ಚಿರತೆ ದಾಳಿಗೆ ಹಸುವಿನ ಕರು ಬಲಿ: ಆತಂಕ

KannadaprabhaNewsNetwork |  
Published : Jun 26, 2026, 01:45 AM IST
Leopard

ಸಾರಾಂಶ

ಚಿರತೆ ದಾಳಿ ಮಾಡಿ ಎರಡು ತಿಂಗಳ ಕರುವನ್ನು ಬಲಿ ಪಡೆದಿರುವ ಘಟನೆ ಸಮೀಪದ ಬಾಣಗಳ್ಳಿಯಲ್ಲಿ ನಡೆದಿದೆ.ಗ್ರಾಮದ ಲಿಂಗೇಗೌಡರ ಪುತ್ರ ಬಿ.ಎಸ್.ರಮೇಶ್ ತಮ್ಮ ಜೀವನೋಪಯಕ್ಕಾಗಿ ವ್ಯವಸಾಯ ಮತ್ತು ಹಸು ಸಾಕಾಣಿಕೆ ಮಾಡಿಕೊಂಡಿದ್ದರು.

ಹಲಗೂರು:  ಚಿರತೆ ದಾಳಿ ಮಾಡಿ ಎರಡು ತಿಂಗಳ ಕರುವನ್ನು ಬಲಿ ಪಡೆದಿರುವ ಘಟನೆ ಸಮೀಪದ ಬಾಣಗಳ್ಳಿಯಲ್ಲಿ ನಡೆದಿದೆ.ಗ್ರಾಮದ ಲಿಂಗೇಗೌಡರ ಪುತ್ರ ಬಿ.ಎಸ್.ರಮೇಶ್ ತಮ್ಮ ಜೀವನೋಪಯಕ್ಕಾಗಿ ವ್ಯವಸಾಯ ಮತ್ತು ಹಸು ಸಾಕಾಣಿಕೆ ಮಾಡಿಕೊಂಡಿದ್ದರು. ಎಂದಿನಂತೆ ತಮ್ಮ ತೋಟದ ಮನೆ ಕೊಟ್ಟಿಗೆಯಲ್ಲಿ ಹಸು ಕರುಗಳನ್ನು ಕಟ್ಟಿ ಹಾಕಿದ್ದು, ಬುಧವಾರ ತಡರಾತ್ರಿ ಚಿರತೆ ಬಂದು ಒಂದು ರೆಡ್ಡೆನ್ ಕ್ರಾಸ್ ತಳಿ ಕರುವನ್ನು ತಿಂದಿದೆ.

ಚಿರತೆ ಕೃತ್ಯ

ನಮಗೆ ನಮ್ಮ ನಾಯಿ ಮತ್ತು ಹಸು ಕರುಗಳು ಕಿರುಚಿದ ಸದ್ದಿನಿಂದ ಬಂದು ನೋಡಿದಾಗ ಚಿರತೆ ಕೃತ್ಯ ಕಂಡುಬಂದಿದೆ. ತಕ್ಷಣ ಮಳವಳ್ಳಿ ಮತ್ತು ಹಲಗೂರು ಅರಣ್ಯ ಇಲಾಖೆ ಗಸ್ತು ಪಾಲಕ ಕೃಷ್ಣ ಅವರಿಗೆ ವಿಷಯ ತಿಳಿಸಿದ ಮೇರೆಗೆ ಸ್ಥಳಕ್ಕೆ ಬಂದ ಅವರು ಸ್ಥಳ ಪರಿಶೀಲಿಸಿ ಪಶು ವೈದಾಧಿಕಾರಿ ಪ್ರವೀಣ್ ಅವರಿಂದ ಕರುವಿನ ಶವಪರೀಕ್ಷೆ ನಡೆಸಿದ್ದಾರೆ.

ರಾತ್ರಿ ವೇಳೆ ಚಿರತೆ ಬರುತ್ತಿರುವುದರಿಂದ ಭಯಪಡುವ ಪರಿಸ್ಥಿತಿ ಇದೆ. ನಮಗೆ ರಕ್ಷಣೆ ಇಲ್ಲ. ಆದ್ದರಿಂದ ಚಿರತೆ ಹಿಡಿಯುವ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡುವ ಜೊತೆಗೆ ನಮಗೆ ಸೂಕ್ತ ಪರಿಹಾರ ಕೊಡಿಸುವಂತೆ ಮನವಿ ಪತ್ರ ಸಲ್ಲಿಸಿದರು.

