ಮಹಿಳೆಗೆ ಅಸಭ್ಯವಾಗಿ ಮೆಸೇಜ್‌ ಮಾಡ್ತಿದ್ದವನ ಕರೆಸಿ ಸುಟ್ಟುಹಾಕಿದ್ರು!

Published : Jun 15, 2026, 10:52 AM IST
crime

ಸಾರಾಂಶ

ವಿವಾಹಿತೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್‌ ಮಾಡಿ ಕಾಮಕ್ರೀಡೆಗೆ ಪ್ರಚೋದಿಸುತ್ತಿದ್ದ ಯುವಕನನ್ನು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ರೀತಿಯಲ್ಲಿಯೇ ಸಂಚು ರೂಪಿಸಿ ಕೊಲೆ ಮಾಡಿ ಮೃತದೇಹವನ್ನು ಸುಟ್ಟು ಹಾಕಿರುವ ಘಟನೆ   ತಡವಾಗಿ ಬೆಳಕಿಗೆ ಬಂದಿದೆ.

  ಬಳ್ಳಾರಿ :  ವಿವಾಹಿತೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್‌ ಮಾಡಿ ಕಾಮಕ್ರೀಡೆಗೆ ಪ್ರಚೋದಿಸುತ್ತಿದ್ದ ಯುವಕನನ್ನು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ರೀತಿಯಲ್ಲಿಯೇ ಸಂಚು ರೂಪಿಸಿ ಕೊಲೆ ಮಾಡಿ ಮೃತದೇಹವನ್ನು ಸುಟ್ಟು ಹಾಕಿರುವ ಘಟನೆ ಬಳ್ಳಾರಿ ಮೋಕಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನಗರದ ನಿವಾಸಿ ಬಸವನಗೌಡ ಪಾಟೀಲ್ (26) ಮೃತ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಸಂಬಂಧಿ ಶ್ವೇತಾ, ಈಕೆಯ ಪತಿ ದೊಡ್ಡಬಸವನಗೌಡ ಹಾಗೂ ಸೋದರ ವಿಜಯ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೋಕಾ ಠಾಣೆ ಪೊಲೀಸರು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ:

ಮೃತ ಬಸವನಗೌಡ ಬಳ್ಳಾರಿಯ ವೈದ್ಯಕೀಯ ಲ್ಯಾಬ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತ ತನ್ನ ಸೋದರನ ಪತ್ನಿಯ ಸಹೋದರಿಯಾದ ಶ್ವೇತಾಳಿಗೆ ಕಳೆದ ಹಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಸಂದೇಶಗಳನ್ನು ಕಳುಹಿಸಿ ಕಾಮತೃಷೆಗೆ ಒತ್ತಾಯಿಸುತ್ತಿದ್ದ. ಆತನ ಕಿರುಕುಳದಿಂದ ಬೇಸತ್ತ ಶ್ವೇತಾ, ಯುವಕನ ವರ್ತನೆಯ ಕುರಿತು ಪತಿಗೆ ತಿಳಿಸಿದ್ದಳು. ಆ ಬಳಿಕ ಬಸವನಗೌಡನ ವಿಕೃತಿಗೆ ಕೊನೆ ಹಾಡಲು, ಆತನಿಗೆ ಕರೆ ಮಾಡಿ ಕರೆಸಿಕೊಂಡು, ಆತನನ್ನು ಸುಟ್ಟು ಹಾಕಿ 10 ಕಿ.ಮೀ. ದೂರದಲ್ಲಿ ಮೃತದೇಹ ಬಿಸಾಡಿದ್ದರು. ಮೃತನ ಮೊಬೈಲ್‌ ಕರೆ, ವಾಟ್ಸ್‌ಆ್ಯಪ್‌ ಸಂದೇಶಗಳನ್ನು ಪೊಲೀಸರು ಪರಿಶೀಲಿಸಿದಾಗ, ಸಂಚು ಬಯದಲಾಗಿದೆ.

ಪತಿ-ಪತ್ನಿ ಸಂಚು ರೂಪಿಸಿದ್ದರು.

