ರಾಜಾಜಿನಗರದಲ್ಲಿ ನಡೆದಿರುವ ಒಂದೇ ಕುಟುಂಬದ 7 ಮಂದಿ ನರಮೇಧ ಪ್ರಕರಣದ ಸಂಬಂಧಪಟ್ಟಂತೆ ತಮಿಳುನಾಡಿನ ಸೇಲಂ ಸಮೀಪದ ಬೆಟ್ಚದಲ್ಲಿ ಮತ್ತೆರಡು ಮೃತದೇಹಗಳು ಶನಿವಾರ ಪತ್ತೆಯಾಗಿವೆ.
ರಾಜಧಾನಿಯನ್ನು ಬೆಚ್ಚಿಬೀಳಿಸಿದ್ದ ರುಬ್ಬುಗುಂಡಿನಲ್ಲಿ ಹೊಡೆದು ಒಂದೇ ಕುಟುಂಬದ 7 ಮಂದಿ ಭೀಕರ ಹತ್ಯೆ ಕೇಸ್
-ಮಗಳ ಮೂಲಕ ಅಜ್ಜಿಗೆ ಕರೆ ಮಾಡಿಸಿ ಬಾಡೂಟಕ್ಕೆ ಕರೆಸಿದ್ದ ಕಿಲ್ಲರ್ । ಬಳಿಕ ರುಬ್ಬುಕಲ್ಲಿನಿಂದ ಹೊಡೆದು ಕೊಲೆ ಮಾಡಿ ಮೂಟೆಕಟ್ಟಿದ್ದ-ತ.ನಾಡಿನ ಸೇಲಂ ಜಿಲ್ಲೆಯ ಎರ್ಕಾಡಿನ ಕಾಡಿಗೆ ತೆರಳಿ ಇಬ್ಬರ ದೇಹವನ್ನು ಬಿಸಾಡಿದ್ದ । 4 ಮೃತದೇಹಗಳಿಗೆ ಬೇರೆ ಸ್ಥಳಗಳಲ್ಲಿ ಶೋಧ---ಕನ್ನಡಪ್ರಭ ವಾರ್ತೆ ಬೆಂಗಳೂರುರಾಜಾಜಿನಗರದಲ್ಲಿ ನಡೆದಿರುವ ಒಂದೇ ಕುಟುಂಬದ 7 ಮಂದಿ ನರಮೇಧ ಪ್ರಕರಣದ ಸಂಬಂಧಪಟ್ಟಂತೆ ತಮಿಳುನಾಡಿನ ಸೇಲಂ ಸಮೀಪದ ಬೆಟ್ಚದಲ್ಲಿ ಮತ್ತೆರಡು ಮೃತದೇಹಗಳು ಶನಿವಾರ ಪತ್ತೆಯಾಗಿವೆ.
ಆರೋಪಿ ಇಂದುಶೇಖರ್ನ ಪತ್ನಿ ಸುನೀತಾ ಹಾಗೂ ಅತ್ತೆ ರೂಪಾವತಿ ಅವರ ಮೃತದೇಹಗಳು ಪತ್ತೆಯಾಗಿದ್ದು, ಇನ್ನುಳಿದ 4 ಮೃತದೇಹಗಳಿಗೆ ಪೊಲೀಸರು ಬೇರೆಡೆ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ರಾಜಾಜಿನಗರದ ಭಾಷ್ಯಂದ ಮನೆಯಲ್ಲಿ ತನ್ನ ಪತ್ನಿ ಸುನೀತಾ ಹಾಗೂ ಆಕೆಯ ತವರು ಮನೆಯ 6 ಮಂದಿಯನ್ನು ನಿರ್ದಯವಾಗಿ ರುಬ್ಬುಗುಂಡಿನಿಂದ ಹಲ್ಲೆ ನಡೆಸಿ ಭೀಭತ್ಸವಾಗಿ ಆರೋಪಿ ಇಂದುಶೇಖರ್ ಹತ್ಯೆ ಮಾಡಿದ್ದ. ಈ ಹತ್ಯೆ ಕೃತ್ಯಕ್ಕೆ ಆತನ 17 ವರ್ಷದ ಅಪ್ರಾಪ್ತ ಮಗಳು ಸಹ ನೆರವು ನೀಡಿದ್ದ ಆಘಾತಕಾರಿ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿತ್ತು.ಸೇಲಂನಲ್ಲಿ ಮೃತದೇಹ ಎಸೆದಿದ್ದ ಹಂತಕ:
