ಚೆನ್ನೀಪುರ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟ, ಅಪಾರ ನಷ್ಟ..!

KannadaprabhaNewsNetwork |  
Published : Mar 05, 2026, 01:45 AM ISTUpdated : Mar 05, 2026, 02:19 AM IST
Cylinder

ಸಾರಾಂಶ

ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಅಪಾರ ನಷ್ಟ ಉಂಟಾಗಿರುವ ಘಟನೆ ಸಮೀಪದ ಚೆನ್ನೀಪುರ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.ಗ್ರಾಮದ ಉಮೇಶ್ ಅವರ ಮನೆಯಲ್ಲಿ ಬಾಣಸಮುದ್ರ ಗ್ರಾಮದ ವೆಂಕಟೇಗೌಡ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

ಹಲಗೂರು:  ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಅಪಾರ ನಷ್ಟ ಉಂಟಾಗಿರುವ ಘಟನೆ ಸಮೀಪದ ಚೆನ್ನೀಪುರ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

ಗ್ರಾಮದ ಉಮೇಶ್ ಅವರ ಮನೆಯಲ್ಲಿ ಬಾಣಸಮುದ್ರ ಗ್ರಾಮದ ವೆಂಕಟೇಗೌಡ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಬುಧವಾರ ಎಂದಿನಂತೆ ವೆಂಕಟೇಗೌಡ ಅಡುಗೆ ನಂತರ ಊಟ ಮಾಡಿ ಕೆಲಸಕ್ಕೆ ತೆರಳಿದ್ದರು.

ಬೆಳಗ್ಗೆ 10:50 ರ ಸಮಯದಲ್ಲಿ ಆಕಸ್ಮಿಕವಾಗಿ ಸ್ಫೋಟಗೊಂಡಿದೆ. ಸಿಡಿದ ರಭಸಕ್ಕೆ ಮನೆಯಲ್ಲಿ ಇಟ್ಟಿದ್ದ ಪಾತ್ರೆಗಳು, ಬಟ್ಟೆ, ಆಹಾರ ಪದಾರ್ಥಗಳು ಸುಟ್ಟು ಹೋಗಿವೆ. ತಕ್ಷಣ ಕಾರ್ಯ ಪ್ರವೃತ್ತರಾದ ನೆರೆಹೊರೆಯ ವಾಸಿಗಳು ಸೇರಿಕೊಂಡು ನೀರು ಹಾಕಿದ್ದಾರೆ.

ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಅಕ್ಕ ಪಕ್ಕದ ಮನೆಗೆ ತಗುಲಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.

ಮನೆಯಲ್ಲಿದ್ದ ಬೆಕ್ಕು ಸುಟ್ಟು ಕರಕಲಾಗಿದೆ.

ಮನೆಯಲ್ಲಿದ್ದ ಬೆಕ್ಕು ಸುಟ್ಟು ಕರಕಲಾಗಿದೆ. ಮನೆ ಕಬ್ಬಿಣದ ಪೆಟ್ಟಿಗೆಯಲ್ಲಿ ಇಟ್ಟಿದ್ದ ಗುರುತಿನ ಚೀಟಿ ಇನ್ನಿತರ ದಾಖಲೆಗಳು ಸೇರಿದಂತೆ ಸುಮಾರು 25 ಸಾವಿರ ನಗದು ಸುಟ್ಟು ಅಪಾರ ನಷ್ಟವಾಗಿದೆ ಎಂದು ಸಂತ್ರಸ್ತ ವೆಂಕಟೇಗೌಡ ನೋವು ತೊಡಿಕೊಂಡರು.

ಅಡುಗೆ ಮುಗಿದ ನಂತರ ಮತ್ರು ರಾತ್ರಿ ವೇಳೆ ಖಂಡಿತವಾಗಿ ರೆಗ್ಯುಲೇಟರ್ ಅಪ್ ಮಾಡಿ ಪ್ರತಿ ಎರಡು ವರ್ಷಕ್ಕೊಮ್ಮೆ ಐಎಸ್ಐ ಮಾರ್ಕ್ ಇರುವ ರಬ್ಬರ್ ಟ್ಯೂಬ್ ಬದಲಾಯಿಸಿ ಗಾಳಿ ಬೆಳಕು ಇರುವ ಜಾಗದಲ್ಲಿ ಗಾಳಿ ಸರಾಗವಾಗಿ ಅಡುವಂತೆ ನೋಡಿಕೊಳ್ಳಿ ಎಂದು ಗ್ರಾಮದ ನಿವಾಸಿ ಶಿವರಾಜು ಮನವಿ ಮಾಡಿದರು.

ಕಾರ್ಯಾಚರಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾ ಅಧಿಕಾರಿ ಪಿ.ಹೇಮಂತ್ ಕುಮಾರ್, ಸಿಬ್ಬಂದಿ ಸಿದ್ದರಾಮಯ್ಯ, ರಘು, ದಶರಥ, ಗಗನ್ ದೀಪ್, ಮೋಹನ್ ಕುಮಾರ್ ಸೇರಿದಂತೆ ಹಲವರು ಇದ್ದರು. 

ನಿಟ್ಟೂರಿನಲ್ಲಿ ಬೋನಿಗೆ ಬಿದ್ದ ಹೆಣ್ಣು ಚಿರತೆ

ಹಲಗೂರು: ಸಮೀಪದ ನಿಟ್ಟೂರು ಗ್ರಾಮದ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಮಂಗಳವಾರ ತಡರಾತ್ರಿ ಹೆಣ್ಣು ಚಿರತೆ ಸೆರೆಯಾಗಿದೆ.ಕಳೆದ ಕೆಲವು ದಿನಗಳಿಂದ ನಿಟ್ಟೂರು, ನಿ.ಕೋಡಿಹಳ್ಳಿ, ನಿ.ಹೊಸದೊಡ್ಡಿ, ಹಂಡನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ರೈತರ ಮೇಕೆ, ಕುರಿ ಹಾಗೂ ಹಸುಗಳ ಮೇಲೆ ದಾಳಿ ಮಾಡಿ ಗ್ರಾಮಸ್ಥರಲ್ಲಿ ಆತಂಕ ಮೂಡಿತ್ತು.

ಈ ಹಿನ್ನೆಲೆಯಲ್ಲಿ ಗ್ರಾಮದ ಚೌಡೇಗೌಡ ಬಿನ್ ಬಸವರಾಜು ಅವರಿಗೆ ಸೇರಿದ ಜಮೀನಿನಲ್ಲಿ ಅರಣ್ಯ ಇಲಾಖೆ ಕೆಲವು ದಿನಗಳ ಹಿಂದೆ ಬೋನು ಇರಿಸಿತ್ತು. ಮಂಗಳವಾರ ತಡರಾತ್ರಿಯಲ್ಲಿ ಸುಮಾರು ಮೂರುವರೆ ವರ್ಷದ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ.ಸೆರೆಯಾದ ಚಿರತೆಯನ್ನು ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಬೆಂಗಳೂರಲ್ಲಿ ಮೊಬೈಲ್ ಕದಿಯಲು ದೆಹಲಿಯಿಂದ ವಿಮಾನದಲ್ಲಿ ಬರುತ್ತಿದ್ದ ಚಾಲಾಕಿಗಳ ಬಂಧನ
ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