ಕನ್ನಡಪ್ರಭ ವಾರ್ತೆ ಮದ್ದೂರು
ಜೀವನಾಂಶದ ವಿಚಾರವಾಗಿ ನ್ಯಾಯಾಲಯದ ಆದೇಶದ ನೋಟಿಸ್ ಜಾರಿ ಮಾಡಲು ಅಮೀನನ ಜೊತೆ ಪತಿ ಮನೆಗೆ ತೆರಳಿದ್ದ ಪತ್ನಿ ವಕೀಲೆ ಮೇಲೆ ಹಲ್ಲೆ ನಡೆಸಿ, ಅವರ ಮೇಲೆ ಕಾರು ಹರಿಸಿ ಹತ್ಯೆಗೆ ವಿಫಲ ಯತ್ನ ನಡೆಸಿರುವ ಘಟನೆ ಮಳವಳ್ಳಿಯಲ್ಲಿ ಮಂಗಳವಾರ ಜರುಗಿದೆ.ಮದ್ದೂರು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಕೀಲ ವೃತ್ತಿ ನಡೆಸುತ್ತಿರುವ ಎಂ.ಎಸ್.ವಿಜಯಲಕ್ಷ್ಮಮೇಲೆ ಪತಿ ವಕೀಲ ರಾಜೇಂದ್ರ ಈ ದುಕೃತ್ಯ ಎಸಗಿರುವುದು ನ್ಯಾಯಾಲಯದ ಅಮೀನ ಚೇತನ್ ಸಮ್ಮುಖದಲ್ಲಿ ನಡೆದಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರು ವಕೀಲೆ ವಿಜಯಲಕ್ಷ್ಮಿ ಈಗ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದು. ಈಕೆಯ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.ವಕೀಲ ರಾಜೇಂದ್ರ ಎರಡನೇ ವಿವಾಹವಾದ ಹಿನ್ನೆಲೆಯಲ್ಲಿ ಮೊದಲ ಪತ್ನಿ ವಿಜಯಲಕ್ಷ್ಮಿ, ರಾಜೇಂದ್ರ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿತ್ತು. ಇದರಿಂದ ಬೇಸತ್ತ ವಿಜಯಲಕ್ಷ್ಮಿ ಮಳವಳ್ಳಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಕೀಲ ಪತಿ ರಾಜೇಂದ್ರ ವಿರುದ್ಧ ಜೀವನಾಂಶ ಕೋರಿ ಪ್ರಕರಣ ದಾಖಲಿಸಿದ್ದರು.
ಆ ನಂತರ ನ್ಯಾಯಲಯ ವಿಚಾರಣೆಗೆ ಹಾಜರಾಗದ ರಾಜೇಂದ್ರ ಅವರಿಗೆ ವಿಜಯಲಕ್ಷ್ಮಿಗೆ 10 ಲಕ್ಷ ರು. ಜೀವನಾಂಶ ನೀಡುವಂತೆ ಆದೇಶ ಹೊರಡಿಸಿತ್ತು. ಬಳಿಕ ನ್ಯಾಯಾಲಯದ ಆದೇಶ ಪಾಲಿಸದ ಕಾರಣ ನ್ಯಾಯಾಧೀಶರು ನೋಟಿಸ್ ಜಾರಿಗೊಳಿಸಿದ್ದರು. ಮಳವಳ್ಳಿಯ ಸಾರಿಗೆ ಸಂಸ್ಥೆ ರಸ್ತೆಯಲ್ಲಿರುವ ರಾಜೇಂದ್ರ ಮನೆಗೆ, ವಕೀಲೆ ಪತ್ನಿ ವಿಜಯಲಕ್ಷ್ಮಿ ಅಮೀನನೊಂದಿಗೆ ನ್ಯಾಯಾಲಯದ ಆದೇಶದ ನೋಟಿಸ್ ಜಾರಿ ಮಾಡಲು ಹೋದಾಗ ಆಕ್ರೋಶಗೊಂಡ ರಾಜೇಂದ್ರ ಅಮೀನ ಅವರ ಸಮ್ಮುಖದಲ್ಲಿಯೇ ವಿಜಯಲಕ್ಷ್ಮಿ ಮೇಲೆ ಕಲ್ಲು, ಇಟ್ಟಿಗೆ ಚೂರುಗಳಿಂದ ಹಲ್ಲೆ ನಡೆಸಿದ್ದಾನೆ.ನಂತರ ಅವಾಚ್ಯ ಶಬ್ದಗಳಿಂದ ನಿಂದಿಸಿದ ರಾಜೇಂದ್ರ ವಿಜಯಲಕ್ಷ್ಮಿ ಮೇಲೆ ಕಾರು ಹತ್ತಿಸಿ ಕೊಲೆ ಮಾಡಲು ಯತ್ನಿದರು. ಆದರೆ, ತಾವು ಪ್ರಾಣಪಾಯದಿಂದ ಪಾರಾಗಿರುವುದಾಗಿ ವಿಜಯಲಕ್ಷ್ಮಿ ದೂರಿನಲ್ಲಿ ಆರೋಪಿಸಿದ್ದಾರೆ.
ವಕೀಲೆ ವಿಜಯಲಕ್ಷ್ಮಿ ಮೇಲಿನ ಹಲ್ಲೆಗೆ ಖಂಡನೆ, ವಕೀಲರಿಂದ ಪ್ರತಿಭಟನೆಮದ್ದೂರು:
ವಕೀಲೆ ವಿಜಯಲಕ್ಷ್ಮಿ ಮೇಲೆ ನಡೆದ ಹಲ್ಲೆ, ಕೊಲೆ ಯತ್ನ ಖಂಡಿಸಿ ಪಟ್ಟಣದ ವಕೀಲರು ಬುಧವಾರ ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ಸಂಘದ ಪದಾಧಿಕಾರಿಗಳು ಹಾಗೂ ವಕೀಲರು ಜೀವನಾಂಶದ ವಿಚಾರವಾಗಿ ವಕೀಲೆ ವಿಜಯಲಕ್ಷ್ಮಿ ಅವರ ಮೇಲೆ ಆಕೆ ಪತಿ ವಕೀಲ ರಾಜೇಂದ್ರ ಹಲ್ಲೆ ನಡೆಸಿರುವುದನ್ನು ತೀವ್ರವಾಗಿ ವಿರೋಧಿಸಿದರು.
ಪೊಲೀಸರು ರಾಜೇಂದ್ರ ವಿರುದ್ಧ ಕೈಗೊಳ್ಳಬೇಕು. ಹಲ್ಲೆಗೆ ಒಳಗಾಗಿರುವ ವಿಜಯಲಕ್ಷ್ಮಿ ಅವರಿಗೆ ಸೂಕ್ತ ರಕ್ಷಣೆ ಎಂದು ಒತ್ತಾಯಿಸಿದರು. ನಂತರ ಒಂದು ದಿನದ ಮಟ್ಟಿಗೆ ನ್ಯಾಯಾಲಯದ ಕಲಾಪದಿಂದ ಹೊರಗುಳಿಯಲು ನಿರ್ಧಾರ ಕೈಗೊಂಡರು.ಸಭೆಯಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸುಮಂತ್, ಉಪಾಧ್ಯಕ್ಷ ಪುಟ್ಟರಾಜು, ಖಜಾಂಚಿ ಪ್ರಸನ್ನ, ಜಂಟಿ ಕಾರ್ಯದರ್ಶಿ ಸುವರ್ಣ, ವಕೀಲರಾದ ಎ.ಶಿವಣ್ಣ, ಎಂ. ಎಂ.ಪ್ರಶಾಂತ್, ಸುನಿಲ್ ಕುಮಾರ್ ಭಾಗವಹಿಸಿದ್ದರು.