ಪತ್ನಿ ಗೆಳೆಯನ ಮೇಲೆ ಪತಿಯಿಂದ ಆಸಿಡ್ ದಾಳಿ

Published : Nov 22, 2026, 08:26 AM IST
acid attack

ಸಾರಾಂಶ

ತನ್ನ ಪತ್ನಿಯ ಜತೆ ಅನೈತಿಕ ಸಂಬಂಧ ಹೊಂದಿರುವ ಶಂಕೆಯ ಹಿನ್ನೆಲೆಯಲ್ಲಿ ಪತ್ನಿಯ ಸ್ನೇಹಿತನ ಮೇಲೆ ಪತಿ ಆ್ಯಸಿಡ್‌ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು : ತನ್ನ ಪತ್ನಿಯ ಜತೆ ಅನೈತಿಕ ಸಂಬಂಧ ಹೊಂದಿರುವ ಶಂಕೆಯ ಹಿನ್ನೆಲೆಯಲ್ಲಿ ಪತ್ನಿಯ ಸ್ನೇಹಿತನ ಮೇಲೆ ಪತಿ ಆ್ಯಸಿಡ್‌ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಶಶಿಕುಮಾರ್‌ ಎಂಬಾತನ ಮೇಲೆ ಆ್ಯಸಿಡ್‌ ಎರಚಿ ಗಾಯಗೊಳಿಸಿದ ಹಿನ್ನೆಲೆಯಲ್ಲಿ ಕಲ್ಯಾಣ ನಗರದ ನಿವಾಸಿ ನವೀನ್‌ ಕುಮಾರ್‌ (28) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಬೈಯಂಡಹಳ್ಳಿಯಲ್ಲಿ ನ.10 ರಂದು ಈ ಘಟನೆ ನಡೆದಿದೆ.

 ಪ್ರಕರಣದ ವಿವರ 

ಶಶಿಕುಮಾರ್‌ ಖಾಸಗಿ ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದು, ಇದೆ ಕಂಪನಿಯಲ್ಲಿ ಕೆಲಸ ಮಾಡುವ ಪ್ರತೀಕ್ಷಾ ಎಂಬುವರ ಪರಿಚಯವಾಗಿ ಸ್ನೇಹಿತರಾಗಿದ್ದರು. ನಂತರ ಪ್ರತೀಕ್ಷಾ ಅವರು ತನ್ನ ಪತಿ ನವೀನ್‌ ಅವರನ್ನು ಪರಿಚಯ ಮಾಡಿಕೊಟ್ಟಿದ್ದರು. ಎರಡು ವಾರಗಳ ಹಿಂದೆ ಪ್ರತೀಕ್ಷಾ ಮತ್ತು ನವೀಣ್‌ ಅವರು ಕೆಲಸ ಬಿಟ್ಟು ಬೇರೆ ಕಡೆಗೆ ಹೋಗಿ ಮನೆ ಮಾಡಿದ್ದರು. ಈ ಮಧ್ಯೆ ನ.10 ರಂದು ನವೀನ್‌ ನನಗೆ ಪೋನ್ ಮಾಡಿ ನಿನ್ನ ಜತೆ ಮಾತನಾಡಬೇಕು ಬಾ ಎಂದು ಹೇಳಿ, ಸ್ಥಳದ ಲೋಕೇಷನ್ ಕಳುಹಿಸಿದ್ದನು. ಅದರಂತೆ ನಾನು ಆ ಸ್ಥಳಕ್ಕೆ ಹೋಗಿದ್ದೆ. ಸಂಜೆ 4 ಗಂಟೆಯ ಸುಮಾರಿಗೆ ಬೈಯಂಡಹಳ್ಳಿಯಲ್ಲಿ ಪ್ರತೀಕ್ಷ ಅವರು ಕೆಲಸ ಮಾಡುವ ಫ್ಯಾಕ್ಟರಿ ಹತ್ತಿರ ಹೋಗಿ ಪ್ರತೀಕ್ಷ ಅವರ ಹತ್ತಿರ ಮಾತನಾಡುತ್ತಿರುವಾಗ ನವೀನ್ ಒಂದು ಬಕೆಟ್‌ನಲ್ಲಿ ಆ್ಯಸಿಡ್ ಎರಚಿದ್ದರಿಂದ ನನ್ನ ಬಲ ಭಾಗದ ಕೈ, ಮುಖ ಹಾಗೂ ಹೊಟ್ಟೆ ಹಾಗೂ ಇತರೆ ಭಾಗಗಳಿಗೆ ಗಾಯವಾಗಿದೆ ಎಂದು ದೂರಿನಲ್ಲಿ ಶಶಿಕುಮಾರ್‌ ವಿವರಿಸಿದ್ದಾನೆ.

ಅಕ್ರಮ ಸಂಬಂಧ ಇಟ್ಟುಕೊಂಡಿದ್ದೀಯಾ ಒಂದು ಗತಿ ಕಾಣಿಸಬೇಕೆಂದು ದಾಳಿ

ನೀನು ನನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದೀಯಾ. ಅದಕ್ಕೆ ನಿನಗೆ ಒಂದು ಗತಿ ಕಾಣಿಸಬೇಕೆಂದು ನಿನ್ನ ಮೇಲೆ ಆ್ಯಸಿಡ್ ಹಾಕಿದ್ದಿನಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಪರಾರಿಯಾಗಿದ್ದನು ಎಂದು ದೂರಿನಲ್ಲಿ ಶಶಿಕುಮಾರ್‌ ಉಲ್ಲೇಖಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಗಾಯಾಳು ಶಶಿಕುಮಾರ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಶೀಲ ಶಂಕಿಸಿ ತನ್ನ ಪ್ರಿಯತಮೆ ಮಗನ ಚಾಕುವಿಂದ ಇರಿದು, ಸುತ್ತಿಗೆಯಿಂದ ಹೊಡೆದು ಹತ್ಯೆ
ಹಕ್ಕಿಜ್ವರಕ್ಕೆ ಮೊದಲ ದೇಶಿ ಲಸಿಕೆ