ನಟಿ ಛಾಯಾ ಸಿಂಗ್ ಮನೆಯಲ್ಲಿ ಕಳ್ಳತನ: ಕೆಲಸದಾಳು ಬಂಧನ

KannadaprabhaNewsNetwork |  
Published : May 15, 2024, 01:40 AM ISTUpdated : May 16, 2024, 06:08 AM IST
ಕಳ್ಳತವನಾಗಿದ್ದ ಚಿನ್ನ, ಬೆಳ್ಳಿಯನ್ನು ಪೊಲೀಸರಿಂದ ಪಡೆದ ನಟಿ ಛಾಯಾಸಿಂಗ್‌. | Kannada Prabha

ಸಾರಾಂಶ

ಚಲನಚಿತ್ರ ನಟಿ ಛಾಯಾಸಿಂಗ್ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಅವರ ಮನೆ ಕೆಲಸದಾಳನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಚಲನಚಿತ್ರ ನಟಿ ಛಾಯಾಸಿಂಗ್ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಅವರ ಮನೆ ಕೆಲಸದಾಳನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎನ್‌ಜಿಓಎಸ್ ಕಾಲೋನಿ ನಿವಾಸಿ ಉಷಾ ಬಂಧಿತಳಾಗಿದ್ದು, ಆರೋಪಿಯಿಂದ 4 ಲಕ್ಷ ರು. ಮೌಲ್ಯದ 66 ಗ್ರಾಂ ಚಿನ್ನ ಹಾಗೂ 155 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಮನೆಯಲ್ಲಿ ಬೀರುವಿನ ಲಾಕರ್ ತೆಗೆದು ಆಭರಣ ಕಳವು ಮಾಡುವಾಗ ಉಷಾ ರೆಡ್ ಹ್ಯಾಂಡ್ ಆಗಿ ಛಾಯಾಸಿಂಗ್ ತಾಯಿ ಚಮನ್‌ ಲತಾ ಅವರಿಗೆ ಸಿಕ್ಕಿಬಿದ್ದಳು. ಈ ಕೃತ್ಯದ ಬಗ್ಗೆ ನಟಿ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.

ಕಳೆದ ತಿಂಗಳಿಂದ ಬಸವೇಶ್ವರನಗರದ ಎನ್‌ಎಚ್‌ಸಿಎಸ್‌ ಲೇಔಟ್‌ನಲ್ಲಿರುವ ಛಾಯಾ ಸಿಂಗ್ ಮನೆಯಲ್ಲಿ ಉಷಾ ಕೆಲಸ ಮಾಡುತ್ತಿದ್ದಳು. ಆ ವೇಳೆ ಮನೆಯವರಿಗೆ ತಿಳಿಯದಂತೆ ಒಂದೊಂದಾಗಿ ಬೆಳ್ಳಿ ಹಾಗೂ ಚಿನ್ನಾಭರಣಗಳನ್ನು ಆಕೆ ಕಳವು ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ತಾನು ಮಾಡಿಕೊಂಡಿದ್ದ ಸಾಲ ತೀರಿಸುವ ಸಲುವಾಗಿ ಛಾಯಾಸಿಂಗ್ ಅವರ ಮನೆಯಲ್ಲಿ ಆಭರಣ ಮತ್ತು ಹಣವನ್ನು ಕಳವು ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಆರೋಪಿಯಿಂದ ವಶಪಡಿಸಿಕೊಂಡಿದ್ದ ಆಭರಣಗಳನ್ನು ನಟಿ ಛಾಯಾಸಿಂಗ್ ಅವರಿಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮರಳಿಸಿದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಕೆಎಸ್‌ಆರ್‌ಟಿಸಿಯಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ 12 ಲಕ್ಷಕ್ಕೂ ಹೆಚ್ಚು ವಂಚನೆ
ನಾಯಿ ಮೂತ್ರ ವಿಸರ್ಜನೆ ವಿಚಾರಕ್ಕೆ ಅಪಾರ್ಟ್‌ಮೆಂಟ್‌ ನಿವಾಸಿಗಳ ಮಧ್ಯೆ ಮಾರಾಮಾರಿ