ಕನ್ನಡಪ್ರಭ ವಾರ್ತೆ ಮದ್ದೂರು
ಮಂಡ್ಯ ತಾಲೂಕಿನ ಬಿ.ಗೌಡಗೆರೆ ಗ್ರಾಮದ ನಾಗಣ್ಣನ ಪುತ್ರ ಜಿ.ಎನ್.ಅಭಿಷೇಕ್ (36) ಹಾಗೂ ಮದ್ದೂರು ತಾಲೂಕು ಮರಕಾಡುದೊಡ್ಡಿ ಗ್ರಾಮದ ನಾಗರಾಜು ಪುತ್ರ ಬೋರೇಗೌಡ (27) ಮೃತಪಟ್ಟ ಸವಾರರು. ಹಿಂಬದಿ ಸವಾರ ಮಳವಳ್ಳಿ ತಾಲೂಕು ದೇವಿಪುರ ಗ್ರಾಮದ ರಮೇಶ್ ಪುತ್ರ ಸಂತೋಷ್ (19) ತೀವ್ರವಾಗಿ ಗಾಯಗೊಂಡಿದ್ದು, ಈತನನ್ನು ಮದ್ದೂರಿನಲ್ಲಿ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈತ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ.
ಮೃತ ಅಭಿಷೇಕ್ ತನ್ನ ಬಜಾಜ್ ಪಲ್ಸರ್ ಬೈಕ್‌ನಲ್ಲಿ ಹೆದ್ದಾರಿ ಸರ್ವೀಸ್ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದನು. ಬೋರೇಗೌಡ ತನ್ನ ಸ್ನೇಹಿತ ಸಂತೋಷ್ ನೊಂದಿಗೆ ಹೋಂಡಾ ಆಕ್ಟಿವಾದಲ್ಲಿ ಮೈಸೂರು ದಸರಾ ವೀಕ್ಷಿಸಿ ವಾಪಸ್ ಬರುತ್ತಿದ್ದನು.ರಾತ್ರಿ 11 ಗಂಟೆ ಸುಮಾರಿಗೆ ಅಭಿಷೇಕ್ ಚಾಲನೆ ಮಾಡುತ್ತಿದ್ದ ಬೈಕ್ ಹೋಂಡಾ ಆಕ್ಟಿವಾಗೆ ನೇರವಾಗಿ ಡಿಕ್ಕಿಯಾದ ಪರಿಣಾಮ ಚಾಲಕರಿಬ್ಬರು ಹಾರಿ ರಸ್ತೆ ಮಧ್ಯೆ ಅಳವಡಿಸಲಾಗಿತ್ತು ತಂತಿ ಬೇಲಿಗೆ ಗುದ್ದಿ ಡಿವೈಂಡರ್‌ಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಭಿಕ್ಷಾಟನೆಯಲ್ಲಿ ತೊಡಗಿದ್ದ ನಾಲ್ವರು ಮಕ್ಕಳು, ಇಬ್ಬರು ಮಹಿಳೆಯರು ವಶಕ್ಕೆ
ತಹಸೀಲ್ದಾರ್ ಎಸ್.ವಿ.ಲೋಕೇಶ್ ಅವರ ಮಾರ್ಗದರ್ಶನದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಸಂತೋಷ್ ಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಇ.ನಂಜಮಣಿ ಹಾಗೂ ಪಟ್ಟಣದ ಪೊಲೀಸ್ ಠಾಣೆ ಹರ್ಷವರ್ಧನ್ ನೇತೃತ್ವದಲ್ಲಿ ಅನಂತ್ ರಾಂ ವೃತ್ತದ ಸಮೀಪ ಜಂಟಿ ಕಾರ್ಯಾಚರಣೆ ನಡೆಸಿದರು.ಪಟ್ಟಣದಲ್ಲಿ ಸಣ್ಣ ಮಗುವಿನೊಂದಿಗೆ ಭಿಕ್ಷಾಟನೆ ಮಾಡುತ್ತಿದ್ದ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿಯ ಐವರನ್ನು ವಶಕ್ಕೆ ಪಡೆದು ಪಟ್ಟಣದ ಪೊಲೀಸ್ ಠಾಣೆಗೆ ಕರೆತಂದು ಮಾಹಿತಿ ಪಡೆದುಕೊಳ್ಳಲಾಯಿತು. ಠಾಣೆಯಲ್ಲಿ ಮಕ್ಕಳು ಮತ್ತು ಮಹಿಳೆಯರ ಆಧಾರ್ ಕಾರ್ಡ್ ಪರಿಶೀಲನೆ ನಡೆಸಿದ ಅಧಿಕಾರಿಗಳು ವಿಳಾಸದ ಬಗ್ಗೆ ಖಚಿತ ಪಡಿಸಿಕೊಂಡರು.
ಮಂಡ್ಯದ ಕಚೇರಿಯಲ್ಲಿ ವಿಚಾರಣೆ ನಡೆಸಿ ಮೇಲಧಿಕಾರಿಗಳು ಸೂಚನೆಯಂತೆ ಕ್ರಮ ವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.ತಹಸೀಲ್ದಾರ್ ಎಸ್.ವಿ.ಲೋಕೇಶ್ ಮಾತನಾಡಿ, ಕಳೆದ ಹಲವು ತಿಂಗಳಿಂದ ನಿರಂತರವಾಗಿ ಹೊರಗಿನಿಂದ ಸಣ್ಣ ಮಕ್ಕಳೊಂದಿಗೆ ಬಂದು ಭಿಕ್ಷಾಟನೆಯಲ್ಲಿ ತೊಡಗುತ್ತಿದ್ದರು. ಈ ಹಿಂದೆ ಕಾರ್ಯಾಚರಣೆ ನಡೆಸುವುದಷ್ಟರಲ್ಲಿ ನಾಪತ್ತೆ ಆಗುತ್ತಿದ್ದರು. ಅವರ ಹಿನ್ನೆಲೆಯನ್ನು ಪರಿಶೀಲಿಸಲು ಸೂಚನೆ ನೀಡಲಾಗಿದೆ. ಜೀವನ ನಡೆಸಲು ಸರ್ಕಾರಿ ಹಲವಾರು ಸವಲತ್ತುಗಳನ್ನು ನೀಡುತ್ತಿದ್ದು, ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.