ಫ್ಲ್ಯಾಟ್‌ಗಳ ಕಾಲಿಂಗ್ ಬೇಲ್ ಮಾಡಿ ತೆರೆಯದ್ದಿದ್ದರೆ ಕಳವು ಮಾಡುತ್ತಿದ್ದ ಖತರ್ನಾಕ್‌ ಖದೀಮ ಬಂಧನ

KannadaprabhaNewsNetwork |  
Published : Jul 09, 2025, 01:34 AM ISTUpdated : Jul 09, 2025, 12:49 PM IST
women in jail

ಸಾರಾಂಶ

ತಾನು ವಾಸವಿದ್ದ ಅಪಾರ್ಟ್‌ಮೆಂಟ್‌ನಲ್ಲಿ ರಾತ್ರಿ ವೇಳೆ ಫ್ಲ್ಯಾಟ್‌ಗಳಿಗೆ ಕನ್ನ ಹಾಕುತ್ತಿದ್ದ ರಿಯಲ್ ಎಸ್ಟೇಟ್ ಏಜೆಂಟ್‌ವೊಬ್ಬ ಹೆಬ್ಬಗೋಡಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

 ಬೆಂಗಳೂರು :  ತಾನು ವಾಸವಿದ್ದ ಅಪಾರ್ಟ್‌ಮೆಂಟ್‌ನಲ್ಲಿ ರಾತ್ರಿ ವೇಳೆ ಫ್ಲ್ಯಾಟ್‌ಗಳಿಗೆ ಕನ್ನ ಹಾಕುತ್ತಿದ್ದ ರಿಯಲ್ ಎಸ್ಟೇಟ್ ಏಜೆಂಟ್‌ವೊಬ್ಬ ಹೆಬ್ಬಗೋಡಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ತಿರುಪಾಳ್ಯದ ಜಿಎಂ ಇನ್ವೀನೈಟ್ ಅಪಾರ್ಟ್‌ಮೆಂಟ್‌ ನಿವಾಸಿ ನಿತೇಶ್ ಸುಬ್ಬ ಬಂಧಿತನಾಗಿದ್ದು, ಆರೋಪಿಯಿಂದ 621 ಚಿನ್ನಾಭರಣ, 15.79 ಗ್ರಾಂ ವಜ್ರ, 56.2 ಗ್ರಾಂ ಬೆಳ್ಳಿ ಹಾಗೂ 28 ಸಾವಿರ ರು ನಗದು ಸೇರಿದಂತೆ ಒಟ್ಟು 60.46 ಲಕ್ಷ ರು ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಇತ್ತೀಚಿಗೆ ಜಿಎಂ ಅಪಾರ್ಟ್‌ಮೆಂಟ್‌ನಲ್ಲಿ ಸರಣಿ ಮನೆಗಳ್ಳತನ ಕೃತ್ಯಗಳು ವರದಿಯಾಗಿದ್ದವು. ಈ ಹಿನ್ನಲೆಯಲ್ಲಿ ಖದೀಮನ ಪತ್ತೆಗಿಳಿದ ಇನ್ಸ್‌ಪೆಕ್ಟರ್ ಸೋಮಶೇಖರ್ ಹಾಗೂ ಸಂಜೀವ್ ನಾಯ್ಕ್ ನೇತೃತ್ವದ ತಂಡವು, ಅಪಾರ್ಟ್‌ಮೆಂಟ್‌ನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಓರ್ವ ವ್ಯಕ್ತಿಯ ಚಲನವಲನ ದೃಶ್ಯಾವಳಿ ಸಿಕ್ಕಿದೆ. ಈ ಸುಳಿವು ಆಧರಿಸಿ ಅಪಾರ್ಟ್‌ಮೆಂಟ್‌ ನಿವಾಸಿಗಳನ್ನು ವಿಚಾರಣೆ ನಡೆಸಿದಾಗ ಕಳ್ಳ ಸಿಕ್ಕಿಬಿದ್ದಿದ್ದಾನೆ.

