ಹಣ, ಚಿನ್ನಾಭರಣ ಪಡೆದು ವಂಚನೆ: ಐಶ್ವರ್ಯಗೌಡ ವಿರುದ್ಧ ಮತ್ತೊಂದು ದೂರು ದಾಖಲು

KannadaprabhaNewsNetwork |  
Published : Jan 22, 2025, 12:31 AM IST
ಐಶ್ವರ್ಯಗೌಡ  | Kannada Prabha

ಸಾರಾಂಶ

ಚಾಮುಂಡೇಶ್ವರಿ ನಗರದ ನಿವಾಸಿ ಸೌಭಾಗ್ಯ ಅವರು ಐಶ್ವರ್ಯಗೌಡ ವಿರುದ್ಧ ದೂರು ದಾಖಲಿಸಿದ್ದು, ನವ್ಯಶ್ರೀ ಅಲಿಯಾಸ್ ಐಶ್ವರ್ಯಗೌಡ, ಪತಿ ಹರೀಶ್, ಸಹೋದರ ಮಂಜುನಾಥ್ ಹಾಗೂ ಯಶವಂತ್ ಎಂಬುವವರ ವಿರುದ್ಧ ರಿಯಲ್ ‌ಎಸ್ಟೇಟ್ ಹಾಗೂ ಚೀಟಿ ವ್ಯವಹಾರ ಮಾಡುವುದಾಗಿ ಮೋಸ ಮಾಡಿರುವ ಬಗ್ಗೆ ಐಪಿಸಿ ಸೆಕ್ಷನ್ 406, 420, 417,120 ಬಿ, 540, 34 ರ ಅಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಹಣ, ಚಿನ್ನಾಭರಣ ಪಡೆದು ವಂಚನೆ ಆರೋಪದ ಮೇಲೆ ಐಶ್ವರ್ಯಗೌಡ (ನವ್ಯಶ್ರೀ) ವಿರುದ್ಧ ನಗರದ ಪಶ್ಟಿಮ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.

ಚಾಮುಂಡೇಶ್ವರಿ ನಗರದ ನಿವಾಸಿ ಸೌಭಾಗ್ಯ ಅವರು ಐಶ್ವರ್ಯಗೌಡ ವಿರುದ್ಧ ದೂರು ದಾಖಲಿಸಿದ್ದು, ನವ್ಯಶ್ರೀ ಅಲಿಯಾಸ್ ಐಶ್ವರ್ಯಗೌಡ, ಪತಿ ಹರೀಶ್, ಸಹೋದರ ಮಂಜುನಾಥ್ ಹಾಗೂ ಯಶವಂತ್ ಎಂಬುವವರ ವಿರುದ್ಧ ರಿಯಲ್ ‌ಎಸ್ಟೇಟ್ ಹಾಗೂ ಚೀಟಿ ವ್ಯವಹಾರ ಮಾಡುವುದಾಗಿ ಮೋಸ ಮಾಡಿರುವ ಬಗ್ಗೆ ಐಪಿಸಿ ಸೆಕ್ಷನ್ 406, 420, 417,120 ಬಿ, 540, 34 ರ ಅಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕಳೆದ 2017ರ ಜನವರಿಯಿಂದ ಜೂನ್‌ರ ಅವಧಿಯಲ್ಲಿ ಒಟ್ಟು 33 ಲಕ್ಷ ರು. ಹಾಗೂ 366 ಗ್ರಾಂ ಚಿನ್ನದ ಒಡವೆಗಳನ್ನು ಪಡೆದು ನವಶ್ರೀ ಹಾಗೂ ಕುಟುಂಬಸ್ಥರು ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮೃತ ಗಂಡನ ನಿವೃತ್ತಿ ಹಣ, ಉಳಿತಾಯದ ಹಣವನ್ನು ಐಶ್ವರ್ಯಗೌಡರಿಗೆ ನೀಡಿದ್ದೆ. ಒಂದು ಲಕ್ಷಕ್ಕೆ 10 ಪರ್ಸೆಂಟ್ ಬಡ್ಡಿ ಹಣ ನೀಡುವುದಾಗಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ ಮಂಡ್ಯದ ಪೂರ್ವ ಪೊಲೀಸ್ ಠಾಣೆಯಲ್ಲಿ ರವಿಕುಮಾರ್ ಹಾಗೂ ಪೂರ್ಣಿಮಾ ಎಂಬುವವರು 55 ಲಕ್ಷ ನಗದು ಹಾಗೂ ಚಿನ್ನಾಭರಣ ವಂಚನೆ ಪ್ರಕರಣ ದಾಖಲಿಸಿದ್ದರು. ನಿನ್ನೆ ಪೊಲೀಸರು ನೋಟಿಸ್ ‌ನೀಡಿದ್ದರೂ ವಿಚಾರಣೆಗೆ ಹಾಜರಾಗಿರಲಿಲ್ಲ.ಮಂಗಳೂರಿನಲ್ಲಿ ಬ್ಯಾಂಕ್ ದರೋಡೆ ನಂತರ ಎಚ್ಚೆತ್ತ ಮಂಡ್ಯ ಪೊಲೀಸರು

ಮಂಡ್ಯ:

ಮಂಗಳೂರಿನ ಬ್ಯಾಂಕ್ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಎಚ್ಚೆತ್ತ ಮಂಡ್ಯದ ಪೊಲೀಸರು ನಗರದ ವಿವಿಧೆಡೆ ಪೆರೇಡ್ ನಡೆಸಿ ಎಟಿಎಂ ಕೇಂದ್ರಗಳು, ಅಕ್ಕಪಕ್ಕದ ಅಂಗಡಿಗಳ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದರು.

ನಗರದ ವಿವಿ ರಸ್ತೆ ಸೇರಿದಂತೆ ಮುಖ್ಯ ವೃತ್ತಗಳಲ್ಲಿ ಪೊಲೀಸರು ಪೆರೇಡ್ ನಡೆಸಿ ಎಟಿಎಂಗಳ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದರು. ಸೆಕ್ಯೂರಿಟಿ ಇಲ್ಲದ ಎಟಿಎಂಗಳಿಗೆ ಆಗಮಿಸಿ ವೀಕ್ಷಿಸಿದರು.

ಅಲ್ಲದೇ, ರಸ್ತೆಗಳ ಬದಿಯಲ್ಲಿನ ಅಂಗಡಿ ಮುಂಗಟ್ಟುಗಳ ಸಿಸಿ ಕ್ಯಾಮೆರಾಗಳ ಕಾರ್ಯ ಕ್ಷಮತೆ ಬಗ್ಗೆ ಮಾಹಿತಿ ಪಡೆದರು. ಅಂಗಡಿ ಮಾಲೀಕರಿಗೆ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದರು.

PREV

Recommended Stories

ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ
ಹಿಂಸೆ ಸಹಿಸದೆ ಕುಡುಕ ಪತಿಯ ಕೊಲೆ: ಪತ್ನಿ, ಬಾವಿ ಅಳಿಯ ಸೆರೆ