ದಬ್ಬಳ್ಳಿ ಸಮೀಪದ ಮೀಸಲು ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಾವೇರಿ ನದಿಯಲ್ಲಿ ಆಮೆ ಹಾಗೂ ಮೀನುಗಳನ್ನು ಹಿಡಿಯುತ್ತಿದ್ದ 7 ಮಂದಿ ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹಲಗೂರು : ದಬ್ಬಳ್ಳಿ ಸಮೀಪದ ಮೀಸಲು ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಾವೇರಿ ನದಿಯಲ್ಲಿ ಆಮೆ ಹಾಗೂ ಮೀನುಗಳನ್ನು ಹಿಡಿಯುತ್ತಿದ್ದ 7 ಮಂದಿ ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೆಂಗಳೂರು ಮೂಲದ ಸೈಯದ್ ಶುಜಾತುಲ್ಲಾ ಬಿನ್. ಸಯ್ಯದ್ ಅಹಮದ್ ಉಲ್ಲಾ, ಅಸಿಫ್ ಖಾನ್ ಬಿನ್. ಆರಿಫ್ ಖಾನ್, ತಬ್ರೇಜ್ ಬಿನ್. ಅಲ್ಲಾ ಬಕಾಶ್, ಬಸೀರ್ ಖಾನ್ ಬಿನ್. ಅಬ್ದುಲ್ ಬಕಾಸ್, ಅಬ್ದುಲ್ ಖದೀರ್ ಖಾನ್ ಬಿನ್. ಶಬ್ಬೀರ್ ಖಾನ್, ಪೈಜಲ್ ಕಜಾನ್ ಬಿನ್. ಮುನೀರ್ ಖಾನ್, ಅರ್ಫತ್ ಖಾನ್ ಬಿನ್. ನೂರುಲ್ಲಾ ಬಂಧಿತ ಆರೋಪಿಗಳು.
ಶಿಂಷಾ ಶಾಖೆಯ ಉಪ ವಲಯ ಅರಣ್ಯಾಧಿಕಾರಿಗಳು ಮತ್ತು ಶಿಂಷಾ ಗಸ್ತಿನಲ್ಲಿ ಅರಣ್ಯ ಪಾಲಕರು ಹಾಗೂ ಸಿಬ್ಬಂದಿ ಇದ್ದಾಗ ದಬ್ಬಹಳ್ಳಿ ಗೇಟಿನ ಬಳಿ ಒಂದು ಮಾರುತಿ ಕಾರು ನಿಂತಿರುವುದನ್ನು ಕಂಡು ಅನುಮಾನದ ಮೇಲೆ ಅದನ್ನು ಪರಿಶೀಲಿಸಿದಾಗ ಅದರಲ್ಲಿ ಜೀವಂತ ಇರುವ ಒಂದು ಆಮೆ ಹಾಗೂ ಮೀನುಗಳು ಸಿಕ್ಕಿರುತ್ತದೆ. ಇವುಗಳ ಹಿಡಿಯುವುದಕ್ಕೆ ತಂದಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಆರ್‌ಎಫ್ ರವಿ ಬುರ್ಜಿ, ಶಿಂಷಾ ಉಪ ವಲಯ ಅರಣ್ಯ ಅಧಿಕಾರಿ ಸಿದ್ದರಾಮ ಪೂಜಾರಿ, ಅರಣ್ಯ ಪಾಲಕರಾದ ಮಲ್ಲಿಕಾರ್ಜುನ ಕುಂಬಾರ, ಜೀಪ್ ಚಾಲಕ ಚೇತನ್, ಗಸ್ತು ಸಿಬ್ಬಂದಿ ಎನ್.ಶಿವು, ಬಸವರಾಜು ಸೇರಿದಂತೆ ಹಲವರು ಇದ್ದರು.
ಮರಕ್ಕೆ ನೇಣು ಬಿಗಿದು ಅಪರಿಚಿತ ವ್ಯಕ್ತಿ ಆತ್ಮಹತ್ಯೆ
ಮದ್ದೂರು:ಅಪರಿಚಿತ ವ್ಯಕ್ತಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ರೈಲು ನಿಲ್ದಾಣದ ಬಳಿ ಸೋಮವಾರ ಜರುಗಿದೆ. ಮೃತ ವ್ಯಕ್ತಿಗೆ ಸುಮಾರು 35ರಿಂದ 40 ವರ್ಷವಾಗಿದೆ. 5ರಿಂದ 6 ಅಡಿ ಎತ್ತರ, ಗುಂಡು ಮುಖ, ದೃಢಕಾಯ ಶರೀರ, ಮೈ ಮೇಲೆ ತೆಳು ಹಸಿರು ಬಣ್ಣದ ತುಂಬುತೋಳಿನ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದಾನೆ.
ಮೃತನ ಎಡಗೈ ಮೇಲೆ ಆಂಜನೇಯನ ದೇವರ ಚಿತ್ರವಿದೆ. ಈತನ ಬಗ್ಗೆ ಮಾಹಿತಿ ಉಳ್ಳವರು ಮದ್ದೂರು ಪೊಲೀಸರನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ಅಪರಿಚಿತ ವ್ಯಕ್ತಿ ಶವ ಪತ್ತೆ
ಮದ್ದೂರು: ಪಟ್ಟಣದ ಶಿವಪುರದ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. 55 ರಿಂದ 60 ವರ್ಷ ವಯಸ್ಸಿನ ವ್ಯಕ್ತಿ ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ನೀಲಿ ಮತ್ತು ಬಿಳಿ ಬಣ್ಣದ ತುಂಬಾ ತೋಳಿನ ಶರ್ಟ್ ಹಾಗೂಚೌಕುಳಿ ಆಕಾರದ ಲುಂಗಿ ಧರಿಸಿದ್ದಾನೆ. ಈತನ ಬಗ್ಗೆ ಮಾಹಿತಿ ಉಳ್ಳವರು ಮದ್ದೂರು ಪೊಲೀಸರನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ಮಂಡ್ಯದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ
ಮಂಡ್ಯ: ನಗರದ ಮಹಾವೀರ ಸರ್ಕಲ್ ಬಳಿ ಮೃತ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಮೃತನಿಗೆ ಸುಮಾರು 65 ವರ್ಷವಾಗಿದೆ. 5.4 ಅಡಿ ಎತ್ತರ, ಸಾಧಾರಣ ಶರೀರ, ಗೋದಿ ಮೈಬಣ್ಣ, ತಲರಯಲ್ಲಿ ಬಿಳಿ ಕೂದಲು, ಬಿಳಿ ಮೀಸೆ, ಬಿಳಿ ಗಡ್ಡ ಇದ್ದು, ಮೈಮೇಲೆ ಕಪ್ಪು ಬಣ್ಣದ ಮೇಲೆ ಬಿಳಿ ಗೆರೆಗಳುಳ್ಳ ತುಂಬು ತೋಳಿನ ಶರ್ಟ್, ನೇರಳೆ ಬಣ್ಣದ ಬನಿಯನ್, ಪಾಚಿ ಹಸಿರು ಬಣ್ಣದ ಪ್ಯಾಂಟ್ ಇರುತ್ತದೆ. ವಾರಸುದಾರರಿದ್ದಲ್ಲಿ ದೂ-08232-224500/ಮೊ-9480804830 ಅನ್ನು ಸಂಪರ್ಕಿಸಬಹುದು ಎಂದು ಮಂಡ್ಯ ಪೂರ್ವ ಪೊಲೀಸ್ ಠಾಣೆಯ ಠಾಣಾಧಿಕಾರಿ ತಿಳಿಸಿದ್ದಾರೆ.