ಅ.16 ರಂದು ಸುನೀತಾಳನ್ನು ರುಬ್ಬುಗುಂಡಿನ ಹಲ್ಲೆ ನಡೆಸಿ ಇಂದುಶೇಖರ್ ಹತ್ಯೆ ಮಾಡಿದ ಬಳಿಕ ಮೃತದೇಹವನ್ನು ಚೀಲದಲ್ಲಿ ತುಂಬಿ ವಾಸನೆ ಬಾರದಂತೆ ರಾಸಾಯನಿಕ ಸಿಂಪಡಿಸಿ ಇಟ್ಟಿದ್ದ. ಬಳಿಕ ತನ್ನ ಮಗಳ ಮೂಲಕ ಅತ್ತೆ ರೂಪಾವತಿಗೆ ಕರೆ ಮಾಡಿಸಿ ಮಾಂಸದ ಅಡುಗೆ ತಯಾರಿಸಲು ಇಂದುಶೇಖರ್ ಕರೆಸಿದ್ದಾನೆ. ಅದೇ ದಿನ ರಾತ್ರಿ ಅತ್ತೆಯನ್ನು ರುಬ್ಬುಕಲ್ಲಿನಿಂದ ಹೊಡೆದು ಕೊಂದಿದ್ದಾನೆ. ಮೃತದೇಹವನ್ನು ಪ್ರತ್ಯೇಕವಾಗಿ ಚೀಲಕ್ಕೆ ಆರೋಪಿ ತುಂಬಿದ್ದಾನೆ. ನಂತರ ತನ್ನ ಮಗಳ ಸಹಾಯದಿಂದ 2 ಮೃತದೇಹಗಳನ್ನು 2ನೇ ಅಂತಸ್ತಿನಲ್ಲಿದ್ದ ಮನೆಯಿಂದ ಕೆಳಗೆ ತಂದಿದ್ದಾನೆ. ಬಳಿಕ ಕಾರಿನಲ್ಲಿ ಮೃತದೇಹಗಳನ್ನು ತುಂಬಿಕೊಂಡು ತಮಿಳುನಾಡಿನ ಸೇಲಂ ಜಿಲ್ಲೆಯ ಎರ್ಕಾಡಿನ ಕಾಡಿಗೆ ತೆರಳಿ ಇಂದುಶೇಖರ್ ಬಿಸಾಡಿ ನಗರಕ್ಕೆ ಮರಳಿದ್ದನು ತಮ್ಮ ಮೇಲೆ ಅನುಮಾನ ಬಾರದಂತೆ ಆರೋಪಿಗಳಿಬ್ಬರು ನಡೆದುಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.ವಿಚಾರಣೆ ವೇಳೆ ಮೃತದೇಹಗಳನ್ನು ಬಿಸಾಡಿರುವ ಸ್ಥಳಗಳ ಬಗ್ಗೆ ಆರೋಪಿ ಬಾಯ್ಬಿಟ್ಟಿದ್ದ. ಅಂತೆಯೇ ಸೇಲಂ ಜಿಲ್ಲೆಯ ಎರ್ನಾಡು ಅರಣ್ಯಪ್ರದೇಶಕ್ಕೆ ಆರೋಪಿಯನ್ನು ಕರೆದೊಯ್ದು ಪೊಲೀಸರು ಶೋಧಿಸಿದರು. ಆಗ ಆತನ ಪತ್ನಿ ಸುನೀತಾ ಹಾಗೂ ಅತ್ತೆ ರೂಪಾವತಿ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇವುಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ನಗರಕ್ಕೆ ಕರೆತರಲು ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
--ಶಿರಾಡಿ-ಚಾರ್ಮಾಡಿ ಘಾಟ್ಗಳಲ್ಲಿ ತಪಾಸಣೆ
ಹಾಸನ ಜಿಲ್ಲೆಯ ಶಿರಾಡಿ ಘಾಟ್ನಲ್ಲಿ ಶಿವಕುಮಾರ್ ದಂಪತಿ ಹಾಗೂ ಚಾರ್ಮಾಡಿ ಘಾಟ್ನಲ್ಲಿ ಶಂಕರ್ ದಂಪತಿ ಮೃತದೇಹಗಳನ್ನು ಬಿಸಾಡಿರುವುದಾಗಿ ಇಂದುಶೇಖರ್ ಹೇಳಿದ್ದಾನೆ ಎನ್ನಲಾಗಿದೆ. ಈ ಮಾಹಿತಿ ಆಧರಿಸಿ ಅಲ್ಲಿಗೆ ಆರೋಪಿಯನ್ನು ಕರೆದೊಯ್ದು ನ.8 ಮತ್ತು 9ರಂದು ಮೃತದೇಹಗಳನ್ನು ಪೊಲೀಸರು ಶೋಧನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.--
