ಕನ್ನಡಪ್ರಭ ವಾರ್ತೆ ಪಾವಗಡ ಟೊಮೆಟೊ ಬೆಳೆ ನಷ್ಟ ಪರಿಣಾಮ ಬೇಸತ್ತ ರೈತನೊಬ್ಬ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗುಂಡ್ಲಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ನಾರಾಯಣಪ್ಪ (65) ಮೃತ ದುರ್ದೈವಿ. ಗುಂಡ್ಲಹಳ್ಳಿಯ ವಾಸಿ ರೈತ ನಾರಾಯಣಪ್ಪ ವ್ಯವಸಾಯದಲ್ಲಿ ನಿರತ ಜೀವನ ಸಾಗುಸುತ್ತಿದ್ದು, ತಮಗೆ ಸೇರಿದ್ದ ನೀರಾವರಿ ಜಮೀನಿನಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದರು. ನೀರು ಹಾಗೂ ಪದೇ ಪದೇ ವಿದ್ಯುತ್ ಕಡಿತದ ಅಭಾವದಿಂದ ಟೊಮೆಟೊ ಬೆಳೆ ನಷ್ಟಕ್ಕೀಡಾಗಿದ್ದು, ಬೆಲೆ ಕುಸಿತದ ಪರಿಣಾಮ ಸಾಲ ತೀರಿಸಲಾಗದೆ ಗುಂಡ್ಲಹಳ್ಳಿಯ ಕೆರೆ ಸಮೀಪದ ವಿದ್ಯುತ್ ಟವರ್‌ವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಸ್ಥಳೀಯ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್ ಮತ್ತು ಕೈಸಾಲ ಸೇರಿ ಒಟ್ಟು 5ಲಕ್ಷ ಸಾಲ ಮಾಡಿದ್ದರೆನ್ನಲಾಗಿದ್ದು, ಪತ್ನಿ, ಪುತ್ರಿ ಹಾಗೂ ಮೂರು ಮಂದಿ ಪುತ್ರರನ್ನು ಮೃತರು ಆಗಲಿದ್ದಾರೆ. ಘಟನೆ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.