ಕನ್ನಡಪ್ರಭ ವಾರ್ತೆ, ಕುಣಿಗಲ್ ಮಾಂಸಕ್ಕಾಗಿ ಬಾವಲಿ ಕೊಂದ ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನ ಹೊಂಬಾಳಮ್ಮ ಪೇಟೆಯ ರಂಗನಾಥ್, ರಾಮಕೃಷ್ಣ, ಶಿವಶಂಕರ್, ರಂಗನಾಥ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಕುಣಿಗಲ್ ತಾಲೂಕಿನ ಕಾಡರಾಮನಹಳ್ಳಿ ಗ್ರಾಮದ ಖಾಸಗಿ ವ್ಯಕ್ತಿಯ ಜಮೀನಿನ ಮರದಲ್ಲಿದ್ದ ಎಂಟು ಬಾವಲಿ ಹಕ್ಕಿಗಳನ್ನು ನಾಡ ಬಂದೂಕು ಬಳಿಸಿ ಹೊಡೆದು ಕೊಂದಿದ್ದ ಖಚಿತ ಮಾಹಿತಿ ಮೇರೆಗೆ ಹುಲಿಯೂರು ದುರ್ಗ ವಲಯ ಅರಣ್ಯಾಧಿಕಾರಿ ಜಗದೀಶ್ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ದಾಳಿ ಮಾಡಿ 8 ಸತ್ತ ಬಾವಲಿಗಳನ್ನು ಮತ್ತು ಎರಡು ನಾಡ ಬಂದೂಕುಗಳ ಸಮೇತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.