ಕರೆ ಮಾಡಿ ಕರೆದು ಕೊಂದರು:

ತಮ್ಮ ಸಂಚಿನ ಭಾಗವಾಗಿ ಜೂ.7ರಂದು ರಾತ್ರಿ ಬಸವನಗೌಡಗೆ ಶ್ವೇತಾ ಕರೆ ಮಾಡಿ ಮೋಕಾ ಬಳಿ ಕರೆಸಿಕೊಂಡಿದ್ದಳು. ಅಲ್ಲಿ ಕಾದು ಕುಳಿತಿದ್ದ ಶ್ವೇತಾಳ ಪತಿ ಬಸವನಗೌಡ ಮತ್ತು ಸೋದರ ವಿಜಯ್ ಆತನ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದು, ಶವವನ್ನು ಸುಮಾರು 10 ಕಿ.ಮೀ. ದೂರ ಒಯ್ದು ಬೆಂಕಿಹಚ್ಚಿ ಸುಟ್ಟಿದ್ದರು. ಮರುದಿನ ಬೆಳಗ್ಗೆ ಯುವಕನ ಮೃತದೇಹ ಶಿವಪುರ ಮತ್ತು ತಂಬ್ರಹಳ್ಳಿ ಎಲ್‌ಎಲ್‌ಸಿ ಕಾಲುವೆ ಪಕ್ಕದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತನ ಮಾವ ಹಂಪನಗೌಡ ಎಂಬುವರು ನೀಡಿದ ದೂರಿನ ಮೇರೆಗೆ ಮೋಕಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?:

ಆರಂಭದಲ್ಲಿ ಯುವಕನ ಸಾವಿಗೆ ಲವ್‌ ಕಾರಣ ಎಂದು ನಂಬಲಾಗಿತ್ತು. ಆದರೆ, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದು, ಮೃತನ ಮೊಬೈಲ್ ಕರೆ, ಸಾಮಾಜಿಕ ಜಾಲತಾಣಗಳ ಬಳಕೆ ಪರಿಶೀಲಿಸಿದಾಗ ಸತ್ಯ ಬೆಳಕಿಗೆ ಬಂದಿದೆ. ಮೃತನ ವಾಟ್ಸ್‌ಆ್ಯಪ್‌ನಲ್ಲಿ ಶ್ವೇತಾಳಿಗೆ ಸಂದೇಶ ಕಳುಹಿಸಿರುವುದು ತನಿಖೆಗೆ ಪ್ರಮುಖ ತಿರುವು ನೀಡಿದೆ. ಆಕೆ ಮೊಬೈಲ್ ಸಂಖ್ಯೆಯ ಜಾಡು ಹಿಡಿದು ತನಿಖೆ ಮಾಡಿದಾಗ ಘಟನೆ ನಡೆದ ಸ್ಥಳದಲ್ಲಿ ಶ್ವೇತಾ, ದೊಡ್ಡಬಸವನಗೌಡ ಹಾಗೂ ವಿಜಯ್ ಮೊಬೈಲ್ ಸಂಖ್ಯೆಗಳು ಸಕ್ರಿಯವಾಗಿರುವುದು ಪೊಲೀಸರಿಗೆ ಗೊತ್ತಾಗಿದೆ. ಬಳಿಕ ಶ್ವೇತಾಳನ್ನು ವಿಚಾರಣೆ ನಡೆಸಿದಾಗ ಯುವಕನನ್ನು ಹತ್ಯೆಗೈದಿರುವ ಬಗ್ಗೆ ತಿಳಿದು ಬಂದಿದೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೋಕಾ ಪೊಲೀಸರು ತಿಳಿಸಿದ್ದಾರೆ.

ಸಂಬಂಧಿ ಜತೆ ಸಲುಗೆ:

ಮೃತ ಬಸವನಗೌಡನ ಸೋದರನಿಗೆ ಶ್ವೇತಾಳ ಸೋದರಿಯನ್ನು ಕೊಟ್ಟು ಮದುವೆ ಮಾಡಿ ಕೊಡಲಾಗಿತ್ತು. ಆ ಬಳಿಕ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಇದೇ ಸಲುಗೆಯಲ್ಲಿ ಶ್ವೇತಾಗೆ ಆತ ನಿರಂತರ ಸಂದೇಶ ಕಳಿಸುತ್ತಿದ್ದ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

₹40000 ಲಂಚ: 3 ಬೆಂಗ್ಳೂರು ಪೊಲೀಸ್ರು ರಾಜಸ್ಥಾನದಲ್ಲಿ ಸೆರೆ
ಮದ್ವೆಗೆ ಸಿದ್ಧವಾಗಿದ್ದ ಸೀಕ್ರೆಟ್‌ ಪತ್ನಿಯ ಕೊಂದ