ಮುಟ್ಟನಹಳ್ಳಿ ಗೇಟ್ ಬಳಿ ರಸ್ತೆ ತಡೆಗೋಡೆಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು

KannadaprabhaNewsNetwork | Updated : Feb 13 2025, 04:07 AM IST

ಸಾರಾಂಶ

ರಸ್ತೆಯ ತಡೆಗೋಡೆಗೆ ಬೈಕ್ ಡಿಕ್ಕಿ ಹೊಡೆದು ಪರಿಣಾಮ ಬೈಕ್ ಸವಾರ ಸಾವನ್ನಪ್ಪಿ ಹಿಂಬದಿ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಮುಟ್ಟನಹಳ್ಳಿ ಗೇಟ್ ಬಳಿ ಜರುಗಿದೆ. ಕುರಿಕೆಂಪನದೊಡ್ಡಿ ಗ್ರಾಮದ ಪ್ರೇಮ್ ಸಾಗರ್ ಮೃತಪಟ್ಟ ದುರ್ದೈವಿ.

  ಕೆ.ಎಂ.ದೊಡ್ಡಿ : ರಸ್ತೆಯ ತಡೆಗೋಡೆಗೆ ಬೈಕ್ ಡಿಕ್ಕಿ ಹೊಡೆದು ಪರಿಣಾಮ ಬೈಕ್ ಸವಾರ ಸಾವನ್ನಪ್ಪಿ ಹಿಂಬದಿ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಮುಟ್ಟನಹಳ್ಳಿ ಗೇಟ್ ಬಳಿ ಜರುಗಿದೆ.

ಕುರಿಕೆಂಪನದೊಡ್ಡಿ ಗ್ರಾಮದ ಪ್ರೇಮ್ ಸಾಗರ್ (27) ಮೃತಪಟ್ಟ ದುರ್ದೈವಿ. ದೇವರಹಳ್ಳಿಯ ಚಲುವರಾಜು ಚಿಕಿತ್ಸೆ ಪಡೆಯುತ್ತಿದ್ದಾನೆ. ಮುಟ್ಟನಹಳ್ಳಿ ಗೇಟ್ ಬಳಿ ಬೈಕ್‌ನಲ್ಲಿ ಚಲಿಸುತ್ತಿದ್ದ ಸಂದರ್ಭದಲ್ಲಿ ಆಯಾತಪ್ಪಿ ತಡೆಗೋಡಿಗೆ ಡಿಕ್ಕಿ ಹೊಡೆದು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣವೇ ಅಕ್ಕಪಕ್ಕದವರು ಸಮುದಾಯ ಆರೋಗ್ಯ ಕೆಂದ್ರಕ್ಕೆ ದಾಖಲು ಪಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಕೆ.ಎಂ.ದೊಡ್ಡಿ ಆಸ್ಟರ್ ಜಿ.ಮಾದೇಗೌಡ ಆಸ್ಪತ್ರೆಗೆ ದಾಖಲು ಪಡಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪ್ರೇಮ್ ಕುಮಾರ್ ನನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಚಲುವರಾಜು ಅಸ್ಟರ್ ಜಿ.ಮಾದೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಂ.ಜೆ.ದಿವ್ಯ ಆತ್ಮಹತ್ಯೆ ಪ್ರಕರಣ: ಪತಿ ಗಿರೀಶ್ ನ್ಯಾಯಾಂಗ ಬಂಧನ

ಮದ್ದೂರು: ತಾಲೂಕಿನ ಕೆಸ್ತೂರು ಗ್ರಾಮದ ಜಿಮ್ ನಲ್ಲಿ ಪತ್ನಿ ಎಂ.ಜೆ.ದಿವ್ಯ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತನಾದ ಪತಿ ಗಿರೀಶ್‌ನನ್ನು ನ್ಯಾಯಾಂಗ ಬಂಧನಕ್ಕೆ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ನೀಡಿದೆ.

ದಿವ್ಯಾಳ ಆತ್ಮಹತ್ಯೆ ನಂತರ ತಲೆಮರೆಸಿಕೊಂಡಿದ್ದ ಗಿರೀಶ್‌ನನ್ನು ಕೆಸ್ತೂರು ಪೊಲೀಸರು ಬಂಧಿಸಿ ವಿಚಾರಣೆ ನಂತರ ಮಂಗಳವಾರ ರಾತ್ರಿ ಜೆಎಂಎಫ್ ಸಿ ನ್ಯಾಯಾಲಯದ ಒಂದನೇ ಅಪರ ಸಿವಿಲ್ ನ್ಯಾಯಾಧೀಶರಾದ ಎಸ್.ಸಿ.ನಳಿನ ಅವರ ಮುಂದೆ ಆರೋಪಿ ಹಾಜರು ಪಡಿಸಿದ್ದರು. ವಿಚಾರಣೆ ನಂತರ ಈತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ನ್ಯಾಯಾಧೀಶರು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ರಾತ್ರಿಯೇ ಆರೋಪಿ ಗಿರೀಶ್‌ನನ್ನು ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಕರದೊಯ್ದು ಮಂಡ್ಯ ಕಾರಾಗೃಹ ವಶಕ್ಕೆ ನೀಡಲಾಗಿದೆ.

Share this article