ಕಾಲಿಂಗ್ ಬೆಲ್ ಕರಾಮತ್ತು

ತನ್ನ ಸೋದರಿ ಜತೆ ಪಶ್ಚಿಮ ಬಂಗಾಳ ಮೂಲದ ನಿತೇಶ್‌ ಸುಬ್ಬು ವಾಸವಾಗಿದ್ದು, ಆತನ ಅಕ್ಕ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಮೊದಲು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದ ಆತ, ಇತ್ತೀಚಿಗೆ ಯಾವುದೇ ಕೆಲಸವಿಲ್ಲದೆ ಅಲೆಯುತ್ತಿದ್ದ. ಸುಲಭವಾಗಿ ಹಣ ಸಂಪಾದನೆಗೆ ಕಳ್ಳ ಮಾರ್ಗವನ್ನು ನಿತೇಶ್ ಹಿಡಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಎಂ ಅಪಾರ್ಟ್‌ಮೆಂಟ್‌ನಲ್ಲಿ ಸಾವಿರಕ್ಕೂ ಅಧಿಕ ಫ್ಲ್ಯಾಟ್‌ಗಳಿದ್ದು, ಎಲ್ಲ ವಿಭಾಗಗಳಿಗೆ ಕೆಳಹಂತದಿಂದ ಹೋಗಲು ಸಂಪರ್ಕವಿದೆ. ರಾತ್ರಿ ವೇಳೆ ಫ್ಲ್ಯಾಟ್‌ಗಳಿಗೆ ಹೋಗಿ ನಿತೇಶ್ ಕಾಲಿಂಗ್ ಬೆಲ್ ಮಾಡುತ್ತಿದ್ದ. ಆಗ ಯಾರಾದರೂ ಬಾಗಿಲು ತೆರೆದರೆ ಅಲ್ಲಿಂದ ಆತ ಓಡಿ ಹೋಗುತ್ತಿದ್ದ. ಒಂದು ವೇಳೆ ಯಾರು ಪ್ರತಿಕ್ರಿಯಿಸದೆ ಹೋದರೆ ಆ ಫ್ಲ್ಯಾಟ್ ಬಾಗಿಲು ಮುರಿದು ಕೈ ಸಿಕ್ಕಿದ್ದನ್ನು ನಿತೇಶ್ ದೋಚುತ್ತಿದ್ದ. ಅದೇ ರೀತಿ ಮೂರು ಫ್ಲ್ಯಾಟ್‌ಗಳಿಗೆ ಆರೋಪಿ ಕನ್ನ ಹಾಕಿದ್ದ. ಈ ಬಗ್ಗೆ ಹೆಬ್ಬಗೋಡಿ ಪೊಲೀಸ್ ಠಾಣೆಗೆ ಸ್ಥಳೀಯರು ದೂರು ನೀಡಿದ್ದರು.

ಅದರಂತೆ ತನಿಖೆಗಿಳಿದ ಪೊಲೀಸರು, ಆ ಅಪಾರ್ಟ್‌ಮೆಂಟ್‌ನ ಎಲ್ಲ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ನಿತೇಶ್ ಕಳ್ಳಾಟ ಬಯಾಲಿಗೆ. ಅಲ್ಲದೆ ಈ ಕೃತ್ಯಗಳ ಬಗ್ಗೆ ಆತನ ಸೋದರಿಗೆ ಮಾಹಿತಿ ಇರಲಿಲ್ಲ. ಆಕೆಗೆ ಗೊತ್ತಾಗದಂತೆ ರಾತ್ರಿ ವೇಳೆ ಆರೋಪಿ ಕಳ್ಳತನ ಕೃತ್ಯದಲ್ಲಿ ತೊಡಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

PREV
Read more Articles on

Latest Stories

ಚಾಲಕನ ಬದಲು ಕಂಡಕ್ಟರ್‌ ಓಡಿಸಿದ ಬಿಎಂಟಿಸಿ ಬಸ್ಸಿಗೆ ಮಹಿಳೆ ಬಲಿ
ರೌಡಿ ಬಿಕ್ಲು ಶಿವ ಹತ್ಯೆ: ಶಾಸಕ ಬೈರತಿ ಬಸವರಾಜುಗೆ ಬಂಧನ ಭೀತಿ
ಬಿಕ್ಲು ಶಿವ ಹತ್ಯೆಯ ತನಿಖೆ ಚುರುಕು: ಪ್ರಮುಖ ಆರೋಪಿಗೆ ಪೊಲೀಸರ ಶೋಧ