ಈ ರೀತಿಯಲ್ಲಿ ಎಲ್ಲ ರೋಗಗಳೂ ಉಲ್ಬಣಗೊಂಡು ಸಾವನ್ನಪ್ಪಿದ್ದಾರೆಯೇ ಹೊರತು ಹಕ್ಕಿಜ್ವರ ಒಂದರಿಂದಲೇ ಸತ್ತಿದ್ದಾರೆ ಎಂದು ದೃಢವಾಗಿ ಹೇಳಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಸೋಂಕು ಹರಡಿಲ್ಲ: ಹಕ್ಕಿಜ್ವರದ ಸೋಂಕು ಇತರರಿಗೆ ಹರಡಿರಬಹುದೇ ಎಂಬುದನ್ನು ಅವರ ನಿಕಟವರ್ತಿಗಳಲ್ಲಿ ಪರೀಕ್ಷಿಸಿದಾಗ ಎಲ್ಲರಲ್ಲೂ ನಕಾರಾತ್ಮಕ ಫಲಿತಾಂಶ ಬಂದಿದ್ದು, ಈ ಮೂಲಕ ಹಕ್ಕಿಜ್ವರ ಅಷ್ಟು ಸುಲಭವಾಗಿ ಹರಡುವುದಿಲ್ಲ ಎಂದೂ ದೃಢಪಟ್ಟಿದೆ ಎಂದು ವರದಿ ತಿಳಿಸಿದೆ. ಜೊತೆಗೆ ಹಕ್ಕಿಜ್ವರವು ಇತ್ತೀಚೆಗೆ ಪಕ್ಷಿ ಸಂಕುಲಕ್ಕಿಂತ ಸಸ್ತನಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂಬುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಬಾಂಗ್ಲಾದ ಸಂಭಾವ್ಯ ಪ್ರಧಾನಿ ರಹಮಾನ್‌ ತವರಿಗೆ ವಾಪಸ್‌
ಚೀನಾದಲ್ಲಿ 1 ಮಗು ನೀತಿಯ ಜನನಿ ಪೆಂಗ್‌ ಪೆಯುನ್‌ ನಿಧನ