₹3 ಕೋಟಿಯ ಇ-ಸಿಗರೆಟ್ ಜಪ್ತಿ, ವ್ಯಕ್ತಿ ಸೆರೆ

KannadaprabhaNewsNetwork |  
Published : Jan 31, 2024, 02:16 AM IST
ಇ-ಸಿಗರೆಟ್‌ ಸಾಂದರ್ಭಿಕ ಚಿತ್ರ | Kannada Prabha

ಸಾರಾಂಶ

ದುಬೈನಿಂದ ಕೊರಿಯರ್ ಮೂಲಕ ತರಿಸಿಕೊಂಡು ನಿಷೇಧಿತ ಇ-ಸಿಗರೆಟ್‌ ದಾಸ್ತಾನು ಇಟ್ಟಿದ್ದ ಕೇರಳ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮನೆಯೊಂದರ ಮೇಲೆ ದಾಳಿ ನಡೆಸಿ ಅಕ್ರಮವಾಗಿ ₹3 ಕೋಟಿ ಮೌಲ್ಯದ ನಿಷೇಧಿತ ಎಲೆಕ್ಟ್ರಾನಿಕ್ ಸಿಗರೆಟ್‌ಗಳನ್ನು ಸಂಗ್ರಹಿಸಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಗುರಪ್ಪನಪಾಳ್ಯದ ಶೋಯೆಬ್ ಬಂಧಿತನಾಗಿದ್ದು, ಆರೋಪಿಯಿಂದ ₹3 ಕೋಟಿ ಮೌಲ್ಯದ ಇ-ಸಿಗರೆಟ್ ಜಪ್ತಿ ಮಾಡಲಾಗಿದೆ. ಎರಡು ವರ್ಷಗಳಿಂದ ಅಕ್ರಮವಾಗಿ ಇ-ಸಿಗರೆಟ್‌ ಮಾರಾಟದಲ್ಲಿ ಶೋಯೆಬ್ ತೊಡಗಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಆತನ ಮನೆ ಮೇಲೆ ದಾಳಿ ನಡೆಸಿದಾಗ ಮಾಲಿನ ಸಮೇತ ಸಿಕ್ಕಿಬಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ದುಬೈನಿಂದ ಕೊರಿಯರ್ ಮೂಲಕ ಇ-ಸಿಗರೆಟ್‌?:

ಈ ಮೊದಲು ದುಬೈನಲ್ಲಿ ಕೆಲಸದಲ್ಲಿದ್ದ ಕೇರಳ ಮೂಲದ ಶೋಯೆಬ್‌, ಕೊರೋನಾ ವೇಳೆ ಕೆಲಸ ಕಳೆದುಕೊಂಡು ನಗರಕ್ಕೆ ಮರಳಿದ್ದ. ದುಬೈನಲ್ಲಿದ್ದಾಗ ಆತನಿಗೆ ಇ-ಸಿಗರೆಟ್ ಮಾರಾಟಗಾರರ ಜತೆ ಸಂಪರ್ಕವಿತ್ತು. ಬೆಂಗಳೂರಿಗೆ ಮರಳಿದ ಬಳಿಕ ನಗರದಲ್ಲಿ ಇ-ಸಿಗರೆಟ್‌ಗೆ ಒಳ್ಳೆಯ ಬೇಡಿಕೆ ಇದೆ ಎಂಬ ಮಾಹಿತಿ ತಿಳಿದ ಆತ, ದುಬೈನ ಸ್ನೇಹಿತರ ಮೂಲಕ ಇ-ಸಿಗರೆಟ್ ತರಿಸಿಕೊಂಡು ನಗರದಲ್ಲಿ ದುಬಾರಿ ಬೆಲೆಗೆ ಮಾರುತ್ತಿದ್ದ.

ಕೆಲ ದಿನಗಳ ಹಿಂದೆ ಶೋಯೆಬ್‌ಗೆ ದುಬೈನಿಂದ ಕೊರಿಯರ್ ಮೂಲಕ ಸಿಗರೆಟ್ ಪಾರ್ಸಲ್ ಬಂದಿತ್ತು. ಚೆನ್ನೈ ವಿಮಾನ ನಿಲ್ದಾಣಕ್ಕೆ ಪಾರ್ಸಲ್ ಬಂದು ಅಲ್ಲಿಂದ ಶೋಯೆಬ್‌ಗೆ ಕೈ ಸೇರಿತ್ತು. ಹೀಗಾಗಿ ಈ ಕೊರಿಯರ್‌ ಕುರಿತು ಚೆನ್ನೈ ಕಸ್ಟಮ್ಸ್‌ ಅಧಿಕಾರಿಗಳಿಂದ ಮಾಹಿತಿ ಕೋರಿದ್ದೇವೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಆಕ್ಟಿವೇ ಮಾಡದ ಹೊಸ ಕ್ರೆಡಿಟ್ ಕಾರ್ಡ್‌ ಬಳಸಿ 1.08 ಲಕ್ಷ ರು. ದೋಚಿದ ಸೈಬರ್ ಖದೀಮರು
ನಿದ್ರೆಗೆ ಜಾರಿದ ಪ್ರಯಾಣಿಕನ ದೋಚಿ ಮಾರ್ಗ ಮಧ್ಯೆಯೇ ಇಳಿಸಿ ಕ್ಯಾಬ್‌ ಚಾಲಕ ಪರಾರಿ!