ಕನ್ನಡಪ್ರಭ ವಾರ್ತೆ ಬೆಂಗಳೂರು
ಥಣಿಸಂದ್ರದ ಸಮೀಪದ ಹೆಗಡೆ ನಗರದ ನಿವಾಸಿಗಳಾದ ಮೊಹಮ್ಮದ್ ಅಹ್ಮದ್ ಅಲಿಯಾಸ್ ಸಲ್ಮಾನ್, ಆತನ ತಂದೆ ಫಾರೂಕ್ ಹಾಗೂ ಮಂಗಮ್ಮನಪಾಳ್ಯದ ಶಾಜಿದ್ ಬಂಧಿತರಾಗಿದ್ದು, ಆರೋಪಿಗಳಿಂದ ₹30.40 ಲಕ್ಷ ಮೌಲ್ಯದ 93 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಈ ಕೃತ್ಯದಲ್ಲಿ ತಪ್ಪಿಸಿಕೊಂಡಿರುವ ಮತ್ತೊಬ್ಬ ಪ್ರಮುಖ ಆರೋಪಿ ಪಾದರಾಯನಪುರದ ಮೊಹಮ್ಮದ್ ಮುಸ್ತಾಕ್ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಕೆಲ ದಿನಗಳ ಹಿಂದೆ ಬಿ.ನಾರಾಯಣಪುರ ಸಮೀಪ ಖಾಸಗಿ ಕಂಪನಿ ಉದ್ಯೋಗಿಯೊಬ್ಬರಿಂದ ಕಿಡಿಗೇಡಿಗಳು ಮೊಬೈಲ್ ದೋಚಿದ್ದರು. ಈ ಬಗ್ಗೆ ತನಿಖೆಗಿಳಿದ ಇನ್ಸ್‌ಪೆಕ್ಟರ್ ಜಿ.ಪ್ರವೀಣ್ ಬಾಬು ಹಾಗೂ ಸಬ್ ಇನ್ಸ್‌ಪೆಕ್ಟರ್ ಪರಶುರಾಮ್ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಮೂವರು ಮೊಬೈಲ್ ಕಳ್ಳರನ್ನು ಬಂಧಿಸಿದ್ದಾರೆ.ಮೊಬೈಲ್ ಕದಿಯುವುದೇ ಅಪ್ಪ-ಮಕ್ಕಳ ಕೆಲಸ:
ಬಿಡಿ ಭಾಗಗಳನ್ನು ಕಳಚಿ ಸೇಲ್:
ಕಳವು ಮಾಡಿದ ಮೊಬೈಲ್‌ಗಳನ್ನು ಆರೋಪಿಗಳು ಮೊಬೈಲ್‌ಗಳ ಬಿಡಿ ಭಾಗಗಳನ್ನು ಕಳಚಿ ಮಾರುತ್ತಿದ್ದರು. ಈ ಮೊಬೈಲ್ ಮಾರಾಟದಲ್ಲಿ ಪಾದರಾಯನಪುರದ ಮುಸ್ತಾಕ್ ಪಳಗಿದ ಕೈ ಆಗಿದ್ದು, ಹಲವು ವರ್ಷಗಳಿಂದ ನಗರದ ಎಸ್.ಪಿ.ರಸ್ತೆಯಲ್ಲಿ ಸೆಕೆಂಡ್ಸ್ ಮೊಬೈಲ್ ಮಾರಾಟದಲ್ಲಿ ಆತ ನಿರತನಾಗಿದ್ದಾನೆ. ತನ್ನ ಸಹಚರರು ಪೊಲೀಸರಿಗೆ ಸಿಕ್ಕಿಬಿದ್ದ ಕೂಡಲೇ ಮುಸ್ತಾಕ್ ತಲೆಮರೆಸಿಕೊಂಡಿದ್ದಾನೆ.