ಮೆಟ್ರೋದಲ್ಲಿ ಮಹಿಳೆಯ ಅಸಭ್ಯ ಫೋಟೋ ತೆಗೆದು ಪೋಸ್ಟ್‌ ಮಾಡಿದ್ದವನಿಗೆ ಹೈಕೋರ್ಟ್‌ ಚಾಟಿ

KannadaprabhaNewsNetwork |  
Published : Apr 28, 2026, 03:30 AM ISTUpdated : Apr 28, 2026, 06:02 AM IST
 High Court

ಸಾರಾಂಶ

  ಆಕ್ಷೇಪಾರ್ಹ ರೀತಿಯಲ್ಲಿ ಮೆಟ್ರೋ ಮಹಿಳಾ ಪ್ರಯಾಣಿಕರ ಫೋಟೋ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ನಗರದ ಕಾಳಿಕನಗರದ ನಿವಾಸಿ ಬಿ.ಕೆ.ದಿಗಂತ್‌ ಎಂಬ ವ್ಯಕ್ತಿಗೆ ಹೈಕೋರ್ಟ್‌ ಬೀಸಿದ ಚಾಟಿಯ ಪರಿ ಇದು.

  ಬೆಂಗಳೂರು :  ಮೆಟ್ರೊದಲ್ಲಿ ಮಹಿಳೆಯರ ಅಸಭ್ಯ ಫೋಟೊ ಕ್ಲಿಕ್ಕಿಸಿ ಮೆಟ್ರೊ ಚಿಕ್ಸ್‌ ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಮಾಡುತ್ತೀರಾ? ಏನಿದು ಅಸಹ್ಯ. ಇದನ್ನು ಹೇಗೆ ಮಾಡುತ್ತೀರಿ? ಮೆಟ್ರೋವನ್ನೂ ಸುರಕ್ಷಿತವಾಗಿ ಬಿಡುವುದಿಲ್ಲ. ಯಾವ ರೀತಿಯ ಮನುಷ್ಯರು ನೀವು? ಆಕ್ಷೇಪಾರ್ಹ ರೀತಿಯಲ್ಲಿ ಮೆಟ್ರೋ ಮಹಿಳಾ ಪ್ರಯಾಣಿಕರ ಫೋಟೋ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ನಗರದ ಕಾಳಿಕನಗರದ ನಿವಾಸಿ ಬಿ.ಕೆ.ದಿಗಂತ್‌ ಎಂಬ ವ್ಯಕ್ತಿಗೆ ಹೈಕೋರ್ಟ್‌ ಬೀಸಿದ ಚಾಟಿಯ ಪರಿ ಇದು.

ಅಲ್ಲದೆ, ಬೆಂಗಳೂರಿನ ಬನಶಂಕರಿ ಠಾಣೆಯ ಪೊಲೀಸರು ಅರ್ಜಿದಾರನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 67 (ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಿಷಯ ಪ್ರಕಟ ಅಥವಾ ರವಾನೆ) ಮತ್ತು ಬಿಎನ್‌ಎಸ್‌ ಸೆಕ್ಷನ್‌ 78(2)ರ (ಹಿಂಬಾಲಿಸುವುದು) ಮತ್ತು ಸೆಕ್ಷನ್‌ 238(C) ಅಡಿ ಸಾಕ್ಷ್ಯ ನಾಶ ಅಪರಾಧ ಸಂಬಂಧ ಸ್ವಯಂಪ್ರೇರಿತವಾಗಿ ದೂರನ್ನು ರದ್ದುಪಡಿಸಲು ನಿರಾಕರಿಸಿದೆ.

