ಮದ್ದೂರು : ತಾಲೂಕಿನ ದೇಶಹಳ್ಳಿ ಸಮೀಪದ ಮದ್ದೂರು ಕೆರೆಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ಮತ್ತೋರ್ವ ಬಾಲಕ ರಂಜನ್ ಶವ ಸೋಮವಾರ ಮುಂಜಾನೆ ಪತ್ತೆಯಾಗಿದೆ.
ಪಟ್ಟಣದ ಅಗ್ನಿಶಾಮಕ ದಳದ ಪ್ರಮುಖ ಅಧಿಕಾರಿ ವಿಜಯ್ ನೇತೃತ್ವದಲ್ಲಿ ಸಿಬ್ಬಂದಿ ಯಮನಪ್ಪ, ಮಾದೇಗೌಡ, ಸಿದ್ದಪ್ಪ, ವಿನಯ್, ಶಿವಾನಂದ, ಪ್ರಶಾಂತ್, ಅಪ್ಪಯ್ಯ, ಹನುಮಂತು ಅವರ ತಂಡ ಮೀನುಗಾರರ ಸಹಾಯದಿಂದ ಭಾನುವಾರ ರಾತ್ರಿವರೆಗೆ ಶೋಧ ಕಾರ್ಯ ಕೈಗೊಂಡು ನೀರಿನಲ್ಲಿ ಮುಳುಗಿದ್ದ ಮುತ್ತುರಾಜ್ ಶವವನ್ನು ಹೊರತೆಗೆಯು ಯಶಸ್ವಿಯಾಗಿದ್ದರು. ರಂಜನ್ ಶವದ ಪತ್ತೆಗಾಗಿ ಸೋಮವಾರ ಮುಂಜಾನೆ ಮತ್ತೆ ಕೆರೆಯಲ್ಲಿ ಕಾರ್ಯಾಚರಣೆಗೆ ಇಳಿದ ಅಗ್ನಿಶಾಮಕ ದಳದ ತಂಡ ಸುಮಾರು ಎರಡು ಗಂಟೆ ಕಾಲ ಶೋಧ ನಡೆಸಿ ಕೆರೆ ಮಣ್ಣಿನಲ್ಲಿ ಹೂತು ಹೋಗಿದ್ದ ರಂಜನ್ ಶವವನ್ನು ಹೊರತೆಗೆಯುವಲ್ಲಿ ಸಫಲರಾಗಿದ್ದಾರೆ.
ಮೃತ ಮುತ್ತುರಾಜು ಹಾಗೂ ರಂಜನ್ ಮೃತ ದೇಹಗಳನ್ನು ಬೆಸಗರಹಳ್ಳಿ ಪೊಲೀಸರು ಮಂಡ್ಯ ಜಿಲ್ಲೆ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಂತರ ಶವಗಳನ್ನು ಮಧ್ಯಾಹ್ನ ಕುಟುಂಬದವರ ವಶಕ್ಕೆ ಒಪ್ಪಿಸಿದ್ದಾರೆ.
