ಪಾರ್ಟಿಯಲ್ಲಿ ಹಾವಿನ ವಿಷ ಬಳಕೆ: ಆರೋಪಕ್ಕೆ ಎಲ್ವಿಶ್‌ ನಕಾರ

KannadaprabhaNewsNetwork |  
Published : Nov 09, 2023, 01:00 AM ISTUpdated : Nov 09, 2023, 01:01 AM IST

ಸಾರಾಂಶ

ನೋಯ್ಡಾ: ರೇವ್‌ ಪಾರ್ಟಿಯಲ್ಲಿ ನಶೆ ಎರಿಸಲು ಹಾವಿನ ವಿಷ ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ ಬಾಸ್‌ ಒಟಿಟಿ ವಿಜೇತ ಮತ್ತು ಜನಪ್ರಿಯ ಯೂಟ್ಯೂಬ್‌ ತಾರೆ ಎಲ್ವಿಶ್‌ ಯಾದವ್‌ ತಮ್ಮನ್ನು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ.

ಸಾಬೀತಾದರೆ ಬಂಧನಕ್ಕೆ ಸಿದ್ಧ: ಎಲ್ವಿಶ್‌

ನೋಯ್ಡಾ: ರೇವ್‌ ಪಾರ್ಟಿಯಲ್ಲಿ ನಶೆ ಎರಿಸಲು ಹಾವಿನ ವಿಷ ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ ಬಾಸ್‌ ಒಟಿಟಿ ವಿಜೇತ ಮತ್ತು ಜನಪ್ರಿಯ ಯೂಟ್ಯೂಬ್‌ ತಾರೆ ಎಲ್ವಿಶ್‌ ಯಾದವ್‌ ತಮ್ಮನ್ನು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ.

ಬುಧವಾರ ನೋಯ್ಡಾ ಪೊಲೀಸರ ಎದುರು ವಿಚಾರಣೆಗೆ ಹಾಜರಾದ ಅವರು. ‘ಪ್ರಕರಣದಲ್ಲಿ ನನ್ನ ಯಾವುದೇ ಪಾತ್ರವಿಲ್ಲ. ಆರೋಪ ಸಾಬೀತಾದಲ್ಲಿ ಬಂಧನಕ್ಕೆ ಸಿದ್ದ. ನನ್ನನ್ನು ತಪ್ಪಾಗಿ ಇದರಲ್ಲಿ ಸಿಕ್ಕಿಸಲಾಗಿದೆ’ ಎಂದರು.‘ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ತಡರಾತ್ರಿ ನೋಯ್ಡಾ ಪೊಲೀಸರು ಯೂಟ್ಯೂಬರ್‌ ಎಲ್ವಿಶ್‌ ಅವರನ್ನು ವಿಚಾರಣೆ ನಡೆಸಿದ್ದರು. ಈಗ ಮತ್ತೆ ವಿಚಾರಣೆಗೆ ಕರೆಯಲಾಗಿದೆ’ ಎಂದು ನೋಯ್ಡಾ ಉಪ ಪೊಲೀಸ್‌ ಆಯುಕ್ತ (ಡಿಸಿಪಿ) ಹರೀಶ್‌ ಚಂದರ್‌ ಹೇಳಿದರು. ಪ್ರಕರಣದಲ್ಲಿ ಹೆಸರಿಸಲಾದ ಐವರು ಆರೋಪಿಗಳ ಪೈಕಿ ಎಲ್ವಿಶ್‌ ಅವರೂ ಒಬ್ಬರಾಗಿದ್ದಾರೆ. ಗೌತಮ್‌ ಬುದ್ಧ ನಗರದ ಪೊಲೀಸ್‌ ಆಯುಕ್ತ ಲಕ್ಷ್ಮಿ ಸಿಂಗ್‌ ಅವರ ಆದೇಶದ ಮೇರೆಗೆ ಪ್ರಕರಣವನ್ನು ವಲಯ 49 ರಿಂದ ವಲಯ 20ರ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!