ಎಫ್‌ಐಆರ್‌ ರದ್ದುಪಡಿಸಲು ಕೋರಿ ಬಿ.ಕೆ.ದಿಗಂತ್‌ ಸಲ್ಲಿಸಿದ್ದ ಅರ್ಜಿ ವಜಾ

ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಲು ಕೋರಿ ಬಿ.ಕೆ.ದಿಗಂತ್‌ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ. ಇದಕ್ಕೂ ಮುನ್ನ ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ನಡತೆ ಬಗ್ಗೆ ಪ್ರತಿಕ್ರಿಯಿಸಿದ ಪೀಠ, ಮೆಟ್ರೋದಲ್ಲಿ ಮಹಿಳೆಯರ ಹಿಂಬದಿ ಫೋಟೊ ತೆಗೆದುಕೊಂಡು ‘ಮೆಟ್ರೊ ಚಿಕ್ಸ್‌’ ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಮಾಡುತ್ತೀರಾ? ಏನಿದು ಅಸಹ್ಯ. ಅದನ್ನು ಹೇಗೆ ಮಾಡುತ್ತೀರಿ? ಯಾಕೆ ಆ ಫೋಟೊಗಳನ್ನು ತೆಗೆದಿರಿ? ಎಲ್ಲೋದರೂ ಮಹಿಳೆಯರನ್ನು ಬಿಡುವುದಿಲ್ಲ. ಯಾವ ರೀತಿಯ ಮನುಷ್ಯರು ನೀವು? ಎಲ್ಲೂ ಮಹಿಳೆಯರನ್ನು ಸುರಕ್ಷಿತವಾಗಿರಲು ನೀವು ಬಿಡುವುದಿಲ್ಲ ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿತು.

ಪೊಲೀಸರೇ ದೂರುದಾರರಾಗಿದ್ದಾರೆ.

ಅರ್ಜಿದಾರರ ಪರ ವಕೀಲರು, ಸಿಸಿಟಿವಿ ಕ್ಯಾಮೆರಾಗಳು ಇವೆ. ಇಲ್ಲಿ ಪೊಲೀಸರೇ ದೂರುದಾರರಾಗಿದ್ದಾರೆ. ಯಾವುದೇ ಅಪರಾಧವಾಗಿಲ್ಲ ಎಂದು ಸಮಜಾಯಿಸಿ ನೀಡಿದರು. ಅದಕ್ಕೆ ಪೀಠವು, ಇನ್‌ಸ್ಟಾಗ್ರಾಂ ಪೇಜ್‌ ಬೇರೆ, ಅದರಲ್ಲಿ ಮೆಟ್ರೊ ಚಿಕ್ಸ್‌ ರೀಲ್ಸ್‌ ತಾಂತ್ರಿಕ ವಿಚಾರಗಳನ್ನು ಮುಂದು ಮಾಡಿ ಇಂತಹ ಪ್ರಕರಣದಲ್ಲಿ ಪಾರಾಗಲು ಬಿಡುವುದಿಲ್ಲ. ಕೆಲವು ವಿಚಾರಗಳಲ್ಲಿ ತಾಂತ್ರಿಕ ವಿಚಾರಗಳನ್ನು ನಿಲ್ಲಿಸಲು ಸಮಯ ಬಂದಿದೆ. ಮಹಿಳೆಯರ ಹಿಂಬದಿಯ ಚಿತ್ರ ತೆಗೆದು ವೆಬ್‌ಸೈಟ್‌ಗೆ ಹಾಕುವುದು ಅಪರಾಧವಲ್ಲವೇ? ಎಂದು ನುಡಿದು ಅರ್ಜಿ ವಜಾಗೊಳಿಸಿತು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಎಲ್‌ಇಡಿ ಸ್ಕ್ರಿನ್‌ ಗೋದಾಮಿಗೆ ಬೆಂಕಿ: ಪಿಜಿಯಲಿದ್ದ 50 ಮಹಿಳೆಯರು ಪಾರು
ಮದುವೆಯಾಗಲು ನಿರಾಕರಿಸಿದಕ್ಕೆ ಬೆಂಕಿ ಹಚ್ಚಿ ಪ್ರಿಯತಮನ ಕೊಲೆ ಮಾಡಿದ ಪ್ರೇಯಸಿ ಪ್ರೇಮ