ರಾಜಧಾನಿಯಲ್ಲಿ ಕಳ್ಳತನದಲ್ಲಿ ತೊಡಗಿದ್ದ 15 ಮಂದಿ ಪ್ರತ್ಯೇಕ ಪ್ರಕರಣಗಳಲ್ಲಿ ಬಂಧನ : 107 ಬೈಕ್‌ ಜಪ್ತಿ

KannadaprabhaNewsNetwork |  
Published : Jan 16, 2025, 01:31 AM ISTUpdated : Jan 16, 2025, 04:23 AM IST
Cheapest Mileage Bikes

ಸಾರಾಂಶ

ರಾಜಧಾನಿಯಲ್ಲಿ ವಾಹನ ಕಳ್ಳತನದಲ್ಲಿ ತೊಡಗಿದ್ದ 15 ಮಂದಿಯನ್ನು ಪ್ರತ್ಯೇಕ ಪ್ರಕರಣಗಳಲ್ಲಿ ನಗರದ ಎಂಟು ಠಾಣೆಗಳ ಪೊಲೀಸರು ಬಂಧಿಸಿದ್ದು, ನೂರಕ್ಕೂ ಅಧಿಕ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

 ಬೆಂಗಳೂರು : ರಾಜಧಾನಿಯಲ್ಲಿ ವಾಹನ ಕಳ್ಳತನದಲ್ಲಿ ತೊಡಗಿದ್ದ 15 ಮಂದಿಯನ್ನು ಪ್ರತ್ಯೇಕ ಪ್ರಕರಣಗಳಲ್ಲಿ ನಗರದ ಎಂಟು ಠಾಣೆಗಳ ಪೊಲೀಸರು ಬಂಧಿಸಿದ್ದು, ನೂರಕ್ಕೂ ಅಧಿಕ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ವಾಹನ ಕಳವು ಪ್ರಕರಣದ ಪತ್ತೆದಾರಿಕೆಯನ್ನು ರಾಜಗೋಪಾಲ ನಗರ, ಗಿರಿನಗರ, ಬಾಣಸವಾಡಿ, ನಂದಿನಿಲೇಔಟ್, ಬೆಳ್ಳಂದೂರು, ಮಡಿವಾಳ, ಬಸನವಗುಡಿ ಹಾಗೂ ಜೆ.ಪಿ.ನಗರ ಠಾಣೆ ಪೊಲೀಸರು ನಡೆಸಿದ್ದು, ಆರೋಪಿಗಳಿಂದ 107 ಬೈಕ್‌ಗಳು, 2 ಆಟೋಗಳು, 1 ಕಾರು ಹಾಗೂ 72 ಗ್ರಾಂ ಚಿನ್ನಾಭರಣ ಸೇರಿದಂತೆ ಒಟ್ಟು 88.64 ಲಕ್ಷ ರು. ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ನಗರದಲ್ಲಿ ಪದೇ ಪದೇ ವಾಹನ ಕಳ್ಳತನ ಕೃತ್ಯಗಳು ವರದಿಯಾಗುತ್ತಿದ್ದವು. ಈ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ಸು ಕಂಡಿದ್ದಾರೆ.

ಆರಂಭದಿಂದ ಅಂತ್ಯದವರೆಗೆ ಪರಿಶೀಲನೆ : ವಾಹನ ಕಳ್ಳತನದಲ್ಲಿ ತೊಡಗಿದ್ದ ಇಬ್ಬರು ಕಿಡಿಗೇಡಿಗಳನ್ನು ಸುಮಾರು 500ಕ್ಕೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಸೆರೆ ಹಿಡಿಯುವಲ್ಲಿ ಮಡಿವಾಳ ಪೊಲೀಸರು ಯಶಸ್ವಿಯಾಗಿದ್ದಾರೆ. ಮಡಿವಾಳದ ಡಾಲರ್ಸ್ ಕಾಲೋನಿಯಲ್ಲಿ ಬೈಕ್ ಕಳ್ಳತನ ಬಗ್ಗೆ ದಾಖಲಾದ ಪ್ರಕರಣದ ಬೆನ್ನಹತ್ತಿದ್ದ ಇನ್ಸ್‌ಪೆಕ್ಟರ್‌ ಮಹಮ್ಮದ್‌ ನೇತೃತ್ವದ ತಂಡವು, ಕೃತ್ಯ ನಡೆದ ಸ್ಥಳದಿಂದ ಆರೋಪಿ ಗಮ್ಯ ತಲುಪವರೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ತಪಾಸಣೆ ನಡೆಸಿದ್ದಾರೆ. ಕೊನೆಗೆ ಆತನ ಚಲನವಲನದ ಮಾಹಿತಿ ಪಡೆದು ಪ್ರಮುಖ ಆರೋಪಿ ಯತೀಶ್ ಹಾಗೂ ಆತನ ಸಹಚರನನ್ನು ಸೆರೆ ಹಿಡಿದಿದ್ದಾರೆ.

30 ಬೈಕ್ ಕದ್ದ ಆನಂದ:

ಬಂಧಿತ 15 ಆರೋಪಿಗಳ ಪೈಕಿ ಒಬ್ಬಂಟಿಯಾಗಿ 30 ಬೈಕ್‌ಗಳನ್ನು ಕಳವು ಮಾಡಿದ್ದ ಕಿಡಿಗೇಡಿ ರಾಜಗೋಪಾಲ ನಗರ ಠಾಣೆ ಪೊಲೀಸರ ಗಾಳಕ್ಕೆ ಬಿದ್ದಿದ್ದಾನೆ. ಇಮ್ಮಡಿಹಳ್ಳಿ ನಿವಾಸಿ ಚಿತ್ತಪ್ಪಗಾರಿ ಆನಂದ್ ಬಂಧಿತನಾಗಿದ್ದು, ಆರೋಪಿಯಿಂದ 26.50 ಲಕ್ಷ ರು. ಮೌಲ್ಯದ 30 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಆನಂದ್‌ ವೃತ್ತಿಪರ ಖದೀಮನಾಗಿದ್ದು, ಹಲವು ದಿನಗಳಿಂದ ದ್ವಿಚಕ್ರ ವಾಹನಗಳ ಕಳ್ಳತನಕ್ಕೆ ಕುಖ್ಯಾತಿ ಪಡೆದಿದ್ದಾನೆ. ಮನೆ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಕದ್ದು ಬಳಿಕ ಜನರಿಗೆ ನಕಲಿ ದಾಖಲೆ ಸೃಷ್ಟಿಸಿ ಕಡಿಮೆ ಬೆಲೆಗೆ ಆತ ಮಾರುತ್ತಿದ್ದ. ಇತ್ತೀಚಿಗೆ ದೊಡ್ಡಬಿದರಕಲ್ಲು ಸಮೀಪದ ಮಾರಪ್ಪ ಲೇಔಟ್‌ನಲ್ಲಿ ಬೈಕ್ ಕದ್ದು ಪೊಲೀಸರಿಗೆ ಆನಂದ್ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಕರ್ತವ್ಯ ಲೋಪ, ಭ್ರಷ್ಟಾಚಾರದ ಆರೋಪ; ವಿಚಾರಣೆಗೆ ಅಧಿಕಾರಿಗಳ ನೇಮಕ
ಶ್ರೀರಂಗಪಟ್ಟಣ: ಕುಡಿದ ಮತ್ತಿನಲ್ಲಿದ್ದ ಸ್ನೇಹಿತನ ಕೊಲೆ