ಸುಂಕಾತೊಣ್ಣೂರು ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಯುವ ರೈತ ಸಾವು

KannadaprabhaNewsNetwork |  
Published : May 25, 2025, 02:49 AM ISTUpdated : May 25, 2025, 05:21 AM IST
Electrocution Death Pulppally

ಸಾರಾಂಶ

ವಿದ್ಯುತ್ ಸ್ಪರ್ಶದಿಂದ ಯುವ ರೈತ ಮೃತಪಟ್ಟಿರುವ ಘಟನೆ ವಾರ್ತೆ ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ರೈತ ಕಲ್ಲು ವೀರೇಗೌಡರ ಪುತ್ರ ಅಕ್ಷಯ್ (30) ಮೃತ ಯುವ ರೈತ.

 ಪಾಂಡವಪುರ : ವಿದ್ಯುತ್ ಸ್ಪರ್ಶದಿಂದ ಯುವ ರೈತ ಮೃತಪಟ್ಟಿರುವ ಘಟನೆ ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಗ್ರಾಮದ ರೈತ ಕಲ್ಲು ವೀರೇಗೌಡರ ಪುತ್ರ ಅಕ್ಷಯ್ (30) ಮೃತ ಯುವ ರೈತ.

ಅಕ್ಷಯ್ ಸ್ವಗ್ರಾಮ ಸಮೀಪದ ಎಸ್.ಕೊಡಗಹಳ್ಳಿ ಎಲ್ಲೆಯಲ್ಲಿನ ಜಮೀನಿನಲ್ಲಿ ಕಬ್ಬು ಮತ್ತು ತರಕಾರಿ ಬೇಸಾಯಕ್ಕಾಗಿ ಪಂಪ್ ಸೆಟ್ ಚಾಲನೆ ಮಾಡಲು ಹೋದ ವೇಳೆ ವಿದ್ಯುತ್ ಸ್ಪರ್ಶವಾಗಿ ಗಂಭೀರ ಗಾಯಗೊಂಡಿದ್ದಾನೆ.

ಅಕ್ಷಯ್‌ನನ್ನು ಚಿಕಿತ್ಸೆಗಾಗಿ ಪಟ್ಟಣದ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿ ಅಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಜಮೀನಿನ ಬಳಿ ಕೃಷಿ ಚಟುವಟಿಕೆಗೆ ಪಂಪ್ ಸೆಟ್ ಮೂಲಕ ನೀರು ಹಾಯಿಸಲು ವಿದ್ಯುತ್ ಬಂದಿಲ್ಲವೆಂದು ಪರಿಶೀಲಿಸುತ್ತಿದ್ದಾಗ 11ಕೆವಿ ವಿದ್ಯುತ್ ಮಾರ್ಗದಲ್ಲಿ ಪ್ರೈಮರಿಯಿಂದ ಸೆಕೆಂಡರಿ ಲೈನಿಗೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶವಾಗಿ ಪುತ್ರ ಅಕ್ಷಯ್ ಮೃತಪಟ್ಟಿದ್ದು, ಕಾನೂನು ರೀತಿಯ ಕ್ರಮ ಜರುಗಿಸುವಂತೆ ತಂದೆ ಕಲ್ಲು ವೀರೇಗೌಡ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪಟ್ಟಣದ ಉಪವಿಭಾಗೀಯ ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸುಂಕಾತೊಣ್ಣೂರು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಪ್ರಥಮ ಪಿಯುನಲ್ಲಿ ಕಡಿಮೆ ಅಂಕ: ವಿದ್ಯಾರ್ಥಿನಿ ಆತ್ಮಹತ್ಯೆ

  ಮಂಡ್ಯ : ಪ್ರಥಮ ಪಿಯುಸಿಯಲ್ಲಿ ಶೇ.೭೮ ರಷ್ಟು ಫಲಿತಾಂಶ ಬಂದಿದ್ದರೂ ಕಡಿಮೆ ಅಂಕ ಬಂದಿರುವುದಾಗಿ ಬೇಸತ್ತ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಟ್ಟಣದ ಪಶ್ಚಿಮವಾಹಿನಿಯ ಜೀವಿತಾ (೧೭) ಮೃತ ಯುವತಿ. ಪ್ರಥಮ ಪಿಯುಸಿಯಲ್ಲಿ ಚೆನ್ನಾಗಿ ಓದಿ ಪರೀಕ್ಷೆ ಬರೆದಿದ್ದೆ. ನಿರೀಕ್ಷೆಯಷ್ಟು ಅಂಕ ಬಂದಿಲ್ಲ ಎಂದು ಸದಾಕಾಲ ಬೇಸರದಿಂದ ಇರುತ್ತಿದ್ದಳು. ದ್ವಿತೀಯ ಪಿಯುಸಿಯಲ್ಲಿ ಚೆನ್ನಾಗಿ ಓದಿ ಉತ್ತಮ ಅಂಕ ಗಳಿಸುವಂತೆ ತಂದೆ-ತಾಯಿ ಹೇಳಿದರೂ ಕೇಳದೆ ಮನನೊಂದು ಮನೆಯಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ ಎಂದು ಯುವತಿಯ ತಂದೆ ಆನಂದ್ ಪೊಲೀಸರಿಗೆ ದೂರು ನೀಡಿದ್ದಾರೆ.

PREV
Read more Articles on

Recommended Stories

ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ
ಹಿಂಸೆ ಸಹಿಸದೆ ಕುಡುಕ ಪತಿಯ ಕೊಲೆ: ಪತ್ನಿ, ಬಾವಿ ಅಳಿಯ ಸೆರೆ