ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಗ್ರಾಮದ ಗೌರಮ್ಮರಿಗೆ ಸೇರಿದ ಮನೆಯಲ್ಲಿ ಪುತ್ರ ರಾಜು ಮತ್ತು ಸೊಸೆ ಆಶ್ವಿನಿ ವಾಸವಾಗಿದ್ದರು. ಇಬ್ಬರು ಕೂಲಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಗುರುವಾರ ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಹೋಗಿದ್ದ ವೇಳೆ ಮಧ್ಯಾಹ್ನ ಇದಕ್ಕಿದಂತೆ ಮನೆಯಿಂದ ದಟ್ಟ ಹೊಗೆ ಬರುತ್ತಿದ್ದನ್ನು ಕಂಡ ಪಕ್ಕದ ಮನೆಯವರು ಕೆ.ಆರ್.ಸಾಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಅಗ್ನಿ ಶಾಮಕ ದಳಕ್ಕೆ ಕೂಡ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಕೆ.ಆರ್.ಸಾಗರ ಪೊಲೀಸ್ ಠಾಣಾ ಪಿ.ಎಸ್.ಐ ರಮೇಶ್ ಕರ್ಕಿಕಟ್ಟೆ ಮತ್ತು ಸಿಬ್ಬಂದಿ ಹೆಚ್ಚಿನ ಅನಾಹುತವಾಗದಂತೆ ಎಚ್ಚರ ವಹಿಸಿದರು. ನಂತರ ಸ್ಥಳಕ್ಕೆ ಅಗ್ನಿ ಶಾಮಕದಳದವರು ಬರುವ ವೇಳೆಗೆ ಮನೆ ಸಂಪೂರ್ಣ ಸುಟ್ಟು ಹೋಗಿದ್ದು, ಬೆಂಕಿ ಉರಿಯುತ್ತಿದ್ದನ್ನು ಹೆಬ್ಬಾಳು ಮತ್ತು ಶ್ರೀರಂಗಪಟ್ಟಣ ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿದರು.ಸ್ಥಳಕ್ಕೆ ಕೆ.ಆರ್.ಸಾಗರ ಪೊಲೀಸ್ ಠಾಣಾ ವೃತ್ತದ ಆರಕ್ಷಕ ನಿರೀಕ್ಷಕ ವಿವೇಕನಂದಾ ಭೇಟಿ ನೀಡಿ ಮನೆ ಮಾಲೀಕರಿಂದ ಬೆಂಕಿ ಅನಾಹುತದಿಂದ ಅಗಿರುವ ನಷ್ಟಗಳಲ್ಲಿ ಹಣ, ವಸ್ತುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಧೈರ್ಯ ತುಂಬಿದರು.
ಬೆಂಕಿಯಿಂದ ತಾವು ಮನೆಯಲ್ಲಿ ಎರಡು ದಿನಗಳ ಹಿಂದೆ ಎಲ್ ಅಂಡ್ ಟಿ ಹಣಕಾಸು ಸಂಸ್ಥೆಯಿಂದ ಸಾಲ ಪಡೆದಿದ್ದ 50 ಸಾವಿರ ನಗದು ಸೇರಿದಂತೆ ಮನೆಯ ವಸ್ತುಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ. ಎರಡು ಸಿಲೆಂಡರ್‌ಗಳು ಇಟ್ಟಿದರು ಬ್ಲಾಸ್ಟ್ ಆಗದ ಕಾರಣ ಯಾವುದೇ ಭಾರಿ ಅನಾಹುತವಾಗಿಲ್ಲ.ಅವಘಡದಲ್ಲಿ 50 ಸಾವಿರ ನಗದು, ಮನೆ, ಗೃಹ ಉಪಯೋಗಿ ವಸ್ತುಗಳು ಸೇರಿ 2 ಲಕ್ಷದಷ್ಟು ನಷ್ಟವಾಗಿದೆ ಎಂದು ಗೌರಮ್ಮ ದೂರು ನೀಡಿದ್ದು ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಪಂ ಸದಸ್ಯ ಅರವಿಂದ್ 25 ಸಾವಿರ ಹಾಗೂ ರವಿಕುಮಾರ್ 5 ಸಾವಿರ ನಗದನ್ನು ಸ್ಥಳದಲ್ಲಿ ವೈಯಕ್ತಿಕವಾಗಿ ನೀಡಿದರು. ಶಾಸಕ ರಮೇಶ್ ಬಂಡಿಸಿದ್ದೇಗೌಡ ತಾವು ಕೂಡ ಪರಿಹಾರ ಹಾಗೂ ಗ್ರಾಪಂ ಅನುದಾನದಲ್ಲಿ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.