ಬೈಕ್‌ ಸವಾರನಿಗೆ ಸಹಾಯ ಮಾಡಿ ₹1000 ದಂಡ ತೆತ್ತ ಕಾರು ಚಾಲಕ!

KannadaprabhaNewsNetwork |  
Published : Mar 18, 2026, 04:00 AM IST
Car

ಸಾರಾಂಶ

ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಬೈಕ್ ಸವಾರನಿಗೆ ಸಹಾಯ ಮಾಡಲು ಹೋಗಿ ಕಾರಿನ ಚಾಲಕರೊಬ್ಬರು ಒಂದು ಸಾವಿರ ರು. ದಂಡ ತೆತ್ತಿದ್ದಾರೆ. ಆವಲಹಳ್ಳಿ ಸಮೀಪದ ಹೊಸಕೋಟೆ ರಸ್ತೆಯಲ್ಲಿ ಈ ಘಟನೆ ಮಂಗಳವಾರ ಬೆಳಗ್ಗೆ ನಡೆದಿ ದೆ

 ಬೆಂಗಳೂರು :  ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಬೈಕ್ ಸವಾರನಿಗೆ ಸಹಾಯ ಮಾಡಲು ಹೋಗಿ ಕಾರಿನ ಚಾಲಕರೊಬ್ಬರು ಒಂದು ಸಾವಿರ ರು. ದಂಡ ತೆತ್ತಿದ್ದಾರೆ...!!

ಆವಲಹಳ್ಳಿ ಸಮೀಪದ ಹೊಸಕೋಟೆ ರಸ್ತೆಯಲ್ಲಿ ಈ ಘಟನೆ

ಆವಲಹಳ್ಳಿ ಸಮೀಪದ ಹೊಸಕೋಟೆ ರಸ್ತೆಯಲ್ಲಿ ಈ ಘಟನೆ ಮಂಗಳವಾರ ಬೆಳಗ್ಗೆ ನಡೆದಿದ್ದು, ಕಾರು ಚಾಲಕ ಅಜೀಜ್ ಅವರಿಗೆ ಅಜಾಗರೂಕತೆ ಚಾಲನೆ ಆರೋಪದ ಮೇರೆಗೆ ಕೆ.ಆರ್‌. ಪುರ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ. ಈ ದಂಡ ಪಾವತಿಸಿ ಅವರು ತೆರಳಿದ್ದಾರೆ.

ಬೈಕ್ ಸವಾರನ ನೆರವಿಗೆ ಧಾವಿಸಿ ದಂಡ

ಹೊಸಕೋಟೆ ರಸ್ತೆಯಲ್ಲಿ ಬೈಕ್ ಕೆಟ್ಟು ನಿಂತಿದ್ದನ್ನು ಗಮನಿಸಿದ ಅಜೀಜ್‌ ಅವರು, ಆ ಬೈಕ್ ಸವಾರನ ನೆರವಿಗೆ ಧಾವಿಸಿದ್ದಾರೆ. ತಮ್ಮ ಕಾರಿನ ಡೋರ್ ಹಿಡಿದುಕೊಂಡ ಬೈಕ್ ಸವಾರನನ್ನು ಎಳೆದುಕೊಂಡು ಅವರು ಸಾಗಿದ್ದಾರೆ.

ಈ ವಿಡಿಯೋವನ್ನು ಚಿತ್ರೀಕರಿಸಿದ ಸಾರ್ವಜನಿಕರೊಬ್ಬರು, ಸತ್ಯಾಸತ್ಯತೆ ತಿಳಿಯದೆ ರಸ್ತೆಯಲ್ಲಿ ಬೈಕ್ ಸವಾರನ ಹುಚ್ಚಾಟ ಎಂದು ಹೇಳಿ ವಿಡಿಯೋ ಹರಿಬಿಟ್ಟಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮಾಹಿತಿ ಆಧರಿಸಿ ಕಾರನ್ನು ಪತ್ತೆ ಹಚ್ಚಿದಾಗ ಪೊಲೀಸರಿಗೆ ನಿಜ ಸಂಗತಿ ಗೊತ್ತಾಗಿದೆ. ಆದರೆ ಕಾರು ಬಾಗಿಲನ್ನು ಬೈಕ್ ಸವಾರ ಹಿಡಿದುಕೊಂಡಿದ್ದರೂ ಕಾರು ಚಾಲನೆ ಮಾಡಿದ ತಪ್ಪಿಗೆ ಅಜೀಜ್ ಅವರಿಗೆ ದಂಡ ಬಿದ್ದಿದೆ ಎಂದು ಮೂಲಗಳು ಹೇಳಿವೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಲೋಕಾ ಬಲೆಗೆ ಬಿದ್ದ ಪಿಡಿಒ ಕೈ ಕೊಯ್ದುಕೊಂಡಳು..!
ಟಿಪ್ಪರ್‌-ಶಾಲಾ ಮುಖಾಮುಖಿ ಡಿಕ್ಕಿ