ಗುಟ್ಕಾ ತಂದುಕೊಡದ ಬಾಲಕಿಯನ್ನು ಕೊಂದು ಚೀಲದಲ್ಲಿ ತುಂಬಿದ್ದ

ಸಾರಾಂಶ

ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಏ.19 ರಂದು ನಡೆದಿದ್ದ ಅನುಶ್ರೀ ರಾಘವೇಂದ್ರ ಮಡಿವಾಳ (7) ಎಂಬ ಬಾಲಕಿಯ ನಿಗೂಢ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಪ್ಪಳ :  ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಏ.19 ರಂದು ನಡೆದಿದ್ದ ಅನುಶ್ರೀ ರಾಘವೇಂದ್ರ ಮಡಿವಾಳ (7) ಎಂಬ ಬಾಲಕಿಯ ನಿಗೂಢ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ವಿಮಲ್‌ (ಗುಟಕಾ) ತಂದು ಕೊಡಲಿಲ್ಲ ಎಂದು ಸಿಟ್ಟಿಗೆದ್ದು ಕೈಯ್ಯಲ್ಲಿದ್ದ ಬಡಿಗೆಯಿಂದ ಹೊಡೆದು ಅದೇ ಗ್ರಾಮದ ಸಿದ್ದಲಿಂಗಯ್ಯ ಎಂಬಾತನೇ ಹತ್ಯೆಗೈದಿದ್ದಾನೆ. ಆತನನ್ನು ಬಂಧಿಸಲಾಗಿದೆ. 

ಅಂದು ಮಧ್ಯಾಹ್ನ ಆತ ಬಾಲಕಿಯನ್ನು ಕರೆದು ವಿಮಲ್‌ ತಂದುಕೊಡುವಂತೆ ಕೇಳಿದ್ದ. ಬಾಲಕಿ ಒಪ್ಪದಿದ್ದಾಗ ಕುಡಿದ ಮತ್ತಿನಲ್ಲಿ ಕೈಯ್ಯಲ್ಲಿದ್ದ ಊರುಗೋಲಿನಿಂದ ಆಕೆಯ ತಲೆಗೆ ಜೋರಾಗಿ ಹೊಡೆದಿದ್ದ. 

ಹುಡುಗಿ ಪ್ರಜ್ಞೆ ತಪ್ಪಿ ಬಿದ್ದಾಗ ಗಾಬರಿಗೊಂಡ ಸಿದ್ದಲಿಂಗಯ್ಯ, ಚೀಲವೊಂದರಲ್ಲಿ ತುಂಬಿಟ್ಟಿದ್ದ. ಮನೆಯಲ್ಲಿಯೇ ಎರಡು ದಿನ ಶವ ಇಟ್ಟುಕೊಂಡಿದ್ದ. ವಾಸನೆ ಬರಲಾರಂಭಿಸಿದ್ದರಿಂದ ರಾತ್ರಿ ವೇಳೆ ತಾನೇ ಚೀಲವನ್ನು ಪಾಳುಬಿದ್ದ ಮನೆಯಲ್ಲಿಟ್ಟು, ಮಣ್ಣು ಹಾಕಿ ಮುಚ್ಚಿದ್ದ. ಮರುದಿನ ಅಕ್ಕಪಕ್ಕದವರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.

Share this article