ತನಿಖೆ ಬಳಿಕ ವಿಷ/ ನಿದ್ರೆ ಮಾತ್ರೆ ದೃಢ?ರುಬ್ಬುಗುಂಡಿನಿಂದ ಹಲ್ಲೆ ನಡೆಸುವ ಮುನ್ನ ಊಟದಲ್ಲಿ ವಿಷ ಅಥವಾ ನಿದ್ರೆ ಮಾತ್ರೆಯನ್ನು ಆರೋಪಿ ಇಂದುಶೇಖರ್ ಬೆರೆಸಿದ್ದ. ಈ ಆಹಾರ ಸೇವಿಸಿ ಅರೆ ಪ್ರಜ್ಞಾ ಹೀನರಾದಾಗ ಆತ ಹಲ್ಲೆ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಆದರೆ ಮರಣೋತ್ತರ ಪರೀಕ್ಷೆ ಬಳಿಕವೇ ಸಾವಿಗೂ ಮುನ್ನ ಹತ್ಯೆಗೀಡಾದವರಿಗೆ ವಿಷಪ್ರಾಶನ ಅಥವಾ ನಿದ್ರೆ ಮಾತ್ರೆ ಸೇವನೆ ಬಗ್ಗೆ ಖಚಿತವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
--ವೆಬ್ ಸಿರೀಸ್ ನೋಡಿ ಪ್ಲ್ಯಾನ್
ತನ್ನ ಕುಟುಂಬದ ನರಮೇಧಕ್ಕೆ ಓಟಿಟಿಗಳಲ್ಲಿ ಕ್ರೈಂ ಥ್ರಿಲರ್ ವೆಬ್ ಸಿರೀಸ್ಗಳು ಹಾಗೂ ಸಿನಿಮಾಗಳನ್ನು ನೋಡಿ ಆರೋಪಿಗಳು ಸಂಚು ರೂಪಿಸಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಹತ್ಯೆ ಬಳಿಕ ತಪ್ಪಿಸಿಕೊಳ್ಳಲು ಓಟಿಟಿಗಳಿಂದ ಇಂದುಶೇಖರ್ ಹಾಗೂ ಆತನ ಪುತ್ರಿ ಪ್ರಚೋದನೆಗೊಳಗಾಗಿರಬಹುದು ಎನ್ನಲಾಗಿದೆ.--
ಅಪ್ರಾಪ್ತ ಬಾಲಕಿ ವಿಚಾರಣೆತನ್ನ ಕುಟುಂಬದ ನರಮೇಧ ಪ್ರಕರಣ ಸಂಬಂಧ ಆರೋಪಿ ಇಂದುಶೇಖರ್ನ ಅಪ್ರಾಪ್ತ ಪುತ್ರಿಯನ್ನು ಪೊಲೀಸರು ಶನಿವಾರ ಸಹ ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆ ವೇಳೆ ಆಕೆ ಸಹಜವಾಗಿ ವರ್ತಿಸುತ್ತಿದ್ದಾಳೆ. ತನ್ನ ಮಗಳ ಬ್ರೈನ್ ವಾಶ್ ಮಾಡಿ ಕೃತ್ಯಕ್ಕೆ ಇಂದುಶೇಖರ್ ನೆರವುಪಡೆದಿರುವ ಸಾಧ್ಯತೆಗಳಿವೆ. ಇದುವರೆಗೆ ಇಂದುಶೇಖರ್ ಹೇಳಿದ ಕತೆಯನ್ನೇ ಆಕೆ ಕೂಡ ಹೇಳುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
