ಗಂಗಾವತಿಯಲ್ಲಿ ಮರ್ಯಾದಾ ಹತ್ಯೆ: ಅನ್ಯಜಾತಿ ಯುವಕನೊಂದಿಗೆ ಮದುವೆಯಾದ ಯುವತಿಗೆ ವಿಷ?

KannadaprabhaNewsNetwork |  
Published : Sep 05, 2024, 02:26 AM ISTUpdated : Sep 05, 2024, 03:51 AM IST
3ುಲು1 | Kannada Prabha

ಸಾರಾಂಶ

ಗಂಗಾವತಿ ತಾಲ್ಲೂಕಿನಲ್ಲಿ ಅನ್ಯಜಾತಿ ಯುವಕನನ್ನು ಮದುವೆಯಾದ ಯುವತಿಯನ್ನು ಪತಿಯ ಮನೆಯವರೇ ಊಟಕ್ಕೆ ವಿಷ ಹಾಕಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.

 ಗಂಗಾವತಿ : ಗಂಗಾವತಿಯಲ್ಲೊಂದು ಮರ್ಯಾದಾ ಹತ್ಯೆ ವರದಿಯಾಗಿದೆ. ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾದ ಯುವತಿಯೋರ್ವಳನ್ನು ಪತಿಯ ಮನೆಯವರೇ ಊಟಕ್ಕೆ ವಿಷ ಹಾಕಿ ಹತ್ಯೆಗೈದ ಘಟನೆ ಗಂಗಾವತಿ ತಾಲೂಕಿನ ವಿಠಲಾಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮರಿಯಮ್ಮ ಹನುಮಯ್ಯ ನಾಯಕ ಗಟಾಲಿ (20) ಕೊಲೆಯಾದ ಯುವತಿ.

ಮಾದಿಗ ಸಮುದಾಯಕ್ಕೆ ಸೇರಿದ ಮರಿಯಮ್ಮ ಹಾಗೂ ಎಸ್‌ಟಿ ಸಮುದಾಯದ ಹನುಮಯ್ಯ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ಈ ವಿವಾಹಕ್ಕೆ ಯುವಕನ ಮನೆಯವರ ಸಮ್ಮತಿ ಇರಲಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಯುವಕನ ಕುಟುಂಬಸ್ಥರು ಇವರನ್ನು ದೂರ ಮಾಡಿದ್ದರು. ಹಾಗಾಗಿ ಹನುಮಯ್ಯ ಹಾಗೂ ಮರಿಯಮ್ಮ ಇಬ್ಬರು ಬೇರೆಡೆ ವಾಸವಾಗಿದ್ದರು. ಹನುಮಯ್ಯ ಮನೆಯವರು ಆ.29ರಂದು ಅವರಿಬ್ಬರನ್ನೂ ಮನೆಗೆ ಊಟಕ್ಕೆ ಆಹ್ವಾನಿಸಿದ್ದು, ಊಟದಲ್ಲಿ ವಿಷವುಣಿಸಿ ಕೊಲೆ ಮಾಡಿದ್ದಾರೆ ಎಂದು ಮೃತಳ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನರ ಮೇಲೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮರಿಯಮ್ಮ ಪತಿ ಹನುಮಯ್ಯ ಕುಟುಂಬಸ್ಥರ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ವೈಯಕ್ತಿಕ ಕಾರಣದಿಂದ ಬೇಸತ್ತು ಕಿರುತೆರೆ ಯುವ ನಟಿ ಆತ್ಮ*ತ್ಯೆ