ಮದುವೆಯಾಗಲು ನಿರಾಕರಿಸಿದಕ್ಕೆ ಬೆಂಕಿ ಹಚ್ಚಿ ಪ್ರಿಯತಮನ ಕೊಲೆ ಮಾಡಿದ ಪ್ರೇಯಸಿ ಪ್ರೇಮ

KannadaprabhaNewsNetwork |  
Published : Apr 28, 2026, 01:45 AM ISTUpdated : Apr 28, 2026, 08:54 AM IST
CRIME NEWS

ಸಾರಾಂಶ

ಮನೆಗೆ ಪ್ರಿಯಕರನ ಕರೆಸಿಕೊಂಡು ಬೆಂಕಿ ಹಚ್ಚಿ ಭೀಕರವಾಗಿ ಕೊಂದ ಪ್ರಕರಣದ ಆರೋಪಿ ಪ್ರೇಮ, ಪ್ರಿಯಕರ ಕಿರಣ್‌ ನನ್ನನ್ನು ಮದುವೆಯಾಗಲು ನಿರಾಕರಿಸಿದಕ್ಕೆ ಆತನ ಹತ್ಯೆ ಮಾಡಿದೆ ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.

 ಬೆಂಗಳೂರು :  ಮನೆಗೆ ಪ್ರಿಯಕರನ ಕರೆಸಿಕೊಂಡು ಬೆಂಕಿ ಹಚ್ಚಿ ಭೀಕರವಾಗಿ ಕೊಂದ ಪ್ರಕರಣದ ಆರೋಪಿ ಪ್ರೇಮ, ಪ್ರಿಯಕರ ಕಿರಣ್‌ ನನ್ನನ್ನು ಮದುವೆಯಾಗಲು ನಿರಾಕರಿಸಿದಕ್ಕೆ ಆತನ ಹತ್ಯೆ ಮಾಡಿದೆ ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.

ಯುವತಿಯನ್ನು 3 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ

ಯುವತಿಯನ್ನು 3 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡಿದ್ದ ಬ್ಯಾಡರಹಳ್ಳಿ ಠಾಣೆ ಪೊಲೀಸರು ತೀವ್ರ ವಿಚಾರಣೆ ನಡೆಸಿ ಬಳಿಕ ಸ್ಥಳ ಮಹಜರು ನಡೆಸಿದ್ದರು. ವಿಚಾರಣೆಯ ವೇಳೆ ಆರೋಪಿತೆ ಪ್ರೇಮಾ(27) ನನ್ನನ್ನು ಮದುವೆಯಾಗಲು ಕಿರಣ್ ನಿರಾಕರಿಸಿದ್ದ ಇದರಿಂದ ಆಕ್ರೋಶಗೊಂಡು ಈ ಕೃತ್ಯ ಎಸಗಿರುವುದಾಗಿ ಹೇಳಿಕೆ ನೀಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಜಿ ಪ್ರೇಯಸಿ ಜತೆ ಕಿರಣ್‌ ಸಂಪರ್ಕದಲ್ಲಿದ್ದ ಜತೆಗೆ ತನ್ನನ್ನು ಮದುವೆಯಾಗಲು ಹಿಂದೇಟು ಹಾಕುತ್ತಿದ್ದ ಎಂಬ ವಿಷಯ ತಿಳಿದು ಆಕ್ರೋಶಗೊಂಡಿದ್ದ ಪ್ರೇಮಾ ಈ ಕೃತ್ಯ ಎಸಗಿದ್ದಾಳೆ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಘಟನೆಯ ವಿವರ:

ಅಂತರ ಕಾಯ್ದುಕೊಂಡಿದಕ್ಕೆ ತುಮಕೂರು ಮೂಲದ ಕಿರಣ್‌ನನ್ನು (27) ಪ್ರಿಯತಮೆ ಪ್ರೇಮಾ(27) ಕಳೆದ ಮಂಗಳವಾರ ಮಧ್ಯಾಹ್ನ ತನ್ನ ಮನೆಗೆ ಕರೆಸಿಕೊಂಡು ಪ್ರೇಮ ನಿವೇದನೆಯ ನೆಪದಲ್ಲಿ ಆತನ ಕಣ್ಣಿಗೆ ಬಟ್ಟೆ ಕಟ್ಟಿ, ಕೈ ಕಾಲಿಗೆ ಹಗ್ಗದಿಂದ ಬಿಗಿದು ಬಳಿಕ ಪೆಟ್ರೋಲ್‌ ಮತ್ತು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಳು. ಈ ಸಂಬಂಧ ಕಿರಣ್‌ ತಂದೆ ನರಸಿಂಹಯ್ಯ ಅವರು ನೀಡಿದ ದೂರಿನನ್ವಯ ಕೊಲೆ ಪ್ರಕರಣ ದಾಖಲಿಸಿಕೊಂಡು ಯುವತಿಯನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ನಾಗಸಾಧು ಸೋಗಲ್ಲಿ ಬಂದು ವಾಸ್ತು ಶಿಲ್ಪಿಯಿಂದ ಚಿನ್ನದ ಉಂಗುರ ಎಗರಿಸಿ ಪರಾರಿ
ಜಾಲತಾಣದಲ್ಲಿ ಶ್ರೀಮಂತರಿಗೆ ಗಾಳ ಹಾಕಿ ವಂಚಿಸುತ್ತಿದ್ದ ರೀಲ್ಸ್‌ ರಾಣಿ ಸೆರೆ