ಆತ್ಮ*ತ್ಯೆ ಪ್ರಕರಣದಲ್ಲಿ ಬೆಂಗ್ಳೂರಿಗೆ 2ನೇ ಸ್ಥಾನ ದಿಲ್ಲಿಗೆ ಮೊದಲ ಸ್ಥಾನ

Published : May 09, 2026, 10:38 AM IST
Dead Body

ಸಾರಾಂಶ

2024ರಲ್ಲಿ ದೇಶದಲ್ಲಿ ನಡೆದ ಆತ್ಮ*ತ್ಯೆ ಪ್ರಕರಣಗಳಲ್ಲಿ ರಾಷ್ಟ್ರರಾಜಧಾನಿ ದೆಹಲಿ ಮೊದಲ ಸ್ಥಾನದಲ್ಲಿದ್ದು, ಇಲ್ಲಿ 2905 ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ. ಸಿಲಿಕಾನ್‌ ಸಿಟಿ ಬೆಂಗಳೂರು 2ನೇ ಸ್ಥಾನದಲ್ಲಿದ್ದು 2403 ಜನರು ಆತ್ಮ*ತ್ಯೆ ಮಾಡಿಕೊಂಡಿದ್ದಾರೆ ಎಂದು ಸರ್ಕಾರಿ ಅಂಕಿ-ಅಂಶ ಹೇಳಿದೆ.

ನವದೆಹಲಿ: 2024ರಲ್ಲಿ ದೇಶದಲ್ಲಿ ನಡೆದ ಆತ್ಮ*ತ್ಯೆ ಪ್ರಕರಣಗಳಲ್ಲಿ ರಾಷ್ಟ್ರರಾಜಧಾನಿ ದೆಹಲಿ ಮೊದಲ ಸ್ಥಾನದಲ್ಲಿದ್ದು, ಇಲ್ಲಿ 2905 ಆತ್ಮ*ತ್ಯೆ ಘಟನೆ ಬೆಳಕಿಗೆ ಬಂದಿದೆ. ಸಿಲಿಕಾನ್‌ ಸಿಟಿ ಬೆಂಗಳೂರು 2ನೇ ಸ್ಥಾನದಲ್ಲಿದ್ದು 2403 ಜನರು ಆತ್ಮ*ತ್ಯೆ ಮಾಡಿಕೊಂಡಿದ್ದಾರೆ ಎಂದು ಸರ್ಕಾರಿ ಅಂಕಿ-ಅಂಶ ಹೇಳಿದೆ. 

53 ನಗರಗಳಲ್ಲಿ ಸಮೀಕ್ಷೆ ನಡೆಸಿ ವರದಿ

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ದೇಶದ ಪ್ರಮುಖ 53 ನಗರಗಳಲ್ಲಿ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದೆ. ಈ ಪ್ರಕಾರ 2905 ಆತ್ಮ*ತ್ಯೆ ಪ್ರಕರಣಗಳೊಂದಿಗೆ ದೆಹಲಿ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು 2403 ಘಟನೆಗಳೊಂದಿಗೆ ಎರಡನೇ ಸ್ಥಾನ ಪಡೆದಿದೆ. ಮುಂಬೈನಲ್ಲಿ 1406 ಕೇಸ್‌ ದಾಖಲಾಗಿದೆ.

ಮರಣ ದರದಲ್ಲಿ ಬೆಂಗಳೂರು ನಂ.1:

ಆದರೆ ಜನಸಂಖ್ಯೆಗೆ ಅನುಗುಣವಾಗಿ ಈ ನಗರಗಳ ಮರಣ ದರವನ್ನು (ಪ್ರತಿ 1 ಲಕ್ಷ ಜನಸಂಖ್ಯೆಗೆ) ಗಮನಿಸಿದರೆ ಬೆಂಗಳೂರು ಶೇ.16.7 ದರದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ದೆಹಲಿ ಶೇ.13.2 ಮರಣ ದರದೊಂದಿಗೆ 2ನೇ ಸ್ಥಾನದಲ್ಲಿದೆ. ಆದರೆ ಈ ಎರಡು ಪ್ರಮುಖ ನಗರಗಳಲ್ಲಿ 2023ಕ್ಕೆ ಹೋಲಿಸಿದರೆ ಆತ್ಮ*ತ್ಯೆ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. 

ಮಹಿಳೆಯರಿಗೆ ಹೋಲಿಸಿದರೆ ಪುರುಷರೇ ಹೆಚ್ಚು ಆತ್ಮಹತ್ಯೆ ಶರಣಾಗಿದ್ದು, ಕೌಟುಂಬಿಕ ಸಮಸ್ಯೆ, ನಿರುದ್ಯೋಗ ಪ್ರಮುಖ ಕಾರಣ ಎಂದು ವರದಿ ಹೇಳಿದೆ. ಇನ್ನು ಆತ್ಮ*ತ್ಯೆ ಮಾಡಿಕೊಂಡವರಲ್ಲಿ ಹೆಚ್ಚಿನವರು ವಿವಾಹಿತರು ಎಂದು ಅಂಕಿ ಅಂಶ ಹೇಳಿದ್ದು, ದೆಹಲಿಯಲ್ಲಿ ಒಟ್ಟು 1616 ವಿವಾಹಿತರು ಸಾವಿಗೆ ಶರಣಾಗಿದ್ದಾರೆ. ಅದರಲ್ಲಿ 1162 ಪುರುಷರೇ ಇದ್ದಾರೆ ಎಂದಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಪೌಲ್ಟ್ರಿ ಫೀಡ್ಸ್ ಜತೆ ಟ್ರಕ್ಸ್‌ನಲ್ಲಿ ಗಾಂಜಾಸಾಗಾಟ: 1.25 ಕೋಟಿ ಮಾಲು ವಶ
ಹಣ ವರ್ಗಾವಣೆ : ಗೇಮ್ಸ್‌ ಕ್ರಾಫ್ಟ್‌ ಕಂಪನಿಯ ಮೂರು ಮಂದಿ ಬಂಧನ