ಸರ್ಕಾರದ ಆದೇಶದ ಬೆನ್ನಲ್ಲೇ ಬೆಂಗಳೂರು ನಗರದ ನೂತನ ಸಂಚಾರ ವಿಭಾಗದ ಆಯುಕ್ತರು ಹಾಗೂ ಐವರು ಪೊಲೀಸ್ ಆಯುಕ್ತರು ಗುರುವಾರ ಅಧಿಕಾರ ಸ್ವೀಕರಿಸಿದರು.

-ಅಧಿಕಾರ ಸ್ವೀಕಾರಕ್ಕೂ ಮುನ್ನ ಮುಖ್ಯ ಆಯುಕ್ತರ ಜತೆ ಔಪಚಾರಿಕ ಸಭೆ । ತಮ್ಮ ವ್ಯಾಪ್ತಿಯಲ್ಲೇ ಕಚೇರಿ ಆರಂಭಿಸುವಂತೆ ಹಿತೇಂದ್ರ ಸೂಚನೆ ಕನ್ನಡಪ್ರಭ ವಾರ್ತೆ ಬೆಂಗಳೂರು

ಸರ್ಕಾರದ ಆದೇಶದ ಬೆನ್ನಲ್ಲೇ ಬೆಂಗಳೂರು ನಗರದ ನೂತನ ಸಂಚಾರ ವಿಭಾಗದ ಆಯುಕ್ತರು ಹಾಗೂ ಐವರು ಪೊಲೀಸ್ ಆಯುಕ್ತರು ಗುರುವಾರ ಅಧಿಕಾರ ಸ್ವೀಕರಿಸಿದರು.

ನಗರದಲ್ಲಿ ಹೊಸದಾಗಿ ಆರಂಭಿಸಿದ ತಮ್ಮ ಆಯುಕ್ತಾಲಯದ ಕಚೇರಿಗಳಲ್ಲಿ ಬೆಳಗ್ಗೆ ಐಜಿಪಿಗಳಾದ ಲಾಭೂರಾಮ್ (ಕೇಂದ್ರ) ಪಿ.ಎಸ್.ಹರ್ಷ (ಪೂರ್ವ), ಡಾ.ಬೋರಲಿಂಗಯ್ಯ (ಉತ್ತರ), ವಿಕಾಸ್ ಕುಮಾರ್ (ಪಶ್ಚಿಮ) ಹಾಗೂ ಡಿಐಜಿ ಸಿ.ವಂಶಿಕೃಷ್ಣ (ದಕ್ಷಿಣ) ಅವರು ಹುದ್ದೆ ಅಲಂಕರಿಸಿದರು. ಅಲ್ಲದೆ ಸಂಚಾರ, ರೌಡಿ ನಿಗ್ರಹ ಪಡೆ ಹಾಗೂ ಅಪರಾಧ ನಿಯಂತ್ರಣ ವಿಭಾಗದ ಆಯುಕ್ತರಾಗಿ ಹೇಮಂತ್ ನಿಂಬಾಳ್ಕರ್ ಅಧಿಕಾರ ಸ್ವೀಕರಿಸಿದರು.

ಇದಕ್ಕೂ ಮುನ್ನ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮುಖ್ಯ ಆಯುಕ್ತ ಆರ್‌.ಹಿತೇಂದ್ರ ಅವರೊಂದಿಗೆ ನೂತನ ಐವರು ಪೊಲೀಸ್ ಆಯುಕ್ತರುಗಳ ಔಪಚಾರಿಕ ಸಭೆ ನಡೆಯಿತು. ಈ ಸಭೆಯಲ್ಲಿ ಎಲ್ಲ ತಮ್ಮ ವ್ಯಾಪ್ತಿಯಲ್ಲೇ ಕಚೇರಿ ಆರಂಭಿಸಬೇಕು. ಯಾರೊಬ್ಬರಿಗೂ ಮುಖ್ಯ ಆಯುಕ್ತರ ಕೇಂದ್ರ ಕಚೇರಿಯಲ್ಲಿ ಹಂಚಿಕೆ ಮಾಡುವುದಿಲ್ಲ ಎಂದು ಹಿತೇಂದ್ರ ಸೂಚಿಸಿದರು ಎನ್ನಲಾಗಿದೆ.

