ಸಾರಾಂಶ
ನಟ ಚಿಕ್ಕಣ್ಣ ಅವರು ಪಾವನಾ ಎಂಬುವವರನ್ನು ಕೈ ಹಿಡಿಯಲಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಸಾವಿತ್ರಮ್ಮ ಹಾಗೂ ನಾಗರಾಜು ದಂಪತಿಯ ಪುತ್ರಿ ಆಗಿರುವ ಪಾವನಾ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.
ಬೆಂಗಳೂರು: ನಟ ಚಿಕ್ಕಣ್ಣ ಅವರು ಪಾವನಾ ಎಂಬುವವರನ್ನು ಕೈ ಹಿಡಿಯಲಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಸಾವಿತ್ರಮ್ಮ ಹಾಗೂ ನಾಗರಾಜು ದಂಪತಿಯ ಪುತ್ರಿ ಆಗಿರುವ ಪಾವನಾ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.
ಭಾನುವಾರ ಉಕ್ಕಡ ಗ್ರಾಮದಲ್ಲಿ ನಡೆದ ಪಾವನಾ ಸಂಬಂಧಿಕರೊಬ್ಬರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಚಿಕ್ಕಣ್ಣ ಹಾಗೂ ಪಾವನಾ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ. ಸದ್ಯಕ್ಕೆ ಎರಡೂ ಕುಟುಂಬಗಳಲ್ಲಿ ಮದುವೆ ಮಾತುಕತೆ ನಡೆದಿದ್ದು, ಸದ್ಯದಲ್ಲೇ ನಿಶ್ಚಿತಾರ್ಥ ಆಯೋಜಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.