ನಾಟಕಕಾರ ಅಡ್ಡಂಡ ಕಾರ್ಯಪ್ಪಗೆ ಮಸಿ!

KannadaprabhaNewsNetwork |  
Published : Nov 01, 2026, 03:00 AM IST
Drama

ಸಾರಾಂಶ

ನಾಟಕ ಪ್ರದರ್ಶನದ ವೇಳೆ ಮಹಾತ್ಮ ಗಾಂಧೀಜಿ ವಿರುದ್ಧ ಆಕ್ಷೇಪಾರ್ಹ ಪದಗಳ ಬಳಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಾಟಕಕ್ಕೆ ಅಡ್ಡಿಪಡಿಸಿ, ನಾಟಕ ರಚನೆಕಾರ ಅಡ್ಡಂಡ ಕಾರ್ಯಪ್ಪ ಅವರಿಗೆ ಮಸಿ ಬಳಿದಿದ್ದಾರೆ.

ಬೆಂಗಳೂರು : ನಾಟಕ ಪ್ರದರ್ಶನದ ವೇಳೆ ಮಹಾತ್ಮ ಗಾಂಧೀಜಿ ವಿರುದ್ಧ ಆಕ್ಷೇಪಾರ್ಹ ಪದಗಳ ಬಳಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಾಟಕಕ್ಕೆ ಅಡ್ಡಿಪಡಿಸಿ, ನಾಟಕ ರಚನೆಕಾರ ಅಡ್ಡಂಡ ಕಾರ್ಯಪ್ಪ ಅವರಿಗೆ ಮಸಿ ಬಳಿದಿದ್ದಾರೆ.

ಗಾಂಧಿ ಹತ್ಯೆಯ ಸತ್ಯ ಎಂಬ ನಾಟಕ ಪ್ರದರ್ಶನ

ಶನಿವಾರ 7.30 ಸುಮಾರಿಗೆ ಬನಶಂಕರಿ ಸಮೀಪದ ಸುಚಿತ್ರ ಅಕಾಡೆಮಿಯಲ್ಲಿ ಗಾಂಧಿ ಹತ್ಯೆಯ ಸತ್ಯ ಎಂಬ ನಾಟಕ ಪ್ರದರ್ಶನವಾಗುತ್ತಿತ್ತು. ಈ ವೇಳೆ ಗಾಂಧಿ ದೇಶದ್ರೋಹಿ ಎಂಬ ಸಂಭಾಷಣೆ ಬಂದಿದ್ದು, ಈ ಸಂಭಾಷಣೆ ಕೇಳಿ ಆಕ್ರೋಶಗೊಂಡ ವೀಕ್ಷಕರು ನಾಟಕಕ್ಕೆ ಅಡ್ಡಿಪಡಿಸಿದ್ದಾರೆ. ಆಗ ನಡೆದ ಗಲಾಟೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಂಡ ಕಾರ್ಯಪ್ಪ ಅವರಿಗೆ ಮಸಿ ಬಳಿದಿದ್ದಾರೆ.

ಈ ಸಮಯದಲ್ಲಿ ವಾಗ್ವಾದ ಗದ್ದಲ

ಈ ಸಮಯದಲ್ಲಿ ವಾಗ್ವಾದ ಗದ್ದಲ ಉಂಟಾಗಿ ಒಂದು ರೀತಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಪೊಲೀಸರ ಮುಂದೆಯೇ ಕಾಂಗ್ರೆಸ್‌ ಕಾರ್ಯಕರ್ತರು ಅಡ್ಡಂಡ ಕಾರ್ಯಪ್ಪ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ. ಸಾಕಷ್ಟು ಹರಸಾಹಸಪಟ್ಟು ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಸಂಬಂಧ ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

₹40 ಲಕ್ಷ ಎಗರಿಸಿದ್ದ ಕೆಲಸದವನ ಸೆರೆ
ವೈದ್ಯರ ನಿರ್ಲಕ್ಷ್ಯದಿಂದ 1 ವರ್ಷದ ಮಗು 3 ತಿಂಗಳಿಂದ ಕೋಮಾದಲ್ಲಿ: ಆರೋಪ