ಕನ್ನಡಪ್ರಭ ವಾರ್ತೆ ಬೆಂಗಳೂರು
ಕುರುಬರಹಳ್ಳಿಯ ನಿವಾಸಿ ಅಂಬದಾಸ್ ಪ್ರಕಾಶ್ (23) ಮೃತ ದುರ್ದೈವಿ. ಈ ದುರ್ಘಟನೆಯಲ್ಲಿ ಗಾಯಗೊಂಡಿರುವ ಲಾರಿ ಚಾಲಕ ಶರ್ಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತ ಪ್ರಾಣಾಪಾಯದಿಂದ ಸುರಕ್ಷಿತವಾಗಿದ್ದಾನೆ. ಅಲ್ಲದೆ ಈ ಅವಘಡದಲ್ಲಿ ತ್ಯಾಜ್ಯ ಗೋದಾಮು ಸಹ ಸುಟ್ಟು ಭಸ್ಮವಾಗಿದೆ.
ಆಂಧ್ರಪ್ರದೇಶದಿಂದ ಸುಮನಹಳ್ಳಿ ಬಳಿಗೆ ಕಬ್ಬಿಣ ಸಾಗಿಸುವಾಗ ದಾರಿ ತಪ್ಪಿ ಮಹಾಲಕ್ಷ್ಮೀ ಲೇಔಟ್‌ಗೆ ಲಾರಿ ತೆರಳಿದೆ. ಆಗ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಕಾರಿಗೆ ಲಾರಿ ಗುದ್ದಿಸಿದಾಗ ಈ ಅಗ್ನಿ ಅವಘಡ ಸಂಭವಿಸಿದೆ. ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ತೆರಳಿ ನಾಲ್ಕೈದು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಮನೆಗೆ ಆಸರೆಯಾಗಿದ್ದ ದಾಸ್
ಇಎಂಐ ಪಾವತಿಗೆ ರಾತ್ರಿ ಕೆಲಸ
ಆದರೆ ಲಾರಿ ರೂಪದಲ್ಲಿ ಅವರಿಗೆ ಮೃತ್ಯು ಒಕ್ಕರಿಸಿದೆ. ಕುರುಬರಹಳ್ಳಿ ಕಡೆಯಿಂದ ರಾತ್ರಿ 1.30ರ ಸುಮಾರಿಗೆ ಕಬ್ಬಿಣ ತುಂಬಿದ್ದ ಲಾರಿ, ಪೈಪ್ ಲೈನ್ ರಸ್ತೆಯ ಇಳಿಜಾರಿನಲ್ಲಿ ಸಾಗಿದೆ. ಆಗ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಕಾರಿಗೆ ಲಾರಿ ಅಪ್ಪಳಿಸಿದೆ. ಬಳಿಕ 100 ಮೀಟರ್ ದೂರ ಕಾರನ್ನು ಎಳೆದುಕೊಂಡು ಹೋದ ಲಾರಿ, ಅಲ್ಲೇ ಸಮೀಪದ ಗುಜರಿ ವಸ್ತುಗಳ ಗೋದಾಮಿಗೆ ಗುದ್ದಿದೆ. ಈ ಡಿಕ್ಕಿಯಿಂದ ಕಿಡಿ ಸಿಡಿದು ಬೆಂಕಿ ಹೊತ್ತಿಕೊಂಡಿದೆ. ಈ ಘಟನೆ ವೇಳೆ ಕಾರಿನಿಂದ ಹೊರ ಬರಲಾಗದೆ ಅಗ್ನಿಯಲ್ಲಿ ದಾಸ್ ಬೆಂದು ಹೋಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಲಾರಿಯಿಂದ ಜಿಗಿದ ಚಾಲಕಗೋದಾಮಿಗೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಕೂಡಲೇ ಲಾರಿಯಿಂದ ಚಾಲಕ ಶರ್ಮಾ ಹೊರಗೆ ಜಿಗಿದಿದ್ದಾನೆ. ಆಗ ಆತನ ತಲೆ ಹಾಗೂ ಕೈಕಾಲುಗಳಿಗೆ ಪೆಟ್ಟಾಗಿದೆ. ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ 4 ವಾಹನಗಳಲ್ಲಿ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಆಗಮಿಸಿದ್ದಾರೆ. ಕೊನೆಗೆ ನಾಲ್ಕೈದು ತಾಸುಗಳ ಕಾರ್ಯಾಚರಣೆ ಬಳಿಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
-ಬಾಕ್ಸ್-
ದಾರಿ ತಪ್ಪಿದ ಚಾಲಕಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ ಜಿಂದಾಲ್ ಕಂಪನಿಯಿಂದ ನಗರಕ್ಕೆ ಕಬ್ಬಿಣವನ್ನು ಲಾರಿ ಚಾಲಕ ತುಂಬಿಕೊಂಡು ಬಂದಿದ್ದ. ಸುಮನಹಳ್ಳಿ ಸಮೀಪದಲ್ಲಿರುವ ಗೋದಾಮಿಗೆ ಆತ ಕಬ್ಬಿಣ ತೆಗೆದುಕೊಂಡು ಹೋಗಬೇಕಿತ್ತು. ಅಂತೆಯೇ ಬಳ್ಳಾರಿ ರಸ್ತೆ ಮೂಲಕ ನಗರಕ್ಕೆ ಬಂದ ಚಾಲಕ, ಗೊರಗುಂಟೆಪಾಳ್ಯ ಹಾದು ಸುಮನಹಳ್ಳಿ ಕಡೆಗೆ ಹೋಗಬೇಕಿತ್ತು.
