ಬೈಕ್ ಗೆ ಕಾರು ಡಿಕ್ಕಿ: ಹಿಂಬದಿ ಸವಾರ ಸಾವು, ಚಾಲಕನಿಗೆ ಗಾಯ

KannadaprabhaNewsNetwork |  
Published : Jun 10, 2025, 03:46 AM ISTUpdated : Jun 10, 2025, 04:42 AM IST
ಬೈಕ್ ಗೆ ಕಾರು ಡಿಕ್ಕಿ: ಹಿಂಬದಿ ಸವಾರ ಸಾವು, ಚಾಲಕನಿಗೆ ಗಾಯ | Kannada Prabha

ಸಾರಾಂಶ

ಬೈಕ್‌ಗೆ ಕಾರು ಡಿಕ್ಕಿಯಾಗಿ ಹಿಂಬದಿ ಸವಾರ ಮೃತಪಟ್ಟು, ಚಾಲಕ ಗಾಯಗೊಂಡಿರುವ ಘಟನೆ ಪಟ್ಟಣದ ಶಿವಪುರದಲ್ಲಿ ಭಾನುವಾರ ರಾತ್ರಿ ಜರುಗಿದೆ.

 ಮದ್ದೂರು : ಬೈಕ್‌ಗೆ ಕಾರು ಡಿಕ್ಕಿಯಾಗಿ ಹಿಂಬದಿ ಸವಾರ ಮೃತಪಟ್ಟು, ಚಾಲಕ ಗಾಯಗೊಂಡಿರುವ ಘಟನೆ ಪಟ್ಟಣದ ಶಿವಪುರದಲ್ಲಿ ಭಾನುವಾರ ರಾತ್ರಿ ಜರುಗಿದೆ.

ತಾಲೂಕಿನ ಕದಲೂರು ಗ್ರಾಮದ ಬಾಲುಗೌಡ (25) ಮೃತಪಟ್ಟವರು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಈತನನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡುವ ವೇಳೆ ಮೃತಪಟ್ಟಿದ್ದಾನೆ. ಬೈಕ್ ಚಾಲನೆ ಮಾಡುತ್ತಿದ್ದ ಜೀವನ್ ತೀವ್ರವಾಗಿ ಗಾಯಗೊಂಡಿದ್ದು ಮದ್ದೂರು ಆಸ್ಪತ್ರೆ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲೆ ಮಾಡಲಾಗಿದೆ.

ಬಾಲುಗೌಡ ಮತ್ತು ಜೀವನ್ ಭಾನುವಾರ ರಾತ್ರಿ ಶಿವಪುರದ ಉದಯ್ ಚಾರಿಟಬಲ್ ಟ್ರಸ್ಟ್ ಕಚೇರಿ ಮುಂದೆ ತಮ್ಮ ಬಜಾಜ್ ಪಲ್ಸರ್ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ. ಈ ಸಂಬಂಧ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ನಾಪತ್ತೆ

ಮಳವಳ್ಳಿ: ತಾಲೂಕಿನಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ನಾಪತ್ತೆಯಾಗಿರುವ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ರಾವಣಿ ಗ್ರಾಮದ ನಂಜುಂಡಯ್ಯ (74) ಕಾಣೆಯಾಗಿದ್ದು, ಕಳೆದ 2024ರ ಜುಲೈ 10 ಮನೆಯಿಂದ ಹೊರಕ್ಕೆ ಹೋದವರು ವಾಪಸ್ ಬಂದಿಲ್ಲ.

ನಂಜುಂಡಯ್ಯ ಐದೂವರೆ ಅಡಿ ಎತ್ತರ, ಕೆಂಪು ವರ್ಣ, ಅನಕ್ಷರಸ್ಥರಾಗಿದ್ದು, ಕನ್ನಡ ಭಾಷೆಯನ್ನು ಮಾತ್ರ ಮಾತನಾಡಲು ಬಲ್ಲವನಾಗಿದ್ದು, ಹುಡುಕಿಕೊಡುವಂತೆ ಪತ್ನಿ ಮಹದೇವಮ್ಮ ದೂರಿನಲ್ಲಿ ಕೋರಿದ್ದಾರೆ.

ತಾಲೂಕಿನ ಅಂಗ್ರಪುರ ಗ್ರಾಮದ ಬುದ್ದಿಮಾಂದ್ಯ ಶಿವಮೂರ್ತಿ ದೊಳ್ಳೇಗೌಡ (60) ಕಾಣೆಯಾಗಿದ್ದಾರೆ. ಕಳೆದ ಏಪ್ರೀಲ್ 13 ರಂದು ನಾಪತ್ತೆಯಾಗಿರುವ ಇವರು 5.3 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪುಬಣ್ಣ, ತೊದಲು ಮಾತನಾಡುತ್ತಾ ಬುದ್ದಿ ಮಾಂದ್ಯ ಹೊಂದಿದ್ದಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಿದ್ದಲ್ಲಿ ಹತ್ತಿರ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಸರ್ಕಲ್ ಇನ್ಸ್ ಪೆಕ್ಟರ್ ಮಹೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Read more Articles on

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!