ಮೊಬೈಲಲ್ಲಿ ಮಾತಾಡಿದ್ದು ತಪ್ಪೊಪ್ಪಿಕೊಂಡ ದರ್ಶನ್: ಸಿಗರೇಟು, ಚಹಾ ಸೇವನೆಗೆ ನಾಗ ಕರೆಯುತ್ತಿದ್ದ ಎಂದ ನಟ

Published : Sep 01, 2024, 08:18 AM IST
Darshan

ಸಾರಾಂಶ

'ನನ್ನ ಅಭಿಮಾನಿ ಮಾತನಾಡಿ ಎಂದು ಒತ್ತಾಯಿಸಿದ್ದಕ್ಕೆ ವಿಧಿ ಇಲ್ಲದೆ ಮೊಬೈಲ್‌ನಲ್ಲಿ ಮಾತನಾಡಿದೆ. ನಾನು ಯಾವತ್ತೂ ಜೈಲಿನಲ್ಲಿ ಮೊಬೈಲ್ ಬಳಸಿಲ್ಲ' ಎಂದು ನಟ ದರ್ಶನ್ ತಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು :   'ನನ್ನ ಅಭಿಮಾನಿ ಮಾತನಾಡಿ ಎಂದು ಒತ್ತಾಯಿಸಿದ್ದಕ್ಕೆ ವಿಧಿ ಇಲ್ಲದೆ ಮೊಬೈಲ್‌ನಲ್ಲಿ ಮಾತನಾಡಿದೆ. ನಾನು ಯಾವತ್ತೂ ಜೈಲಿನಲ್ಲಿ ಮೊಬೈಲ್ ಬಳಸಿಲ್ಲ' ಎಂದು ನಟ ದರ್ಶನ್ ತಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಜೈಲಿನಲ್ಲಿ ವಿಶೇಷ ಸವಲತ್ತು ಪಡೆದ ಪ್ರಕರಣ ಸಂಬಂಧ ಬಳ್ಳಾರಿಗೆ ಸಳಾಂತರಿಸುವ ಮುನ್ನ ಅವರನ್ನು ಸುದೀರ್ಘವಾಗಿ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಪೊಲೀಸರು ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. “ನಾನು ಜೈಲಿಗೆ ಬಂದ ಕೆಲ ದಿನಗಳಲ್ಲೇ ನನ್ನನ್ನು ಭೇಟಿಯಾಗಿ ಧರ್ಮ ಪರಿಚಯ ಮಾಡಿಕೊಂಡ.

ನನ್ನ ಬ್ಯಾರಕ್‌ನಲ್ಲೇ ಆತ ಇದ್ದ. ಜೈಲಿನಲ್ಲಿ ಬೇಸರ ಕಳೆಯಲು ಆತನೊಂದಿಗೆ ಮಾತನಾಡುತ್ತಿದ್ದೆ. ನನ್ನ ಸ್ನೇಹಿತರೆಲ್ಲ ನಿಮ್ಮ ಅಭಿಮಾನಿಗಳು ನನ್ನ ಗೆಳೆಯ ಸತ್ಯ ಎಂಬಾತ ಕಟ್ಟಾ ಅಭಿಮಾನಿ ಎಂದು ಧರ್ಮ ಹೇಳಿದ್ದ. ನಾನು ಯಾರಿಗೂ ತಿಳಿಯದಂತೆ ಮೊಬೈಲ್ ಬಳಸುತ್ತೇನೆ. ನೀವು ಒಂದು ಸಾರಿ ನನ್ನ ಸ್ನೇಹಿತ ಸತ್ಯನೊಂದಿಗೆ ಮಾತನಾಡಬೇಕು ಎಂಬ ಆತನ ಒತ್ತಾಯಕೆ ಮಣಿದು ಎರಡ್ಮೂರು ಸೆಕೆಂಡ್ ಮಾತನಾಡಿದೆ. ಅದೇ ದೊಡ್ಡ ತಪ್ಪಾಯಿತು' ಎಂದು ದರ್ಶನ್ ತಿಳಿಸಿರುವುದಾಗಿ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

