ಬಟ್ಟೆ ತೊಳೆಯಲು ನಾಲೆಗೆ ತೆರಳಿದ್ದ ಗೃಹಿಣಿಯನ್ನು ದಷ್ಕರ್ಮಿಗಳು ಕೊಲೆಗೈದು ಆಕೆ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ, ಓಲೆ ಕಸಿದು ಪರಾರಿಯಾಗಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪಾಲಹಳ್ಳಿಯ ಗ್ರಾಮದ ಕ್ಯೂಟ್ ರೆಸಾರ್ಟ್ ಬಳಿಯ ವರುಣ ನಾಲೆ ಬಳಿ ಘಟನೆ.
ಶ್ರೀರಂಗಪಟ್ಟಣ:
ಬಟ್ಟೆ ತೊಳೆಯಲು ನಾಲೆಗೆ ತೆರಳಿದ್ದ ಗೃಹಿಣಿಯನ್ನು ದಷ್ಕರ್ಮಿಗಳು ಕೊಲೆಗೈದು ಆಕೆ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ, ಓಲೆ ಕಸಿದು ಪರಾರಿಯಾಗಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಪಾಲಹಳ್ಳಿಯ ಜಗದೀಶ್ ಪತ್ನಿ ಮಮತಾ (35) ಕೊಲೆಯಾದ ಮಹಿಳೆ. ಭಾನುವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಬಟ್ಟೆ ತೊಳೆಯಲು ಗ್ರಾಮದ ಕ್ಯೂಟ್ ರೆಸಾರ್ಟ್ ಬಳಿಯ ವರುಣ ನಾಲೆಗೆ ತೆರಳಿದ್ದ ವೇಳೆ ಕಾಲುವೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಮೃತರ ಕತ್ತಿನದಲ್ಲಿದ್ದ ಚಿನ್ನದ ತಾಳಿ ಸರ, ಕಿವಿಯಲ್ಲಿದ್ದ ಓಲೆ ಕಿತ್ತುಕೊಂಡು ಹೋಗಿದ್ದಾರೆ. ಮೇಲ್ನೋಟಕ್ಕೆ ಯಾರೋ ದುಷ್ಕರ್ಮಿಗಳು ಚಿನ್ನಕ್ಕಾಗಿ ಮಹಿಳೆ ಕೊಲೆ ಮಾಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.ಶ್ರೀರಂಗಪಟ್ಟಣ ಟೌನ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು
ಮಳವಳ್ಳಿ:ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿಯಾಗಿ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಾಳಕೆಂಪನದೊಡ್ಡಿ ಗೇಟ್ ಬಳಿ ಸಂಭವಿಸಿದೆ.
ಪಟ್ಟಣದ ಗಂಗಾಮತ ಬಡಾವಣೆಯ ಶ್ರೀನಿವಾಸ್ (34) ಮೃತಪಟ್ಟ ದುರ್ದೈವಿ. ಎಂ.ದೊಡ್ಡಿಯಲ್ಲಿ ಕೋಳಿ ವ್ಯಾಪಾರ ಮಾಡುತ್ತಿದ್ದ ಶ್ರೀನಿವಾಸ್ ತಮ್ಮ ಬೈಕ್‌ನಲ್ಲಿ ಶನಿವಾರ ರಾತ್ರಿ ಮಳವಳ್ಳಿಗೆ ಬರುತ್ತಿದ್ದ ವೇಳೆ 11ನೇ ಮೈಲಿಕಲ್ಲಿನ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಶ್ರೀನಿವಾಸ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.