ಜಮ್ಮು: ಪಾಕಿಸ್ತಾನದಿಂದ ನಡೆದ ಅಪ್ರಚೋದಿತ ಶೆಲ್ ದಾಳಿಯಲ್ಲಿ ಭಾರತೀಯ ಗಡಿ ಭದ್ರತಾ ಪಡೆಯ ಹೆಡ್ ಕಾನ್ಸ್‌ಟೆಬಲ್ ಹುತಾತ್ಮರಾದ ಘಟನೆ ಗುರುವಾರ ಜಮ್ಮು ಕಾಶ್ಮೀರದಲ್ಲಿ ನಡೆದಿದೆ. ಇಲ್ಲಿನ ಅಂತಾರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನ ರೇಂಜರ್ಸ್ ಪಡೆ ಬುಧವಾರ ತಡರಾತ್ರಿ ಅಪ್ರಚೋದಿತ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿದೆ. ಈ ದಾಳಿಯಲ್ಲಿ ಮಿಜೋರಂನ ಐಜ್ವಾಲ್ ಮೂಲದ ಲಾಲ್ ಫಾಮ್ ಕಿಮಾ ಗಾಯಗೊಂಡಿದ್ದರು. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಸೇನೆ ತಿಳಿಸಿದೆ. ಇತ್ತ ದಕ್ಷಿಣ ಕಾಶ್ಮೀರ ಜಿಲ್ಲೆಯಲ್ಲಿ ಸೇನೆ ನಡೆಸಿದ ಕಾರ್ಯಚರಣೆಯಲ್ಲಿ ‘ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್)’ ಎಂಬ ಉಗ್ರ ಸಂಘಟನೆಯ ಉಗ್ರ ಮೈಸರ್ ಅಹ್ಮದ್ ದಾರ್ ಹತನಾಗಿದ್ದಾನೆ.