ಅರಣ್ಯ ಇಲಾಖೆ ಕೃಷ್ಣ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಈಗಾಗಲೇ ಬೆಳ್ತೂರು ಗ್ರಾಮದಲ್ಲಿ ಇಟ್ಟಿರುವ ಬೋನನ್ನು ಬಾಣಗಳ್ಳಿ ರಮೇಶ್ ಅವರ ಜಮೀನಿನಲ್ಲಿ ಇಟ್ಟಿದ್ದೇವೆ. ಅವರಿಗೆ ನಷ್ಟಕ್ಕೆ ಮನವಿ ಪತ್ರವನ್ನು ನಮ್ಮ ಅಧಿಕಾರಿಗಳ ಅವರಿಗೆ ತಲುಪಿಸಿ ಸರ್ಕಾರದಿಂದ ಸಿಗುವ ಹಣವನ್ನು ಕೊಡಿಸಿ ಕೊಡುವುದಾಗಿ ಭರವಸೆ ನೀಡಿದರು.  

ನಿರ್ಜನ ಪ್ರದೇಶದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ: ದುಷ್ಕರ್ಮಿಗಳಿಂದ ಕೊಲೆ

 ಮಳವಳ್ಳಿ : ತಾಲೂಕಿನ ಜವನಗಹಳ್ಳಿ ಗುಡ್ಡದ ಬಳಿಯ ರಾಷ್ಟ್ರೀಯ ಹೆದ್ದಾರಿ-948ರ ಸಮೀಪದ ನಿರ್ಜನ ಪ್ರದೇಶದಲ್ಲಿ ಬುಧವಾರ ರಾತ್ರಿ ಅರೆಬೆಂದ ಸ್ಥಿತಿಯಲ್ಲಿ ಯುವತಿಯೊಬ್ಬಳ ಶವ ಪತ್ತೆಯಾಗಿದ್ದು, ಅಪರಿಚಿತರಿಂದ ಕೊಲೆ ಶಂಕೆ ವ್ಯಕ್ತವಾಗಿದೆ.

ಸುಮಾರು 18-19 ವರ್ಷದ ವಯಸ್ಸಿನ ಯುವತಿ ಶವ ಇರಬಹುದು ಎಂದು ಅಂದಾಜಿಸಲಾಗಿದೆ. ದುಷ್ಕರ್ಮಿಗಳು ಯುವತಿಯನ್ನು ಬೇರೆಡೆ ಕೊಲೆ ಮಾಡಿ ಸಾಕ್ಷಿ ನಾಶಕ್ಕಾಗಿ ಶವವನ್ನು ಜವನಗಹಳ್ಳಿ ಗುಡ್ಡದ ಬಳಿಯ ನಿರ್ಜನ ಪ್ರದೇಶಕ್ಕೆ ತಂದು ಪೆಟ್ರೋಲ್ ಅಥವಾ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸುಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.ಸ್ಥಳೀಯ ಮುಖಂಡ ರಘು ಅವರು ಬುಧವಾರ ರಾತ್ರಿ ಅರೆಬೆಂದ ಸ್ಥಿತಿಯ ಶವವನ್ನು ಕಂಡು ಬೆಳಕವಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಬೆಳಕವಾಡಿ ಪಿಎಸ್ಐ ಪ್ರಕಾಶ್ ಪರಿಶೀಲನೆ ನಡೆಸಿದರು. ಶ್ವಾನದಳ, ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಆಗಮಿಸಿ ಸಾಕ್ಷ್ಯ ಸಂಗ್ರಹಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಶೋಭಾರಾಣಿ, ಡಿವೈಎಸ್ಪಿ ಎಸ್.ಬಿ.ಯಶವಂತ ಕುಮಾರ್, ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಮೃತ ಯುವತಿ ಗುರುತು ಪತ್ತೆಗೆ ಪೊಲೀಸರು ಸುತ್ತಮುತ್ತಲಿನ ಠಾಣೆಗಳಿಗೆ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಶ್ರೀರಂಗಪಟ್ಟಣದ 4 ಮಕ್ಕಳ ಸಾವಿಗೆ ಹೈಕೋರ್ಟ್ ಗರಂ
ಕೇಬಲ್ ಅಳವಡಿಕೆ ವೇಳೆ ವಿದ್ಯುತ್ ಸ್ಪರ್ಶ: ಗುತ್ತಿಗೆ ನೌಕರ ಕಂಬದಲ್ಲೇ ಸಾವು