3 ದಿನದಲ್ಲಿ ವಿಚಾರಣೆಗೆ ಬನ್ನಿ : ಅತುಲ್‌ ಪತ್ನಿಗೆ ನೋಟಿಸ್‌ - ಜೌನ್‌ಪುರ ಮನೆಗೆ ನೋಟಿಸ್‌ ಅಂಟಿಸಿದ ಬೆಂಗಳೂರು ಪೊಲೀಸ್‌

ಸಾರಾಂಶ

ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿಂತೆ ಬೆಂಗಳೂರಿನ ನಗರ ಪೊಲೀಸರು ಶುಕ್ರವಾರ ಅತುಲ್ ಪತ್ನಿ ನಿಕಿತಾ ಸಿಂಘಾನಿಯಾಗೆ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಲು 3 ದಿನಗಳ ಗಡುವು ನೀಡಿದ್ದಾರೆ.

ಜೌನ್‌ಪುರ (ಉ.ಪ್ರ.): ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿಂತೆ ಬೆಂಗಳೂರಿನ ನಗರ ಪೊಲೀಸರು ಶುಕ್ರವಾರ ಅತುಲ್ ಪತ್ನಿ ನಿಕಿತಾ ಸಿಂಘಾನಿಯಾಗೆ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಲು 3 ದಿನಗಳ ಗಡುವು ನೀಡಿದ್ದಾರೆ.

ಸಬ್‌ ಇನ್ಸ್‌ಪೆಕ್ಟರ್‌ ಸಂಜಿತ್ ಕುಮಾರ್‌ ನೇತೃತ್ವದ ಬೆಂಗಳೂರು ನಗರ ಪೊಲೀಸರ ನಾಲ್ವರು ತಂಡವು ಶುಕ್ರವಾರ ಉತ್ತರ ಪ್ರದೇಶದ ಜೌನ್‌ಪುರ ನಗರದ ಖೋವಾ ಮಂಡಿ ಪ್ರದೇಶದಲ್ಲಿರುವ ಸಿಂಘಾನಿಯಾ ಅವರ ನಿವಾಸಕ್ಕೆ ತೆರಳಿದೆ. ಈ ವೇಳೆ ಮನೆಯಲ್ಲಿ ಯಾರು ಇಲ್ಲದ ಕಾರಣ ಅವರ ಮನೆಗೆ ನೋಟಿಸ್‌ ಅಂಟಿಸಿದೆ.

ಪೊಲೀಸರು ನೀಡಿರುವ ನೋಟಿಸಿನ ಪ್ರಕಾರ, ಅತುಲ್ ಸುಭಾಷ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸ್‌ ಠಾಣೆಯ ತನಿಖಾಧಿಕಾರಿಯ ಮುಂದೆ ಮೂರು ದಿನಗಳೊಳಗೆ ವಿಚಾರಣೆಗೆ ಹಾಜರಾಗುವಂತೆ ನಿಕಿತಾಗೆ ಸೂಚಿಸಿದ್ದಾರೆ.

ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ನಿಕಿತಾ ತಾಯಿ ನಿಶಾ ಸಿಂಘಾನಿಯಾ, ಚಿಕ್ಕಪ್ಪ ಸುಶೀಲ್ ಸಿಂಘಾನಿಯಾ, ಸಹೋದರ ಅನುರಾಗ್ ಸಿಂಘಾನಿಯಾ ಹೆಸರು ಉಲ್ಲೇಖಗೊಂಡಿದ್ದರೂ, ಪೊಲೀಸರು ಯಾವುದೇ ನೋಟಿಸ್‌ ನೀಡಿಲ್ಲ.

Share this article