ಹುಲಿ ಉಗುರಿನ ಪೆಂಡೆಂಟ್ ಧರಿಸಿ ಜಾಹಿರಾತು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯುವೆಲರಿ ಶಾಪ್ ಮಾಲಿಕ ವಿಶ್ವಾಸ ಅವರ ಮನೆ ಹಾಗೂ ಕಚೇರಿಯನ್ನು ಅರಣ್ಯ ಇಲಾಖೆಯವರು ಶೋಧ ನಡೆಸಿದರು.
ಕನ್ನಡಪ್ರಭ ವಾರ್ತೆ, ತುಮಕೂರು ಹುಲಿ ಉಗುರಿನ ಪೆಂಡೆಂಟ್ ಧರಿಸಿ ಜಾಹಿರಾತು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯುವೆಲರಿ ಶಾಪ್ ಮಾಲಿಕ ವಿಶ್ವಾಸ ಅವರ ಮನೆ ಹಾಗೂ ಕಚೇರಿಯನ್ನು ಅರಣ್ಯ ಇಲಾಖೆಯವರು ಶೋಧ ನಡೆಸಿದರು. ಎರಡು ಉಂಗುರ ಮಾದರಿಯ ಪೆಂಡೆಂಟ್ ಹಾಗೂ ಒಂದು ಡಾಲರ್ ಮಾದರಿಯ ಪೆಂಡೆಂಟ್ ಪತ್ತೆಯಾಗಿದೆ. ಮೂರು ಪೆಂಡೆಂಟ್ ಗಳನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದಿದ್ದಾರೆ. ತುಮಕೂರಿನ ಚಿಕ್ಕಪೇಟೆಯಲ್ಲಿರುವ ವಿಶ್ವಾಸ್ ಜ್ಯುವೆಲರಿ ಶಾಪ್ ಮಾಲೀಕ ವಿಶ್ವಾಸ್ ಮನೆಯಲ್ಲಿ ಅರಣ್ಯ ಅಧಿಕಾರಿಗಳು ಮಹಜರು ನಡೆಸಿದರು.