ಸಾಲ ಬಾಧೆ: ವಿಷ ಸೇವಿಸಿ ರೈತ ಆತ್ಮಹತ್ಯೆ

KannadaprabhaNewsNetwork |  
Published : Jun 16, 2026, 01:45 AM IST
15ಕೆಎಂಎನ್ ಡಿ14 | Kannada Prabha

ಸಾರಾಂಶ

ರೈತ ನಾಗೇಶ್‌ ಸಕಾಲದಲ್ಲಿ ಮಳೆಯಾಗದ ಕಾರಣ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಇದರಿಂದ ಮನನೊಂದು ಭಾನುವಾರ ಮಧ್ಯಾಹ್ನ ತಮ್ಮ ಮನೆಯಲ್ಲಿದ್ದ ಕ್ರಿಮಿನಾಶಕದ ಮಾತ್ರೆಗಳನ್ನು ಸೇವಿಸಿ ಅಸ್ವಸ್ಥಗೊಂಡಿದ್ದರು.

ಕಿಕ್ಕೇರಿ:

ಸಾಲ ಬಾಧೆಯಿಂದ ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೇಗನಹಳ್ಳಿಯಲ್ಲಿ ಜರುಗಿದೆ.

ಗ್ರಾಮದ ಲೇಟ್‌ ಜವರೇಗೌಡರ ಪುತ್ರ ಟಿ.ಜೆ.ನಾಗೇಶ್ (50) ಆತ್ಮಹತ್ಯೆ ಮಾಡಿಕೊಂಡವರು.

ರೈತ ನಾಗೇಶ್ 4 ಎಕರೆ ಜಮೀನು ಹೊಂದಿದ್ದು, ಕೃಷಿ ಚಟುವಟಿಕೆಗಾಗಿ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 3 ಲಕ್ಷ ರು. ಸಾಲ ಪಡೆದಿದ್ದರು. ಜೊತೆಗೆ ಸುಮಾರು 7 ಲಕ್ಷ ರು. ಖಾಸಗಿಯಾಗಿ ಸಾಲ ಮಾಡಿಕೊಂಡಿದ್ದನು. ಸಕಾಲದಲ್ಲಿ ಮಳೆಯಾಗದ ಕಾರಣ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಇದರಿಂದ ಮನನೊಂದು ಭಾನುವಾರ ಮಧ್ಯಾಹ್ನ ತಮ್ಮ ಮನೆಯಲ್ಲಿದ್ದ ಕ್ರಿಮಿನಾಶಕದ ಮಾತ್ರೆಗಳನ್ನು ಸೇವಿಸಿ ಅಸ್ವಸ್ಥಗೊಂಡಿದ್ದರು. ವಿಷಯ ತಿಳಿದ ಕುಟುಂಬದವರು ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಕೊಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿಯೇ ಮೃತರಾಗಿದ್ದಾರೆ.

ಮೃತರ ಪತ್ನಿ ಇಂದ್ರಮ್ಮ ನೀಡಿದ ದೂರಿನ ಮೇರೆಗೆ ಕಿಕ್ಕೇರಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಮೃತರ ತೋಟದಲ್ಲಿ ಸೋಮವಾರ ಅಂತ್ಯಕ್ರಿಯೆ ನೆರವೇರಿತು.ಅಪರಿಚಿತ ಶವ ಪತ್ತೆಮಂಡ್ಯ:

ಜಿಲ್ಲೆಯ ಶೆಟ್ಟಹಳ್ಳಿ-ಮದ್ದೂರು ರೈಲು ಮಾರ್ಗ ಬಳಿ ಅಪರಿಚಿತ ಶವ ಪತ್ತೆಯಾಗಿದೆ ಎಂದು ಮಂಡ್ಯ ರೈಲ್ವೆ ಪೊಲೀಸ್ ಉಪಠಾಣೆಯಲ್ಲಿ ದೂರು ದಾಖಲಾಗಿದೆ. ಮೃತನ ವಯಸ್ಸು (50) ದುಂಡು ಮುಖ, ಗೋಧಿ ಮೈ ಬಣ್ಣ, ದೃಢಕಾಯ ಶರೀರ, ಕಪ್ಪು ಬಣ್ಣದ ಟಿ ಶರ್ಟ್, ಹಾಗೂ ಕಪ್ಪು ಬಣ್ಣದ ಜರ್ಕಿನ್, ನೀಲಿ ಬಣ್ಣದ ಪ್ಯಾಂಟ್ ಅನ್ನು ಧರಿಸಿರುತ್ತಾರೆ. ವಾರಸುದಾರರ ಮಾಹಿತಿ ದೊರೆತಲ್ಲಿ ದೂ. ಸಂ.9480802122, 08212516579 ಅನ್ನು ಸಂಪರ್ಕಿಸಬಹುದು ಎಂದು ಮಂಡ್ಯ ರೈಲ್ವೆ ಪೊಲೀಸ್ ಉಪಠಾಣೆಯ ಆರಕ್ಷಕ ಉಪ ನೀರಿಕ್ಷಕರು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಕಾರು ಪಲ್ಟಿ: ದಂಪತಿ ಸೇರಿ ಇಬ್ಬರು ಮಕ್ಕಳಿಗೆ ಗಾಯ
ಮಹಿಳೆಗೆ ಅಸಭ್ಯವಾಗಿ ಮೆಸೇಜ್‌ ಮಾಡ್ತಿದ್ದವನ ಕರೆಸಿ ಸುಟ್ಟುಹಾಕಿದ್ರು!