ಅಪರಿಚಿತ ಯುವಕನ ಶವ ಪತ್ತೆ
ಕೆ.ಆರ್.ಪೇಟೆ:ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಗೆ ಸುಮಾರು 25 ವರ್ಷ ವಯಸ್ಸಾಗಿದೆ. 168 ಸೆಂ. ಮೀ. ಉದ್ದ, ಎಣ್ಣೆಗೆಂಪು ಬಣ್ಣ, ಕೋಲುಮುಖ, ಸಾಧಾರಣ ಶರೀರ, ಕಪ್ಪು ಕೂದಲಿನ ಗಡ್ಡ, ಉಬ್ಬು ಹಲ್ಲು, ಬಲಗಣ್ಣಿನ ಬಳಿ ಕಪ್ಪು ಕಾರಳ್ಳು ಇದ್ದು, ಮೈಮೇಲೆ ಚೆಕ್ಸ್ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಇದೆ. ವಾರಸುದಾರರಿದ್ದಲ್ಲಿ ದೂ-08232- 224888/224500, 08230-265433 ಹಾಗೂ ಮೊ-9480804861 ನ್ನು ಸಂಪರ್ಕಿಸಹುದು ಎಂದು ಕಿಕ್ಕೇರಿ ಪೋಲಿಸ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಅಪರಿಚಿತ ವ್ಯಕ್ತಿ ಶವ ಪತ್ತೆ
ಮಂಡ್ಯ:ತಾಲೂಕಿನ ಶಿವಳ್ಳಿಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ. ಮೃತ ಗಂಡಸಿಗೆ ಸುಮಾರು 60 ವರ್ಷ, 5.5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕೋಲುಮುಖ, ಸಾಧಾರಣ ಶರೀರ, ಕಪ್ಪು ಮಿಶ್ರಿತ ಬಿಳಿ ತಲೆ ಕೂದಲು, ಬಿಳಿ ಬಣ್ಣದ ಗಡ್ಡ ಮೀಸೆ ಇದ್ದು, ಮೈಮೇಲೆ ಗುಲಾಬಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಇದೆ. ವಾರಸುದಾರರಿದ್ದಲ್ಲಿ ದೂ. ಸಂ.08232-224500/277144 ನ್ನು ಸಂಪರ್ಕಿಸಹುದು. ಈ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿ ಶವ ಪತ್ತೆ
ಪಾಂಡವಪುರ:ಪಟ್ಟಣದ ಸಮೀಪದ ರೈಲು ನಿಲ್ದಾಣದ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದ್ದು ಮಂಡ್ಯ ರೈಲ್ವೆ ಪೋಲಿಸ್ ಉಪಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನಿಗೆ ಸುಮಾರು 35 ರಿಂದ 40 ವರ್ಷ ವಯಸ್ಸಾಗಿದೆ. 5.6 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕಪ್ಪು ಬಿಳಿ ಮಿಶ್ರಿತ ಗಡ್ಡ ಮೀಸೆ ಇದ್ದು, ಬಲಗೈನ ಭುಜದ ಹತ್ತಿರನ ಹಾವಿನ ಜೊತೆ ಇರುವ ತ್ರಿಶೂಲದ ಹಚ್ಚೆ ಇದೆ. ಎಡಗೈಯಲ್ಲಿ ಶೃತಿ ಎಂಬ ಕನ್ನಡ ಅಕ್ಷರದ ಹಸಿರು ಹಚ್ಚೆ ಇದ್ದು, ಎಡ ಎದೆ ಮೇಲೆ ಹೃದಯ ಚಿತ್ರವಿದ್ದು, ಅದರೊಳಗೆ ಜ್ಯೋತಿ ಎಂಬ ಹಸಿರು ಹಚ್ಚೆ ಇದೆ.
ಮೈಮೇಲೆ ಪಿಂಕ್ ಬಣ್ಣದ ತುಂಬು ತೋಳಿನ ಶರ್ಟ್ ಅದರಲ್ಲಿ ಹಳದಿ ನೀಲಿಯ ಉದ್ದದ ಗೆರೆಗಳಿದ್ದು ಎಲ್ ಎಪಿ ಮಾರ್ಕ್, ಕಪ್ಪು ಬಣ್ಣದ ಫಾರ್ಮಲ್ ಪ್ಯಾಂಟ್, ಕಾಫಿ ಬಣ್ಣದ ಟವೆಲ್ ಇದ್ದು, ಅದರಲ್ಲಿ ಕಪ್ಪು ಬಿಳಿ ಬಣ್ಣದ ಗೆರೆಗಳಿವೆ. ವಾರಸುದಾರರಿದ್ದಲ್ಲಿ ದೂ-0821-2516579, ಮೊ-9480802122 ನ್ನು ಸಂಪರ್ಕಿಸಬಹುದು ಎಂದು ಮಂಡ್ಯ ರೈಲ್ವೆ ಪೋಲಿಸ್ ಉಪಠಾಣೆಯ ಸಹಾಯಕ ಆರಕ್ಷಕ ಉಪ ನಿರೀಕ್ಷಕರು ತಿಳಿಸಿದ್ದಾರೆ.