ಎಲ್ಲೆಲ್ಲಿ ಆಯುಕ್ತರ ಕಚೇರಿಗಳು:

ಆಯುಕ್ತಕಚೇರಿ

ಕೇಂದ್ರ ಕಬ್ಬನ್ ಪಾರ್ಕ್ ಸಮೀಪದ ಕೇಂದ್ರ ವಿಭಾಗದ ಡಿಸಿಪಿ ಕಚೇರಿ

ಪಶ್ಚಿಮಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದ ಮುಂದೆ ಪಶ್ಚಿಮ ವಿಭಾಗದ ಡಿಸಿಪಿ ಕಚೇರಿ

ಉತ್ತರಯಶವಂತಪುರ ಮೇಲ್ಸೇತುವೆ ಸಮೀಪ ಉತ್ತರ ವಿಭಾಗದ ಡಿಸಿಪಿ ಕಚೇರಿ

ದಕ್ಷಿಣಕೋರಮಂಗಲದಲ್ಲಿರುವ ಆಗ್ನೇಯ ವಿಭಾಗದ ಡಿಸಿಪಿ ಕಚೇರಿ

ಪೂರ್ವಮಾರತ್ತಹಳ್ಳಿ ಪೊಲೀಸ್ ಠಾಣೆಯ ನೂತನ ಕಟ್ಟಡದ

.......................................................................

ಹೊಸ ಡಿಸಿಪಿ ಕಚೇರಿಗಳ ವಿವರ

ಡಿಸಿಪಿಕಚೇರಿ

ಕೇಂದ್ರಕಬ್ಬನ್ ಪಾರ್ಕ್ ಠಾಣೆಯ (ಎನ್‌ಟಿಎಫ್‌ ಕಚೇರಿ)

ಇಂದಿರಾ ನಗರ ಪೂರ್ವ ವಿಭಾಗದ ಡಿಸಿಪಿ ಕಚೇರಿ

ಗಾಂಧಿನಗರ ಪಶ್ಚಿಮ ವಿಭಾಗ (ಸಂಚಾರ)ದ ಕಚೇರಿ

ಸಂಚಾರ (ಕೇಂದ್ರ) ಟಿಎಂಸಿಯ ಪೂರ್ವ (ಸಂಚಾರ) ಡಿಸಿಪಿ ಕಚೇರಿ

ಪಶ್ಚಿಮರಾಜಾಜಿನಗರ ಪೊಲೀಸ್ ಠಾಣೆ

ಪೀಣ್ಯಡಿಸಿಪಿ ನೈಋತ್ಯ ವಿಭಾಗದ ಕಚೇರಿ

ಪಶ್ಚಿಮ (ಸಂಚಾರ)ಮಾಗಡಿ ರಸ್ತೆಯ ಪಶ್ಚಿಮ ಆಯುಕ್ತರ ಕಚೇರಿ

ಆಗ್ನೇಯಹಳೇ ಆಗ್ನೇಯ ಡಿಸಿಪಿ ವಿಭಾಗದ ಕಚೇರಿ

ಉತ್ತರಸಂಜಯನಗರ ಪೊಲೀಸ್ ಠಾಣೆ

ಯಶವಂತಪುರಗಂಗಮ್ಮನಗುಡಿ ಪೊಲೀಸ್ ಠಾಣೆ

ಪೂರ್ವರಾಮಮೂರ್ತಿನಗರ ಪೊಲೀಸ್ ಠಾಣೆ

ಪೂರ್ವ (ಸಂಚಾರ)ಮಹದೇವಪುರ ಪೊಲೀಸ್ ಠಾಣೆ