ಹಕ್ಕಿಜ್ವರಕ್ಕೆ ಮೊದಲ ದೇಶಿ ಲಸಿಕೆ

KannadaprabhaNewsNetwork |  
Published : Nov 21, 2026, 03:45 AM IST
ಹಕ್ಕಿ ಜ್ವರ  | Kannada Prabha

ಸಾರಾಂಶ

ಸ್ವದೇಶದಲ್ಲೇ ಅಭಿವೃದ್ಧಿಪಡಿಸಿದ ಹಾಗೂ ಹಕ್ಕಿಜ್ವರದಿಂದ ಕೋಳಿ/ಪಕ್ಷಿಗಳನ್ನು ರಕ್ಷಿಸುವ ದೇಶದ ಮೊದಲ ಎಚ್‌5ಎನ್1 ಲಸಿಕೆಯನ್ನು ಕೇಂದ್ರ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಶುಕ್ರವಾರ ಬಿಡುಗಡೆ ಮಾಡಿದ್ದಾರೆ.

- ಕೋಳಿಗಳನ್ನು ರೋಗದಿಂದ ರಕ್ಷಿಸಲು ರಾಮಬಾಣ

ಭೋಪಾಲ್‌: ಸ್ವದೇಶದಲ್ಲೇ ಅಭಿವೃದ್ಧಿಪಡಿಸಿದ ಹಾಗೂ ಹಕ್ಕಿಜ್ವರದಿಂದ ಕೋಳಿ/ಪಕ್ಷಿಗಳನ್ನು ರಕ್ಷಿಸುವ ದೇಶದ ಮೊದಲ ಎಚ್‌5ಎನ್1 ಲಸಿಕೆಯನ್ನು ಕೇಂದ್ರ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಶುಕ್ರವಾರ ಬಿಡುಗಡೆ ಮಾಡಿದ್ದಾರೆ.

ಭೋಪಾಲ್‌ನ ಐಸಿಎಆರ್‌-ನ್ಯಾಷನಲ್‌ ಆಫ್ ಹೈ ಸೆಕ್ಯುರಿಟಿ ಆ್ಯನಿಮಲ್‌ ಡಿಸೀಸ್‌ ಸಂಸ್ಥೆಯು ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಲಸಿಕೆಯ 1 ಡೋಸ್‌ ಬೆಲೆ ಕೇವಲ 1ರಿಂದ 2 ರು. ಆಗಿದೆ. ಇದು ತೀವ್ರ ರೋಗಕಾರಕವಾದ ಹಕ್ಕಿಜ್ವರಕ್ಕೆ ಕಾರಣವಾಗುವ ಎಚ್‌5ಎನ್‌1 ವೈರಸ್‌ನ 2.3.2.1ಎ ವಂಶಾವಳಿ ಗುಂಪಿನ ವಿರುದ್ಧ ದೇಶದಲ್ಲಿ ಅಭಿವೃದ್ಧಿಪಡಿಸಿದ ಮೊದಲ ಲಸಿಕೆ ಆಗಿದೆ.

ಲಸಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಚೌಹಾಣ್‌ ಅವರು, ಈ ಲಸಿಕೆಯು ಭಾರತದ ಆತ್ಮನಿರ್ಭರತೆಗೆ ಉತ್ತಮ ಉದಾಹರಣೆಯಾಗಿದೆ ಎಂದರು,

ಕಳೆದ ಕೆಲ ವರ್ಷಗಳಿಂದ ದೇಶದಲ್ಲಿ ಹಕ್ಕಿಜ್ವರವು ತೀವ್ರ ಆತಂಕ ಸೃಷ್ಟಿಸಿದ್ದು, ಎಚ್‌5ಎನ್‌1 ವೈರಸ್‌ ಸೋಂಕಿತ ಕೋಳಿ, ಮತ್ತಿತರ ಹಕ್ಕಿಗಳ ಸಾವು ನಿಶ್ಚಿತ ಎನ್ನುವಂತಾಗಿದೆ. ಹಕ್ಕಿಜ್ವರದಿಂದಾಗಿ ದೇಶದ ಕುಕ್ಕುಟೋದ್ಯಮದ ಮೇಲೆ ಭಾರೀ ಹೊಡೆತ ಬೀಳುತ್ತಿರುವುದಲ್ಲದೆ, ಇದು ಮನುಷ್ಯನಿಗೂ ಹರಡು ಆತಂಕ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ದೇಶೀಯ ಲಸಿಕೆಯೊಂದನ್ನು ಅಭಿವೃದ್ಧಿಪಡಿಸಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ನೂತನ ಪಂಚ ಆಯುಕ್ತರಿಂದ ಅಧಿಕಾರ ಸ್ವೀಕಾರ
ಡಿವೈಡರ್‌ ದಾಟಿ ಬೊಲೆರೊಗೆ ಕಾರು ಡಿಕ್ಕಿ: ನಾಲ್ವರು ಸಾವು