ಬಾಕ್ಸ್...
ಗೂಗಲ್ ಮ್ಯಾಪ್ ಬಗ್ಗೆ ಗೊಂದಲಗೂಗಲ್ ಮ್ಯಾಪ್ ನೋಡಿ ಚಾಲಕ ದಾರಿ ತಪ್ಪಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಆದರೆ ಗಾಯಾಳು ಲಾರಿ ಚಾಲಕ ಈ ಬಗ್ಗೆ ಗೊಂದಲಕಾರಿ ಹೇಳಿಕೆ ಕೊಟ್ಟಿದ್ದಾನೆ. ಒಮ್ಮೆ ಗೂಗಲ್ ಮ್ಯಾಪ್ ಬಳಿಸಿದೆ ಎಂದರೆ, ಮತ್ತೊಂದು ಬಾರಿ ಇಲ್ಲ ಎನ್ನುತ್ತಾನೆ. ಘಟನೆಯಲ್ಲಿ ಚಾಲಕನ ಮೊಬೈಲ್ ಸುಟ್ಟು ಹೋಗಿದೆ. ಹೀಗಾಗಿ ಗೂಗಲ್ ಮ್ಯಾಪ್ ಬಳಕೆ ಬಗ್ಗೆ ಖಚಿತವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
- ಆಂಧ್ರದಿಂದ ಸುಮನಹಳ್ಳಿ ಬಳಿಗೆ ಕಬ್ಬಿಣ ಸಾಗಿಸಲು ಲಾರಿ ಮಹಾಲಕ್ಷ್ಮೀ ಲೇಔಟ್‌ಗೆ ತೆರಳಿದೆ- ಗೂಗಲ್ ಮ್ಯಾಪ್ ನೋಡಿ ತಪ್ಪು ದಾರಿಯಲ್ಲಿ ಬಂದ ಲಾರಿಯಿಂದ ಭೀಕರ ಅವಘಡ- ಆಂಧ್ರದಿಂದ ಸುಮನಹಳ್ಳಿ ಬಳಿಗೆ ಕಬ್ಬಿಣ ಸಾಗಿಸಲು ಲಾರಿ ಮಹಾಲಕ್ಷ್ಮೀ ಲೇಔಟ್‌ಗೆ ಬಂದಿದೆ-ಆಗ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿ ನಿಂತಿದ್ದ ಕಾರಿಗೆ ಜೋರಾಗಿ ಗುದ್ದಿದೆ -ಕೂಡಲೇ ಬೆಂಕಿ ಹೊತ್ತಿಕೊಂಡು ಲಾರಿ, ಕಾರು ಸುಟ್ಟಿದೆ. ಕಾರಲ್ಲಿದ್ದ ಚಾಲಕ ಸಜೀವ ದಹನವಾಗಿದ್ದಾನೆ-ಲಾರಿ ಚಾಲಕ ಪ್ರಾಣಾಪಾಯದಿಂದ ಪಾರು, ನಾಲ್ಕೈದು ತಾಸು ಬೆಂಕಿ ನಂದಿಸಿದ ಅಗ್ನಿಶಾಮಕ ದಳ