ರೈಲ್ವೆ ಸುರಕ್ಷತಾ ದಳದಿಂದ 22 ಮಕ್ಕಳು ಪೋಷಕರ ಮಡಿಲಿಗೆ

KannadaprabhaNewsNetwork |  
Published : May 15, 2024, 01:32 AM ISTUpdated : May 16, 2024, 06:15 AM IST
ಮಕ್ಕಳು | Kannada Prabha

ಸಾರಾಂಶ

ನೈಋತ್ಯ ರೈಲ್ವೆ ಸುರಕ್ಷತಾ ದಳವು (ಆರ್‌ಪಿಎಫ್‌) ‘ನನ್ಹೆ ಫರಿಸ್ತೆಹ್’ ಕಾರ್ಯಕ್ರಮದ ಅಡಿ ಏಪ್ರಿಲ್ ತಿಂಗಳಲ್ಲಿ 4 ಬಾಲಕಿಯರು ಸೇರಿ ವಿವಿಧ ರಾಜ್ಯದ 22 ಮಕ್ಕಳನ್ನು ರಕ್ಷಿಸಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

 ಬೆಂಗಳೂರು :  ನೈಋತ್ಯ ರೈಲ್ವೆ ಸುರಕ್ಷತಾ ದಳವು (ಆರ್‌ಪಿಎಫ್‌) ‘ನನ್ಹೆ ಫರಿಸ್ತೆಹ್’ ಕಾರ್ಯಕ್ರಮದ ಅಡಿ ಏಪ್ರಿಲ್ ತಿಂಗಳಲ್ಲಿ 4 ಬಾಲಕಿಯರು ಸೇರಿ ವಿವಿಧ ರಾಜ್ಯದ 22 ಮಕ್ಕಳನ್ನು ರಕ್ಷಿಸಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ವಿವಿಧ ಕಾರಣಗಳಿಂದ ಕುಟಂಬದಿಂದ ಬೇರ್ಪಟ್ಟ ವಿವಿಧ ರಾಜ್ಯದ 18 ಗಂಡು ಮತ್ತು 4 ಹೆಣ್ಣು ಮಕ್ಕಳನ್ನು ರಕ್ಷಿಸಿ ಅವರ ಕುಟುಂಬದ ಜೊತೆಗೆ ಸುರಕ್ಷಿತವಾಗಿ ಮರಳಿ ಸೇರಿಸಲಾಗಿದೆ. ರೈಲು, ರೈಲ್ವೆ ನಿಲ್ದಾಣದಲ್ಲಿ ಹಾಗೂ ಟ್ರ್ಯಾಕ್‌ ಬಳಿ ಈ ಮಕ್ಕಳು ಸಿಕ್ಕಿದ್ದರು.

ಇದೇ ವೇಳೆ ಆಪರೇಷನ್ ಉಪಲಬ್ದ್ ಅಡಿಯಲ್ಲಿ ಕಾಯ್ದಿರಿಸುವ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ 24 ದಲ್ಲಾಳಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇವರಿಂದ ₹2.88 ಲಕ್ಷ ಮೌಲ್ಯದ 64 ಕಾಯ್ದಿರಿಸಿದ ಟಿಕೆಟ್‌ಗಳನ್ನು, ₹10.79 ಲಕ್ಷ ಮೌಲ್ಯದ ಬಳಸಿದ ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಪರೇಷನ್ ನಾರ್ಕೋಸ್ ಅಡಿಯಲ್ಲಿ ಆರು ಪ್ರಕರಣಗಳಿಂದ ₹49.90 ಲಕ್ಷ ಮೌಲ್ಯದ 50.885 ಕೇಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಮೂರು ಆರೋಪಿಗಳು ಬಂಧಿತರಾಗಿದ್ದಾರೆ.

ಇನ್ನು, ‘ಆಪರೇಷನ್ ಸತಾರ್ಕ್’ ಅಡಿಯಲ್ಲಿ 42 ಪ್ರಕರಣಗಳನ್ನು ದಾಖಲಿಸಿಕೊಂಡು ₹8.43 ಲಕ್ಷ ಮೌಲ್ಯದ 961 ಮದ್ಯ ಬಾಟಲಿಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಅಕ್ರಮ ಸಾಗಾಟ ಮಾಡುವವರ ವಿರುದ್ಧ ಮುಂದಿನ ಕಾನೂನು ಕ್ರಮಕ್ಕೆ ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿ ಮದುವೆಯಾಗಿದ್ದ ಪತ್ನಿ ಸೇರಿ ಅತ್ತೆ, ಮಾವನಿಗೆ ಬೆಂಕಿ ಹಚ್ಚಿದವ ಬಂಧನ
ಮೆಟ್ರೋದಲ್ಲಿ ಆಟಿಕೆ ಗನ್‌ ಇಟ್ಟುಕೊಂಡಿದ್ದ ಯುವಕ ವಶಕ್ಕೆ