ಬೆಂಗಳೂರು ನಗರದಲ್ಲಿ ಮತ್ತೆ 150 ಇಂಡಿಗೋ ವಿಮಾನಗಳ ಸಂಚಾರ ರದ್ದು

KannadaprabhaNewsNetwork |  
Published : Dec 08, 2025, 04:00 AM IST
ಇಂಡಿಗೋ ವಿಮಾನ | Kannada Prabha

ಸಾರಾಂಶ

ಕಳೆದೊಂದು ವಾರದಿಂದ ಇಂಡಿಗೋ ವಿಮಾನಯಾನ ಸಮಸ್ಯೆ ಮುಂದುವರಿದಿದ್ದು, ಭಾನುವಾರ ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 150 ವಿಮಾನಗಳು ರದ್ದಾಗಿದ್ದವು. ನಿಲ್ದಾಣಕ್ಕೆ ಬರುವ 76 ವಿಮಾನಗಳು ಹಾಗೂ ಇಲ್ಲಿಂದ ಹೊರಡಬೇಕಿದ್ದ 74 ವಿಮಾನಗಳ ಸಂಚಾರವನ್ನು ಇಂಡಿಗೋ ರದ್ದುಗೊಳಿಸಿತು

ಬೆಂಗಳೂರು : ಕಳೆದೊಂದು ವಾರದಿಂದ ಇಂಡಿಗೋ ವಿಮಾನಯಾನ ಸಮಸ್ಯೆ ಮುಂದುವರಿದಿದ್ದು, ಭಾನುವಾರ ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 150 ವಿಮಾನಗಳು ರದ್ದಾಗಿದ್ದವು.

ಹಲವು ವಿಮಾನಗಳು ವಿಳಂಬ

ನಿಲ್ದಾಣಕ್ಕೆ ಬರುವ 76 ವಿಮಾನಗಳು ಹಾಗೂ ಇಲ್ಲಿಂದ ಹೊರಡಬೇಕಿದ್ದ 74 ವಿಮಾನಗಳ ಸಂಚಾರವನ್ನು ಇಂಡಿಗೋ ರದ್ದುಗೊಳಿಸಿತು. ಹಲವು ವಿಮಾನಗಳು ವಿಳಂಬವಾಗಿ ಆಗಮಿಸಿ, ಹೊರಟವು. ದೆಹಲಿ, ಹೈದರಾಬಾದ್, ಇಂದೋರ್, ರಾಯಪುರ್, ಕೊಲ್ಕತ್ತಾ, ಮಂಗಳೂರು ಕೊಚ್ಚಿ, ಶ್ರೀನಗರ, ಭೂಪಾಲ್, ಸೇರಿದಂತೆ ಹಲವಡೆ ತೆರಳಬೇಕಿದ್ದ ವಿಮಾನಗಳು ಸಂಚರಿಸುವುದಿಲ್ಲ ಎಂದು ನಿಲ್ದಾಣದ ಸಿಬ್ಬಂದಿ ಮಾಹಿತಿ ನೀಡಿದರು.

12 ಗಂಟೆ ಆಸುಪಾಸಿನಲ್ಲಿ ಹೊರಡಬೇಕಿದ್ದ ವಿಮಾನಗಳು ಹಾರಾಡಲಿಲ್ಲ. 11.50ರ ಕೊಲ್ಕತ್ತಾ, 12.40ರ ಮಂಗಳೂರು, 1 ಗಂಟೆಗೆ ದೆಹಲಿ, 1.5ಕ್ಕೆ ಕೊಚ್ಚಿ ಹಾಗೂ 1.20 ರ ನಾಸಿಕ್ ವಿಮಾನ ಸೇರಿ ವಿಮಾನಗಳು ರದ್ದಾಗಿದ್ದವು.

ಟ್ರಾವೆಲ್ ಏಜೆಂಟರೊಬ್ಬರು ಮಾತನಾಡಿ, ವಿಮಾನ ರದ್ದತಿಯಿಂದ ನಮಗೆ ಸಾಕಷ್ಟು ತೊಂದರೆ ಆಗಿದೆ. ನಮ್ಮಲ್ಲಿ ಬುಕ್ ಮಾಡಿರುವ ಪ್ರಯಾಣಿಕರ ಸಂಚಾರ ವ್ಯತ್ಯಯಗೊಂಡು ಪ್ರವಾರ ರದ್ದುಪಡಿಸಿದರು. ಡಿಸೆಂಬರ್ ತಿಂಗಳು ಪ್ರವಾಸದ ಸಮಯ. ಇದಕ್ಕಾಗಿ ಮೂರು‌ ನಾಲ್ಕು ತಿಂಗಳ ಮುಂಚಿತವಾಗಿ ಬುಕ್ ಮಾಡಿದ್ದರು. ನಮ್ಮಲ್ಲಿ ಬುಕ್ ಮಾಡಿರುವ ಗ್ರಾಹಕರು ವಿಮಾನ ನಿಲ್ದಾಣದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಹಕರಿಗೆ ಉತ್ತರಿಸುವುದು ಕಷ್ಟವಾಗಿದ ಎಂದರು.

ದಟ್ಟಣೆ ಕಡಿಮೆ:

ವಿಮಾನಗಳು ವಿಳಂಬವಾದ ಹಿನ್ನೆಲೆಯಲ್ಲಿ ಕೆಲ ಪ್ರಯಾಣಿಕರು ಏರ್ಪೋರ್ಟ್‌ನಲ್ಲಿ ಕಾದು ಕುಳಿತಿದ್ದರು. ಪ್ರಯಾಣಿಕರಿಗೆ ಫ್ಲೈಟ್‌ಗಳ ಬಗ್ಗೆ ಸೂಕ್ತ ಮಾಹಿತಿ ನೀಡಲು ಮತ್ತು ಗೊಂದಲ ನಿವಾರಿಸಲು ಏರ್ಪೋರ್ಟ್ ಆಡಳಿತ ಮಂಡಳಿಯು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿತ್ತು. ರದ್ದಾದ ವಿಮಾನಗಳ ಮಾಹಿತಿಯನ್ನು ಮೊದಲೇ ನೀಡುತ್ತಿರುವುದರಿಂದ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂದಣಿ ಕಡಿಮೆಯಾಗಿದ್ದು ಕಂಡುಬಂತು. ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ವಿಮಾನ ನಿಲ್ದಾಣವು ಇದೀಗ ಸಹಜ ಸ್ಥಿತಿಗೆ ಮರಳುತ್ತಿದೆ. ಏರ್ಪೋರ್ಟ್ ಮಂಡಳಿ ಕೈಗೊಂಡ ಮುಂಜಾಗ್ರತಾ ಕ್ರಮಗಳಿಂದಾಗಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಬೈಕ್ ಡಿಕ್ಕಿ: ಚಿಕಿತ್ಸೆ ಫಲಿಸದೆ ಪುಟ್ಟ ಬಾಲಕಿ ಸಾವು
ಮಂಡ್ಯ: ವಿದ್ಯುತ್ ಮೀಟರ್ ರೀಡರ್ ಮೇಲೆ ಮಾರಣಾಂತಿಕ ಹಲ್ಲೆ..!