)
ರಾಜಧಾನಿಯನ್ನು ಬೆಚ್ಚಿಬೀಳಿಸಿದ್ದ ರುಬ್ಬುಗುಂಡಿನಲ್ಲಿ ಹೊಡೆದು ಒಂದೇ ಕುಟುಂಬದ 7 ಮಂದಿ ಭೀಕರ ಹತ್ಯೆ ಕೇಸ್
ರಾಜಾಜಿನಗರದಲ್ಲಿ ನಡೆದಿರುವ ಒಂದೇ ಕುಟುಂಬದ 7 ಮಂದಿ ನರಮೇಧ ಪ್ರಕರಣದ ಸಂಬಂಧಪಟ್ಟಂತೆ ತಮಿಳುನಾಡಿನ ಸೇಲಂ ಸಮೀಪದ ಬೆಟ್ಚದಲ್ಲಿ ಮತ್ತೆರಡು ಮೃತದೇಹಗಳು ಶನಿವಾರ ಪತ್ತೆಯಾಗಿವೆ.
ಆರೋಪಿ ಇಂದುಶೇಖರ್‌ನ ಪತ್ನಿ ಸುನೀತಾ ಹಾಗೂ ಅತ್ತೆ ರೂಪಾವತಿ ಅವರ ಮೃತದೇಹಗಳು ಪತ್ತೆಯಾಗಿದ್ದು, ಇನ್ನುಳಿದ 4 ಮೃತದೇಹಗಳಿಗೆ ಪೊಲೀಸರು ಬೇರೆಡೆ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ರಾಜಾಜಿನಗರದ ಭಾಷ್ಯಂದ ಮನೆಯಲ್ಲಿ ತನ್ನ ಪತ್ನಿ ಸುನೀತಾ ಹಾಗೂ ಆಕೆಯ ತವರು ಮನೆಯ 6 ಮಂದಿಯನ್ನು ನಿರ್ದಯವಾಗಿ ರುಬ್ಬುಗುಂಡಿನಿಂದ ಹಲ್ಲೆ ನಡೆಸಿ ಭೀಭತ್ಸವಾಗಿ ಆರೋಪಿ ಇಂದುಶೇಖರ್ ಹತ್ಯೆ ಮಾಡಿದ್ದ. ಈ ಹತ್ಯೆ ಕೃತ್ಯಕ್ಕೆ ಆತನ 17 ವರ್ಷದ ಅಪ್ರಾಪ್ತ ಮಗಳು ಸಹ ನೆರವು ನೀಡಿದ್ದ ಆಘಾತಕಾರಿ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿತ್ತು.ಸೇಲಂನಲ್ಲಿ ಮೃತದೇಹ ಎಸೆದಿದ್ದ ಹಂತಕ:
ವಿಚಾರಣೆ ವೇಳೆ ಮೃತದೇಹಗಳನ್ನು ಬಿಸಾಡಿರುವ ಸ್ಥಳಗಳ ಬಗ್ಗೆ ಆರೋಪಿ ಬಾಯ್ಬಿಟ್ಟಿದ್ದ. ಅಂತೆಯೇ ಸೇಲಂ ಜಿಲ್ಲೆಯ ಎರ್ನಾಡು ಅರಣ್ಯಪ್ರದೇಶಕ್ಕೆ ಆರೋಪಿಯನ್ನು ಕರೆದೊಯ್ದು ಪೊಲೀಸರು ಶೋಧಿಸಿದರು. ಆಗ ಆತನ ಪತ್ನಿ ಸುನೀತಾ ಹಾಗೂ ಅತ್ತೆ ರೂಪಾವತಿ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇವುಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ನಗರಕ್ಕೆ ಕರೆತರಲು ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಶಿರಾಡಿ-ಚಾರ್ಮಾಡಿ ಘಾಟ್‌ಗಳಲ್ಲಿ ತಪಾಸಣೆ
--
ರುಬ್ಬುಗುಂಡಿನಿಂದ ಹಲ್ಲೆ ನಡೆಸುವ ಮುನ್ನ ಊಟದಲ್ಲಿ ವಿಷ ಅಥವಾ ನಿದ್ರೆ ಮಾತ್ರೆಯನ್ನು ಆರೋಪಿ ಇಂದುಶೇಖರ್ ಬೆರೆಸಿದ್ದ. ಈ ಆಹಾರ ಸೇವಿಸಿ ಅರೆ ಪ್ರಜ್ಞಾ ಹೀನರಾದಾಗ ಆತ ಹಲ್ಲೆ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಆದರೆ ಮರಣೋತ್ತರ ಪರೀಕ್ಷೆ ಬಳಿಕವೇ ಸಾವಿಗೂ ಮುನ್ನ ಹತ್ಯೆಗೀಡಾದವರಿಗೆ ವಿಷಪ್ರಾಶನ ಅಥವಾ ನಿದ್ರೆ ಮಾತ್ರೆ ಸೇವನೆ ಬಗ್ಗೆ ಖಚಿತವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೆಬ್ ಸಿರೀಸ್ ನೋಡಿ ಪ್ಲ್ಯಾನ್
--
ಅಪ್ರಾಪ್ತ ಬಾಲಕಿ ವಿಚಾರಣೆತನ್ನ ಕುಟುಂಬದ ನರಮೇಧ ಪ್ರಕರಣ ಸಂಬಂಧ ಆರೋಪಿ ಇಂದುಶೇಖರ್‌ನ ಅಪ್ರಾಪ್ತ ಪುತ್ರಿಯನ್ನು ಪೊಲೀಸರು ಶನಿವಾರ ಸಹ ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆ ವೇಳೆ ಆಕೆ ಸಹಜವಾಗಿ ವರ್ತಿಸುತ್ತಿದ್ದಾಳೆ. ತನ್ನ ಮಗಳ ಬ್ರೈನ್ ವಾಶ್ ಮಾಡಿ ಕೃತ್ಯಕ್ಕೆ ಇಂದುಶೇಖರ್ ನೆರವುಪಡೆದಿರುವ ಸಾಧ್ಯತೆಗಳಿವೆ. ಇದುವರೆಗೆ ಇಂದುಶೇಖರ್ ಹೇಳಿದ ಕತೆಯನ್ನೇ ಆಕೆ ಕೂಡ ಹೇಳುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.