ಕನ್ನಡಪ್ರಭ ವಾರ್ತೆ ಮಂಡ್ಯ
ಇಂಡುವಾಳು ಗ್ರಾಪಂ ಹಿಂದಿನ ಪಿಡಿಒ ಎ.ಎಸ್.ಸಿದ್ದರಾಜು, ಹಿಂದಿನ ಪ್ರಭಾರಿ ಪಿಡಿಒ ಆಗಿದ್ದ ದಯಾನಂದ, ಗ್ರೇಡ್-೧ ಕಾರ್ಯದರ್ಶಿ ಎಸ್.ಮರಿಲಿಂಗಯ್ಯ, ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಎಚ್.ಆರ್.ರಾಣಿ ಅಮಾನತುಗೊಂಡವರು.
ಕಳೆದ ವರ್ಷ ಮೇ ೨೬ರಂದು ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಇಂಡುವಾಳು ಗ್ರಾಪಂಗೆ ಭೇಟಿ ನೀಡಿ ಪರಿಶೀಲಿಸಿದ್ದ ಸಮಯದಲ್ಲಿ ಗಮನಿಸಿದ ನ್ಯೂನತೆಗಳ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕರ್ತವ್ಯನಿರ್ವಹಿಸಿರುವ ಅಧಿಕಾರಿ-ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸೂಚಿಸಿದ್ದರು.ನಂತರದಲ್ಲಿ ತನಿಖೆ ನಡೆಸಿದ ತಂಡ ನೀಡಿದ ವರದಿಯಲ್ಲಿ ೧ ಏಪ್ರಿಲ್ ೨೦೨೧ರಿಂದ ೨೫ ಮೇ೨೦೨೫ರವರೆಗೆ ಇಂಡುವಾಳು ಗ್ರಾಪಂನಲ್ಲಿ ವಿರಿಸಿರುವ ಒಟ್ಟು ೧೯೨೯ ಇ-ಸ್ವತ್ತು ಕಡತಗಳಲ್ಲಿ ೮೫ ಕಡತಗಳು ಮಾತ್ರ ಕ್ರಮಬದ್ಧವಾಗಿದ್ದು, ಉಳಿದ ೧೮೪೪ ಇ-ಸ್ವತ್ತು ಕಡತಗಳು ಕ್ರಮಬದ್ಧವಾಗಿಲ್ಲದಿರುವುದು ಕಂಡುಬಂದಿತ್ತು.
ನೌಕರರು ಅಮಾನತ್ತಿನಲ್ಲಿರುವಾಗ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ೧೯೫೮ರ ನಿಯಮ ೯೮ರ ಅನ್ವಯ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ. ಇವರು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡುವಂತಿಲ್ಲವೆಂದು ಸೂಚಿಸಿದ್ದಾರೆ.