ಕನ್ನಡಪ್ರಭ ವಾರ್ತೆ ಮಂಡ್ಯ
ಹಣ ಕೇಳಲು ವರ್ತಕನನ್ನು ಹುಡುಕಿಕೊಂಡು ದೆಹಲಿಗೆ ಹೋದವರಿಗೆ ಗನ್ ತೋರಿಸಿ ಬೆದರಿಕೆ ಹಾಕಿದ್ದಾನೆ. ರೈತರಿಂದ ಎಳನೀರು ಖರೀದಿಸಿರುವ ಸ್ಥಳೀಯ ವರ್ತಕ ಹಣ ನೀಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರೆ, ಇದು ದೆಹಲಿ ಮೂಲದ ವರ್ತಕನೊಂದಿಗೆ ಆಗಿರುವ ಅನಧಿಕೃತ ಒಪ್ಪಂದ. ಇದಕ್ಕೆ ನಾವು ಜವಾಬ್ದಾರರಲ್ಲ ಎಂದು ಎಪಿಎಂಸಿ ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ.
ತಾಲೂಕಿನ ದುದ್ದ ಗ್ರಾಮದ ಎಳನೀರು ವರ್ತಕ ಶರತ್ ಎಂಬುವರೇ ವಂಚನೆಗೊಳಗಾದವರು. ದೆಹಲಿ ಮೂಲದ ಅನಾಮ್ ಹಣ ನೀಡದೆ ವಂಚಿಸಿದವನಾಗಿದ್ದಾನೆ. ಅನಾಮ್ ಕಳೆದ ಎರಡು-ಮೂರು ವರ್ಷಗಳಿಂದ ಶರತ್ ಅವರೊಂದಿಗೆ ಎಳನೀರು ವ್ಯವಹಾರ ನಡೆಸುತ್ತಿದ್ದನು. ಹಲವಾರು ಬಾರಿ ಒಂದೆರಡು ಲೋಡ್ ಎಳನೀರು ಖರೀದಿಸಿ ಸಕಾಲದಲ್ಲಿ ಹಣ ಕೊಟ್ಟು ನಂಬಿಕೆ ಹುಟ್ಟುವಂತೆ ಮಾಡಿದ್ದನು ಎನ್ನಲಾಗಿದೆ.ಕಳೆದ ವಾರ ಮಂಡ್ಯಕ್ಕೆ ಬಂದಿದ್ದ ಅನಾಮ್ ನಗರದ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದನು. ಈ ವೇಳೆ ಶರತ್‌ನನ್ನು ಭೇಟಿ ಮಾಡಿದ ಅನಾಮ್ ಈಗ ಎಳನೀರಿಗೆ ಒಳ್ಳೆಯ ಬೇಡಿಕೆ ಇದೆ. ನನಗೆ ಆರೇಳು ಲೋಡ್ ಎಳನೀರು ಬೇಕೆಂದು ಬೇಡಿಕೆ ಇಟ್ಟನು. ಹಿಂದೆ ಅನಾಮ್ ಹಣ ಕೊಟ್ಟು ನಂಬಿಕೆ ಉಳಿಸಿಕೊಂಡಿದ್ದರಿಂದ ಅವನ ಎಳನೀರು ಬೇಡಿಕೆಯನ್ನು ಶರತ್ ಸುಲಭವಾಗಿ ಒಪ್ಪಿಕೊಂಡರು. ನಾನು ಕಳುಹಿಸುವ ಲಾರಿಗಳಲ್ಲಿ ಎಳನೀರು ಲೋಡ್ ಕಳುಹಿಸಿದರೆ ಹಣ ಪಾವತಿಸುವುದಾಗಿ ಹೇಳಿ ದೆಹಲಿಗೆ ಅನಾಮ್ ತೆರಳಿದ್ದನು.
ಗನ್ ತೋರಿಸಿ ಬೆದರಿಕೆ:
ಇದರಿಂದ ಎಚ್ಚೆತ್ತ ಶರತ್ ಮತ್ತು ಇತರರು ಎಳನೀರು ತುಂಬಿದ್ದ ಕೊನೆಯ ಲೋಡ್ ಲಾರಿಯನ್ನು ಬಿಡದೆ ಅಡ್ಡಗಟ್ಟಿ ನಿಲ್ಲಿಸಿದರು. ಅತ್ತ ಮಾರಿದ ಎಳನೀರಿಗೆ ಹಣವೂ ಸಿಗದೆ, ಇತ್ತ ರೈತರಿಗೆ ಬಟವಾಡೆ ಮಾಡಲಾಗದೆ ಶರತ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಣಿ ಹಬ್ಬಗಳ ಹಿನ್ನೆಲೆಯಲ್ಲಿ ರೈತರು ಬಾಕಿ ಹಣಕ್ಕಾಗಿ ನಿರಂತರ ಒತ್ತಡ ಹೇರುತ್ತಿದ್ದು, ದಿಕ್ಕು ತೋಚದ ವರ್ತಕ ಶರತ್ ರೈತ ಸಂಘಟನೆಗಳ ಬೆಂಬಲದೊಂದಿಗೆ ಮೊದಲು ಸುಂಡಹಳ್ಳಿ ಮಾರುಕಟ್ಟೆ ಎದುರು ಮತ್ತು ನಂತರ ೨೦ಕ್ಕೂ ಹೆಚ್ಚು ಎಳನೀರು ವಾಹನಗಳೊಂದಿಗೆ ಬಂದು ಮಂಡ್ಯ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಅನಾಮ್ ನನಗೆ ಎರಡು ವರ್ಷಗಳಿಂದ ಪರಿಚಯವಿದ್ದ. ಹಲವು ಬಾರಿ ಎರಡು-ಮೂರು ಲೋಡ್ ಎಳನೀರು ಪಡೆದು ಹಣವನ್ನೂ ಕೊಟ್ಟಿದ್ದ. ಅದೇ ನಂಬಿಕೆಯೊಂದಿಗೆ ಈ ಬಾರಿಯೂ ಏಳೆಂಟು ಲೋಡ್ ಎಳನೀರು ಕಳುಹಿಸಿದ್ದೆ. ಒಟ್ಟು ೩೩ ಲಕ್ಷ ರು. ಹಣದಲ್ಲಿ ೭ ರಿಂದ ೮ ಲಕ್ಷ ರು. ಕೊಟ್ಟಿದ್ದಾನೆ. ಉಳಿಕೆ ಹಣ ನೀಡದೆ ಸತಾಯಿಸುತ್ತಿದ್ದು, ಕೊನೆಯ ಲೋಡ್ ಲಾರಿ ಕಳುಹಿಸದೆ ಹಿಡಿದಿಟ್ಟುಕೊಂಡಿದ್ದೇನೆ. ಹಣ ಕೊಡುವವರೆಗೆ ಲಾರಿಯನ್ನು ಬಿಡುವುದಿಲ್ಲ.
-ಶ್ರೀಹರಿ, ಕಾರ್ಯದರ್ಶಿ, ಎಪಿಎಂಸಿ