ನಾಗ ಕರೆದಿದ್ದಕ್ಕೆ ಹೋಗಿದ್ದೆ: ನನ್ನನ್ನು ಸಿಗರೇಟು ಹಾಗೂ ಚಹಾ ಸೇವನೆಗೆ ನಾಗ ಕರೆಯುತ್ತಿದ್ದ. ಆ ದಿನ ಕೂಡ ಆತನ ಒತ್ತಾಯದ ಮೇರೆಗೆ ಹೋಗಿದ್ದೆ. ಆಗ ಯಾರೋ ಪೋಟೋ ತೆಗೆದಿದ್ದಾರೆ. ಟೀ ಹಾಗೂ ಸಿಗರೇಟ್ ಎಲ್ಲಿಂದ ಬಂತು ಎಂಬುದು ನನಗೆ ಗೊತ್ತಿಲ್ಲ. ನಾಗ ಹಾಗೂ ಕುಳ್ಳ ಸೀನ ಎಲ್ಲ ಮಾತನಾಡುವಾಗ ನಾನು ಜೊತೆಯಾಗಿದ್ದೆ ಎಂದು ದರ್ಶನ್ ಹೇಳಿದ್ದಾರೆ ಎನ್ನಲಾಗಿದೆ.

ಮೊಬೈಲ್ ಚಚ್ಚಿ ಹಾಕಿದ ಧರ್ಮ! : ಜೈಲಿನಲ್ಲಿ ಮೊಬೈಲ್‌ ನಲ್ಲಿ ದರ್ಶನ್ ಮಾತನಾಡಿದ ವಿಡಿಯೋ ಬಹಿರಂಗವಾದ ಕೂಡಲೇ ತನ್ನ ಬಳಿ ಇದ್ದ ಮೊಬೈಲ್ ಅನ್ನು ಧರ್ಮ ಚಚ್ಚಿಹಾಕಿ ನಾಶಗೊಳಿಸಿದ್ದಾನೆ. ಹೀಗಾಗಿ ಇದುವರೆಗೆ ಮೊಬೈಲ್‌ ಜಪ್ತಿಯಾಗಿಲ್ಲ ಎಂದು ಮೂಲಗಳು ಹೇಳಿವೆ. ವಿಚಾರಣೆ ವೇಳೆ ಕೂಡ ಮೊಬೈಲ್ ನಾಶಗೊಳಿಸಿರು ವುದನ್ನು ಧರ್ಮ ತಪೊಪ್ಪಿಕೊಂಡಿದ್ದಾನೆ. ಆದರೆ ಮೊಬೈಲ್ ಪತ್ತೆ ಕಾರ್ಯವೇ ದೊಡ್ಡ ಸವಾಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದರ್ಶನ್ ಫೋಟೋ ತೆಗೆದವನಿಗೆ ಹುಡುಕಾಟ: ಜೈಲಿನಲ್ಲಿ ರೌಡಿಗಳ ಜತೆ ನಟ ದರ್ಶನ್‌ ನಡೆಸಿದ್ದ ಟೀ-ಸಿಗರೇಟ್ ಕೂಟದ ಫೋಟೋ ತೆಗೆದವನನು ಯಾರೆಂಬುದು ಖಚಿತವಾಗಿಲ್ಲ. ಮೊದಲು ರೌಡಿ ವೇಲು ತೆಗೆದಿದ್ದು ಎನ್ನಲಾಗಿತ್ತು. ಆದರೆ ಈ ಬಗ್ಗೆ ಆತನನ್ನು ವಿಚಾರಣೆಗೊಳಪಡಿಸಿದಾಗ ತಾನು ತೆಗೆದಿಲ್ಲ ಎಂದು ಹೇಳಿದ್ದಾನೆ. ಹೀಗಾಗಿ ಪೋಟೋ ತೆಗೆದವನ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಷೇರುಪೇಟೆಯಲ್ಲಿ ಹೂಡಿಕೆ ನೆಪದಲ್ಲಿ ಉದ್ಯಮಿಗೆ ₹8.3 ಕೋಟಿ ಧೋಖಾ
ಪಾದಚಾರಿಗಳಿಗೆ ಬೆಕ್ ಗುದ್ದಿಸಿ ಕೆಳಗೆ ಬಿದ್ದು ಅಪ್ರಾಪ್ತ ಸವಾರ ಸಾವು