ವಿದ್ಯುತ್ ತಂತಿ ತಗುಲಿ ಐದು ವರ್ಷದ ಮಗು ಸಾವು: ತಾಯಿಗೆ ಗಾಯ

KannadaprabhaNewsNetwork |  
Published : May 25, 2025, 11:53 PM ISTUpdated : May 26, 2025, 04:38 AM IST
25ಕೆಎಂಎನ್ ಡಿ21 | Kannada Prabha

ಸಾರಾಂಶ

ವಿದ್ಯುತ್ ತಂತಿ ತಗುಲಿ ಮಗು ಮೃತಪಟ್ಟು, ತಾಯಿ ಗಾಯಗೊಂಡಿರುವ ಘಟನೆ ಪಾಂಡವಪುರ ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ನಡೆದಿದೆ.ತಾಲೂಕಿನ ಬನ್ನಂಗಾಡಿ ಗ್ರಾಮ ಸುಧೀರ್ ಪುತ್ರ ಸಂಜು (5) ಮೃತ ಬಾಲಕ. ಶಿಲ್ಪ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಪಾಂಡವಪುರ : ವಿದ್ಯುತ್ ತಂತಿ ತಗುಲಿ ಮಗು ಮೃತಪಟ್ಟು, ತಾಯಿ ಗಾಯಗೊಂಡಿರುವ ಘಟನೆ ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ನಡೆದಿದೆ.ತಾಲೂಕಿನ ಬನ್ನಂಗಾಡಿ ಗ್ರಾಮ ಸುಧೀರ್ ಪುತ್ರ ಸಂಜು (5) ಮೃತ ಬಾಲಕ. ಶಿಲ್ಪ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿಲ್ಪ ಹಾಗೂ ಮೃತ ಬಾಲಕ ಸಂಜು ಅವರ ಅಜ್ಜಿ ಮನೆ ಚಿಕ್ಕಮರಳಿ ಗ್ರಾಮದಲ್ಲಿ ವಾಸವಾಗಿದ್ದರು. ಭಾನುವಾರ ಬೆಳಗ್ಗೆ ಸ್ನಾನದ ಮನೆಗೆ ಮೃತ ಬಾಲಕ ಸಂಜು ಹೋಗಿ ಬಾಗಿಲು ಹಾಕಿದ್ದಾನೆ. ಆ ಮೇಳೆ ವಿದ್ಯುತ್ ಗ್ರೌಂಡಿಂಗ್ ಆಗಿ ಬಾಲಕ ಸಾವನ್ನಾಪ್ಪಿದ್ದಾನೆ. ಮಗನನ್ನು ಕಾಪಾಡಲು ಹೋಗಿ ತಾಯಿ ಶಿಲ್ಪ ಅವರು ಸಹ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆಗೆ ಪುಟ್ಟರಾಜು ಭೇಟಿ:

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಭೇಟಿಕೊಟ್ಟು ಮೃತ ಬಾಲಕ ಸಂಜು ಅವರ ಅಂತಿಮ ದರ್ಶನ ಪಡೆದು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬಳಿಕ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಸೋದರ ರಾಘುವ ಸಹ ಆಸ್ಪತ್ರೆಗೆ ಭೇಟಿಕೊಟ್ಟು ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಬಳಿಕ ಮೃತ ಬಾಲಕ ಸಂಜು ಅವರ ಅಂತ್ಯಕ್ರಿಯೆಯೂ ಬನ್ನಂಗಾಡಿ ಗ್ರಾಮದ ಹೊರವಲಯದಲ್ಲಿ ಭಾನುವಾರ ಸಂಜೆ ನೆರವೇರಿತು. ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.

ವಿದ್ಯುತ್ ಸ್ಪರ್ಶ: ವ್ಯಕ್ತಿ ಸಾವು

ಶ್ರೀರಂಗಪಟ್ಟಣ:

ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಮೃತಪಟ್ಟಿರುವ ಘಟನೆ ತಾಲೂಕಿನ ಹೆಬ್ಬಾಡಿಹುಂಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಈರೇಗೌಡ (55) ವಿದ್ಯುತ್ ಶಾಕ್‌ನಿಂದ ಮೃತಪಟ್ಟ ದುರ್ದೈವಿ. ಈತ ಮನೆಯಲ್ಲಿ ಮೋಟಾರ್ ಸ್ಚಿಚ್ ಹಾಕಲು ಹೋಗಿ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾನೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Read more Articles on

Recommended Stories

ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ
ಹಿಂಸೆ ಸಹಿಸದೆ ಕುಡುಕ ಪತಿಯ ಕೊಲೆ: ಪತ್ನಿ, ಬಾವಿ ಅಳಿಯ ಸೆರೆ