ಪ್ರಚೋದನಕಾರಿ ಭಾಷಣ: ಈಶ್ವರಪ್ಪ ವಿರುದ್ಧ ಕೇಸು ದಾಖಲು

KannadaprabhaNewsNetwork |  
Published : Oct 13, 2023, 12:15 AM IST

ಸಾರಾಂಶ

ಪ್ರಚೋದನಕಾರಿ ಭಾಷಣದ ಹಿನ್ನೆಲೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿರುದ್ಧ ಶಿವಮೊಗ್ಗದ ಜಯನಗರ ಠಾಣೆ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.

ಶಿವಮೊಗ್ಗ : ಪ್ರಚೋದನಕಾರಿ ಭಾಷಣದ ಹಿನ್ನೆಲೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿರುದ್ಧ ಶಿವಮೊಗ್ಗದ ಜಯನಗರ ಠಾಣೆ ಪೊಲೀಸರಿಂದ ಸುಮೋಟೋ ಪ್ರಕರಣ ದಾಖಲಾಗಿದೆ. ಅವರು ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ವಿರುದ್ಧ ಜಿಲ್ಲಾ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ರೀತಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ.ಈಶ್ವರಪ್ಪ ಹೇಳಿದ್ದೇನು?: ಅವರು ತಮ್ಮ ಭಾಷಣದ ವೇಳೆ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿ, ‘ಸಿದ್ದರಾಮಯ್ಯನವರೇ ನಿಮ್ಮ ಮಗ ಯತೀಂದ್ರರನ್ನು ಮುಸ್ಲಿಂ ಗೂಂಡಾಗಳು ಕೊಲೆ ಮಾಡಿದ್ದರೆ ನಿಮಗೆ ಏನು ಅನಿಸುತ್ತಿತ್ತು? ಡಿ.ಕೆ.ಶಿವಕುಮಾರ್‌ ಅವರೇ ನಿಮ್ಮ ಸಹೋದರ ಡಿ.ಕೆ.ಸುರೇಶ್‌ ಅವರನ್ನೂ ಮುಸ್ಲಿಂ ಗೂಂಡಾಗಳು ಕೊಲೆ ಮಾಡಿದರೆ ನಿಮಗೆ ಏನನಿಸುತ್ತಿತ್ತು ? ಎಂದು ವಿವಾದಾತ್ಮಕವಾಗಿ ಪ್ರಶ್ನಿಸಿರುವುದೇ ಅಲ್ಲದೆ, ಹಿಂದೂಗಳು ಮುಸ್ಲಿಮರ ಕೇರಿಗೆ ನುಗ್ಗಿದ್ದರೆ ಮಾರಿ ಜಾತ್ರೆಯಲ್ಲಿ ಕುರಿ ಕತ್ತರಿಸಿ ದಂತೆ ಕತ್ತರಿಸಿ ಹಾಕುತ್ತಿದ್ದರು ಎಂದಿದ್ದರು.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!