ಬೈಕ್‌ಗಳ ನಡುವೆ ಡಿಕ್ಕಿ: ಇಬ್ಬರು ಸಾವು

KannadaprabhaNewsNetwork |  
Published : Oct 18, 2023, 01:00 AM ISTUpdated : Oct 18, 2023, 01:01 AM IST
17ಕೆಎಂಎನ್ ಡಿ36ಶ್ರೀರಂಗಪಟ್ಟಣದ ಟಿ.ಎಂ ಹೊಸೂರು  - ಗೌಡಹಳ್ಳಿ ಗೇಟ್ ಬಳಿ ಹೆದ್ದಾರಿಯಲ್ಲಿ  ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿರುವುದು. | Kannada Prabha

ಸಾರಾಂಶ

ಬೈಕ್‌ಗಳ ನಡುವೆ ಡಿಕ್ಕಿ: ಇಬ್ಬರು ಸಾವು

ಶ್ರೀರಂಗಪಟ್ಟಣ: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಟಿ.ಎಂ. ಹೊಸೂರು - ಗೌಡಹಳ್ಳಿ ಗೇಟ್ ಬಳಿಯ ಹೆದ್ದಾರಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ತಾಲೂಕಿನ ಗೌಡಹಳ್ಳಿ ಶ್ರೀಧರ್ ಬಿನ್ ರಾಮಲಿಂಗೇಗೌಡ (35) ಹಾಗೂ ಶ್ರೀನಿವಾಸ ಅಗ್ರಹಾರ ಗ್ರಾಮದ ಪುನೀತ್ ಬಿನ್ ಲೋಕೇಶ್ (34) ಮೃತಪಟ್ಟವರು. ಯೋಗೇಶ್ ಮತ್ತು ದರ್ಶನ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 17ಕೆಎಂಎನ್ ಡಿ36 ಶ್ರೀರಂಗಪಟ್ಟಣದ ಟಿ.ಎಂ ಹೊಸೂರು - ಗೌಡಹಳ್ಳಿ ಗೇಟ್ ಬಳಿ ಹೆದ್ದಾರಿಯಲ್ಲಿ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿರುವುದು.

PREV

Recommended Stories

ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!
ಗ್ರಾಮ ಲೆಕ್ಕಿಗರ ಹುದ್ದೆಗೆ ನಕಲಿ ಅಂಗವಿಕಲ ಪ್ರಮಾಣಪತ್ರ ಸಲ್ಲಿಕೆ...!